ಬೆಂಗಳೂರು: ಪ್ರೀತಿ ನಿರಾಕರಿಸಿದ ಕಾರಣಕ್ಕೆ ಮನನೊಂದು ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜನವರಿ 25 ರಂದು ಬೆಂಗಳೂರಿನ ಸಂಜಯನಗರದಲ್ಲಿ ನಡೆದಿದೆ. ಉತ್ತರಪ್ರದೇಶದ ಲಖನೌ ಮೂಲದ ಪ್ರಿಯಾಂನ್ಷಿ ಎಂಬ ಯುವತಿ ನಗರದ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ದಂತ ವೈದ್ಯೆ ಆಗಿದ್ದಳು. ಅದೇ ಆಸ್ಪತ್ರೆಯ ವೈದ್ಯ ಸುಮಿತ್ ಎಂಬಾತನನ್ನ ಪ್ರೀತಿಸುತ್ತಿದ್ದ ಪ್ರಿಯಾಂನ್ಷಿ ತ್ರಿಪಾಠಿ, ತನ್ನ ಪ್ರೀತಿಯನ್ನ ಹೇಳಿಕೊಂಡಿದ್ದಾಳೆ ಆದರೆ ಇದಕ್ಕೆ ವೈದ್ಯ ಸುಮಿತ್ ನಿರಾಕರಣೆ ಮಾಡಿದ್ದಾನೆ. ಇದರಿಂದ ಮನನೊಂದ ಪ್ರಿಯಾಂನ್ಷಿ ತ್ರಿಪಾಠಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮಗಳ ಆತ್ಮಹತ್ಯೆ ಕುರಿತು ಆಕೆಯ ತಂದೆ ಪೊಲೀಸ್ಗೆ ದೂರು ನೀಡಿದ್ದು, ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 306 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದರು. ನನ್ನ ಮಗಳಿಗೆ ಸುಮೀತ್ ಡ್ರಿಂಕ್ಸ್ ಮಾಡು, ಸಿಗರೇಟ್ ಸೇದು ಎಂದು ಒತ್ತಾಯಿಸುತ್ತ ಹಿಂಸೆ ಮಾಡುತ್ತಿದ್ದು, ಇದರ ಜೊತೆಗೆ ಹಣಕ್ಕಾಗಿ ಯಾವಾಗಲೂ ಪೀಡಿಸುತ್ತಿದ್ದನಂತೆ. ಹೀಗಾಗಿ ಹಲವು ಬಾರಿ ಕರೆ ಮಾಡಿ ಮಗಳಿಗೆ ತೊಂದರೆ ಮಾಡಬೇಡ ಎಂದು ಮನವಿ ಮಾಡಿದ್ದೆ ಎಂದು ಮೃತ ಯುವತಿಯ ತಂದೆ ಹೇಳಿದ್ದರು. ಆದರೆ ಪೊಲೀಸರ ತನಿಖೆಯ ನಂತರ ಅಸಲಿ ಸಂಗತಿ ಹೊರಬಿದ್ದಿದ್ದು, ಯುವತಿಯೇ ಆತನನ್ನ ಪ್ರೀತಿಸುತ್ತಿದ್ದು ಆತ ನಿರಾಕರಿಸಿದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಬಳಿಕ ಪೊಲೀಸರ ಸಂಪರ್ಕಿಸಿದ್ದ ವೈದ್ಯೆ ಪ್ರಿಯಾಂನ್ಷಿ ಪೊಷಕರು ಕೊಟ್ಟ ದೂರು ವಾಪಾಸ್ ಪಡೆಯೊದಾಗಿ ಹೇಳಿದ್ದರು. ಆದರೆ ಪ್ರಕರಣದ ತನಿಖೆ ಹಿನ್ನಲೆ ಎಫ್ಐಆರ್ ದಾಖಲು ಮಾಡಿದ್ದ ಕಾರಣ ಪೊಲೀಸರು ಯುವತಿ ಪ್ರೇಮವೈಫಲ್ಯ ಹಿನ್ನಲೆ ಆತ್ಮಹತ್ಯೆ ಮಾಡಿಕೊಂಡಿರುವುದು ವರದಿ ನೀಡಿದ್ದಾರೆ.
ಹಡಲಗೇರಿಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ನೀರುಪಾಲು
ವಿಜಯಪುರ: ಬಟ್ಟೆ ತೊಳೆಯಲು ಹೋಗಿದ್ದ ರಸೂಲ್ ಮಾಲದಾರ(26), ಸಮೀವುಲ್ಲಾ ಗೊಳಸಂಗಿ(10) ಎಂಬಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹಡಲಗೇರಿ ಗ್ರಾಮದಲ್ಲಿ ನಡೆದಿದೆ. ಬಾಗಲಕೋಟೆ ಜಿಲ್ಲೆ ರಬಕವಿ–ಬನಹಟ್ಟಿ ತಾಲೂಕಿನ ಚಿಮ್ಮಡ ನಿವಾಸಿಗಳಾದ ಇವರು ಮುದ್ದೇಬಿಹಾಳದಲ್ಲಿ ಚಿಕನ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದರು.ಇನ್ನು ಈ ಘಟನೆಯು ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:52 pm, Thu, 2 February 23