60 ವರ್ಷದ ಅಂಕಲ್​ಗೆ ಹುಟ್ತು ಮದುವೆ ಆಸೆ; ಮದುವೆಯಾಗಲು ಬಂದಿದ್ದ ಆಂಟಿ ತಾಳಿ, ಆಭರಣ ಸಮೇತ ಎಸ್ಕೇಪ್‌

ಒಂಟಿತನದಿಂದ ಹೊರಬರಲು ಮದುವೆಯಾಗೋಕೆ ಹೊರಟಿದ್ದ ನಂಜುಂಡಪ್ಪ, ಆಂಟಿಯಿಂದ ಮೋಸ ಹೋಗಿದ್ರೆ, ಮದುವೆಯಾಗ್ತೀನಿ ಅಂತಾ ಬಂದಿದ್ದ ಚಂದ್ರಿಕಾ ಆಭರಣ ಬಟ್ಟೆಯೊಂದಿಗೆ ಜೂಟ್‌ ಆಗಿದ್ದಾರೆ.

60 ವರ್ಷದ ಅಂಕಲ್​ಗೆ ಹುಟ್ತು ಮದುವೆ ಆಸೆ; ಮದುವೆಯಾಗಲು ಬಂದಿದ್ದ ಆಂಟಿ ತಾಳಿ, ಆಭರಣ ಸಮೇತ ಎಸ್ಕೇಪ್‌
ನಂಜುಂಡಪ್ಪ

ಶಿವಮೊಗ್ಗ: ಆತನಿಗೆ 60 ವರ್ಷ ವಯಸ್ಸು. 7 ತಿಂಗಳ ಹಿಂದೆ ಪತ್ನಿಯನ್ನ ಕಳೆದುಕೊಂಡಿದ್ದ ಆತನಿಗೆ ಒಂಟಿತನ ಕಾಡ್ತಿತ್ತು. ಹೀಗಾಗಿ ಎರಡನೇ ಮದುವೆಯ ಆಸೆ ಕಂಡಿದ್ದ. ಕನ್ನಡ ಮ್ಯಾಟ್ರಿಮೊನಿಯಲ್ಲಿ ಆಂಟಿಯನ್ನೂ ನೋಡಿಕೊಡಿದ್ದ. ತಾಳಿ ಕಟ್ಟಿಸಿಕೊಳ್ಳಬೇಕಿದ್ದ ಆಂಟಿ ಅದೇ ತಾಳಿಯೊಂದಿಗೆ ಎಸ್ಕೇಪ್ ಆಗಿದ್ದಾಳೆ.

60 ವರ್ಷದ ಅಂಕಲ್‌ಗೆ ಮದುವೆಯ ಆಸೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಗ್ರಾಮದ 60 ವರ್ಷದ ನಂಜುಂಡಪ್ಪ ಕೃಷಿಕರಾಗಿದ್ದು, ಮದುವೆಯಾಗಿ 30 ವರ್ಷವಾಗಿದೆ. ಒಂದು ಗಂಡು ಎರಡು ಹೆಣ್ಣು ಮಕ್ಕಳಿದ್ದೂ ಎಲ್ರಿಗೂ ಮದುವೆಯಾಗಿ ಮಕ್ಕಳಿವೆ. ಈ ನಡುವೆ 7 ತಿಂಗಳ ಹಿಂದೆ ನಂಜುಂಡಪ್ಪನ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ರು. ಆ ಬಳಿಕ ನಂಜುಂಡಪ್ಪನಿಗೆ ಒಂಟಿತನ ಕಾಡೋಕೆ ಶುರುವಾಗಿತ್ತು. ಹೀಗಾಗಿ ಮತ್ತೊಂದು ಮದುವೆಯಾಗಲು ನಿರ್ಧರಿಸಿದ ನಂಜುಂಡಪ್ಪ, ಈ ಇಳಿವಯಸ್ಸಿನಲ್ಲೂ ಕನ್ನಡ ಮ್ಯಾಟ್ರಿಮೊನಿ ಮೊರೆ ಹೋಗಿದ್ದ.

ಶಿವಮೊಗ್ಗದ ಸವಳಂಗ ರಸ್ತೆಯಲ್ಲಿರೋ ಕನ್ನಡ ಮ್ಯಾಟ್ರಿಮೊನಿಯಲ್ಲಿ ಮೂರುವರೆ ಸಾವಿರ ಹಣ ಕೊಟ್ಟು ನೋಂದಣಿ ಮಾಡಿಕೊಂಡಿದ್ದ. ಆ ಬಳಿಕ ಬೆಂಗಳೂರಿನ ಯಲಹಂಕದ ಚಂದ್ರಿಕಾ ಅನ್ನೋ ಮಹಿಳೆ ನಂಜುಂಡಪ್ಪನನ್ನ ಒಪ್ಪಿಕೊಂಡು ಮದುವೆಗೆ ಗ್ರೀನ್‌ಸಿಗ್ನಲ್‌ ಕೊಟ್ಟಿದ್ಲು. ಹೀಗೆ ಮದುವೆಯಾಗ್ತೀನಿ ಅಂತಾ ಬಂದಿದ್ದ ಚಂದ್ರಿಕಾ ಆಕಾಶದಲ್ಲಿನ ಚಂದ್ರನನ್ನ ತೋರಿಸಿ ಎಸ್ಕೇಪ್‌ ಆಗಿದ್ದಾಳೆ.

ಅಷ್ಟಕ್ಕೂ ಚಂದ್ರಿಕಾ ಗ್ರೀನ್‌ಸಿಗ್ನಲ್‌ ಕೊಡ್ತಿದ್ದಂತೆ ಮದುವೆಗೆ ದಿನಾಂಕ ಕೂಡಾ ಫಿಕ್ಸ್‌ ಆಗಿತ್ತು. ಅದ್ರಂತೆ ನವೆಂಬರ್‌ 15 ರಂದು ಸಿಗಂದೂರು ದೇವಸ್ಥಾನದಲ್ಲಿ ಮದುವೆಗೆ ಸಿದ್ದತೆ ನಡೆದಿತ್ತು. ಸ್ನೇಹಿತರನ್ನ ಕರೆದುಕೊಂಡು ಹೋಗಿದ್ದ ನಂಜುಂಡಪ್ಪ, ಹಸೆಮಣೆ ಏರೋಕೆ ಸಿದ್ದವಾಗಿದ್ದ. ಆದ್ರೆ ಅಲ್ಲಿ ಮದುವೆಗೆ ಅವಕಾಶ ಇಲ್ಲ ಅಂತಾ ಹೇಳಿದ್ರಂತೆ. ಹೀಗಾಗಿ ವಾಪಸ್ ಶಿವಮೊಗ್ಗಕ್ಕೆ ಬಂದಿದ್ರು . ಶಿವಮೊಗ್ಗ ಬಸ್‌ ನಿಲ್ದಾಣದಲ್ಲಿ ಬೈಕ್‌ ತರ್ತೀನಿ ಅಂತಾ ನಂಜುಂಡಪ್ಪ ಹೋದ್ರೆ, ಊಟ ಮಾಡಿ ಬರ್ತೀನಿ ಅಂತಾ ಚಂದ್ರಿಕಾ ಹೋಗಿದ್ಲು. ಆದ್ರೆ ವಾಪಸ್‌ ಮಾತ್ರ ಬಂದಿಲ್ಲ. ಮದುವೆಗೆ ತಂದಿದ್ದ ಚಿನ್ನದ ತಾಳಿ, 4 ಬೆಳ್ಳಿ ಕಾಲುಂಗುರು, 2 ಬೆಳ್ಳಿ ಕಾಲು ಚೈನು, ಎರಡು ಬೆಳ್ಳಿ ಕೈ ಬಳೆ, ರೇಷ್ಮೆ ಸೀರೆಯೊಂದಿಗೆ ಜೂಟ್‌ ಆಗಿದ್ದಾಳೆ.

ಒಟ್ನಲ್ಲಿ ಒಂಟಿತನದಿಂದ ಹೊರಬರಲು ಮದುವೆಯಾಗೋಕೆ ಹೊರಟಿದ್ದ ನಂಜುಂಡಪ್ಪ, ಆಂಟಿಯಿಂದ ಮೋಸ ಹೋಗಿದ್ರೆ, ಮದುವೆಯಾಗ್ತೀನಿ ಅಂತಾ ಬಂದಿದ್ದ ಚಂದ್ರಿಕಾ ಆಭರಣ ಬಟ್ಟೆಯೊಂದಿಗೆ ಜೂಟ್‌ ಆಗಿದ್ದಾರೆ. ಇಂಥಾ ಕಿಲಾಡಿಗಳಿಗೆ ಶಿವಮೊಗ್ಗ ಪೊಲೀಸರು ಬಿಸಿ ಮುಟ್ಟಿಸಬೇಕಿದೆ.

ವರದಿ: ಬಸವರಾಜ್ ಯರಗಣವಿ, ಟಿವಿ9 ಶಿವಮೊಗ್ಗ

ಇದನ್ನೂ ಓದಿ: S R Morey death: 4 ಬಾರಿ ಶಾಸಕ, ಮಾಜಿ ಸಚಿವ ಎಸ್. ಆರ್‌. ಮೋರೆ‌ ಜನ್ಮದಿನದಂದೇ ವಿಧಿವಶ

Click on your DTH Provider to Add TV9 Kannada