ಬೆಂಗಳೂರು, ಫೆ.18: ನಗರದ ಬನಶಂಕರಿ ದೇವಸ್ಥಾನ (Banashankari Temple) ಎಂದರೆ ಭಕ್ತಾದಿಗಳಿಗೆ ಎಲ್ಲಿಲ್ಲದ ಪ್ರೀತಿ ಹಾಗೂ ಭಕ್ತಿ. ಹೀಗಾಗಿ ಬೆಂಗಳೂರು ಅಷ್ಟೇ ಅಲ್ಲದೇ ಬೇರೆ – ಬೇರೆ ಭಾಗಗಳಿಂದ ಬಂದು ತಾಯಿಯ ದರ್ಶನ ಪಡೆಯುತ್ತಾರೆ. ಇನ್ನು ಬನಶಂಕರಿ ದೇವಸ್ಥಾನದಲ್ಲಿ ಅಮ್ಮನವರ ದೇವಸ್ಥಾನ ಎಷ್ಟು ಪ್ರಸಿದ್ದಿ ಪಡೆದಿದಿಯೋ ಅಷ್ಟೇ ದೇವಸ್ಥಾನದಲ್ಲಿರುವ ಅಂಜನೇಯ ದೇವಸ್ಥಾನವು ಕೂಡ ಅಷ್ಟೇ ಪ್ರಸಿದ್ದಿ ಪಡೆದಿದೆ. ಸಧ್ಯ ಅಂಜನೇಯ ದೇವಸ್ಥಾನವನ್ನ ಅಭಿವೃದ್ಧಿ ಪಡಿಸುವ ಸಲುವಾಗಿ ಕಳೆದ 9 ತಿಂಗಳ ಹಿಂದೆ ಅಂಜನೇಯ ದೇವಸ್ಥಾನವನ್ನ ಡೆಮಾಲೀಷನ್ ಮಾಡಲಾಗಿತ್ತು. ಇದೀಗ ಹಲವು ತಿಂಗಳ ಬಳಿಕ ದೇವಸ್ಥಾನದ ಕೆಲಸ ಆರಂಭವಾಗಿದೆ.
ಅಂಜನೇಯ ದೇವಸ್ಥಾನವನ್ನ ಕಳೆದ 8 ತಿಂಗಳ ಹಿಂದೆ ಡೆಮಾಲಿಶ್ ಮಾಡಲಾಗಿತ್ತು. ಆದಾದ ಬಳಿಕ ದೇವಸ್ಥಾನ ನಿರ್ಮಾಣಕ್ಕೆ ಮುಜುರಾಯಿ ಇಲಾಖೆಯಿಂದ ಹಣ ಸ್ಯಾಂಕ್ಷನ್ ಆಗಿರ್ಲಿಲ್ಲ. ಇದೀಗ ದೇವಸ್ಥಾನ ಕಾಮಗಾರಿ ಮುಜುರಾಯಿ ಇಲಾಖೆ ಪರ್ಮಿಷನ್ ನೀಡಿದ್ದು, ಒಟ್ಟು 9 ಕೋಟಿ 96 ಲಕ್ಷದಷ್ಟು ಹಣದಿಂದ ದೇವಸ್ಥಾನ ನಿರ್ಮಾಣದ ಕೆಲಸ ನಡೆಯುತ್ತಿದೆ. ಇನ್ನು ದೇವಸ್ಥಾನವು
ದ್ರಾವಿಡ ಶೈಲಿಯಲ್ಲಿ ಮೂಡಿ ಬರುತ್ತಿದ್ದು, ವಿಶೇಷವಾಗಿ 38 ವಿಶೇಷ ಕಂಬಗಳನ್ನ ನಿರ್ಮಿಸಲಾಗುತ್ತಿದೆಯಂತೆ. ಈ ಅಂಜನೇಯ ಪ್ರತಿಮೆಯನ್ನ ಬದಲಿಸಿ ದೊಡ್ಡ ಮಟ್ಟದ ಪ್ರತಿಮೆಯನ್ನ ಕೆತ್ತಿಸಲು ಚಿಂತನೆ ನಡೆದಿದ್ದು, ಈ ಪ್ರತಿಮೆಯನ್ನ
ರಾಮಮಂದಿರದ ಬಾಲರಾಮನನ್ನ ಕೆತ್ತಿರುವ ಅರುಣ್ ಯೋಗರಾಜ್ ರಿಂದಲೇ ಮೂರ್ತಿ ಕೆತ್ತಿಸಲೂ ದೇವಸ್ಥಾನದ ಆಡಳಿತ ಮಂಡಳಿ ಒಂದು ಸುತ್ತಿನ ಮಾತುಕತೆ ನಡೆಸಿದೆ. ಈಗಾಗಲೇ ದೇವಸ್ಥಾನದ ಕೆಲಸವು ಆರಂಭ ಮಾಡಿದೆ. ಇನ್ನು ಒಂದು ವರ್ಷದಲ್ಲಿ ದೇವಸ್ಥಾನ ನಿರ್ಮಾಣದ ಕಲಸ ಮುಗಿಯಲಿದ್ದು, ದೊಡ್ಡ ಮಟ್ಟದಲ್ಲಿ ದೇವಸ್ಥಾನ ನಿರ್ಮಿಸಲು ಆಡಳಿತ ಮಂಡಳಿ ಸಜ್ಜಾಗಿದೆ.
ಇದನ್ನೂ ಓದಿ:4 ಲಕ್ಷ ದೇವಸ್ಥಾನಗಳಿವೆ, ಅವುಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಿಗೊಳಿಸಲು ಸಂಘಟಿತರಾಗಬೇಕು- ಉಡುಪಿ ಸಮಾವೇಶ
ಇನ್ನು ಈ ಕುರಿತು ಮಾತನಾಡಿದ ಭಕ್ತಾದಿಗಳು, ‘ಬನಶಂಕರಿ ದೇವಸ್ಥಾನ ಅಂದರೆ ನಮಗೆ ತುಂಬ ನಂಬಿಕೆ. ಅದೇ ರೀತಿ ಅಂಜನೇಯನ ಮೇಲೂ ಇದೆ. ಬನಶಂಕರಿ ದರ್ಶನ ಮಾಡಿ ಅಂಜನೇಯನ ದರ್ಶನ ಮಾಡುತ್ತಿದ್ವಿ. ಆದ್ರೆ, ದೇವಸ್ಥಾನದ ಡೆಮಾಲಿಷನ್ ಆದಾ ನಂತರ ನಾವು ದರ್ಶನ ಮಾಡುವುದಕ್ಕೆ ಸಾಧ್ಯ ಆಗಿರಲಿಲ್ಲ. ಈಗ ದೇವಸ್ಥಾನದ ಕೆಲಸ ಆರಂಭವಾಗಿದೆ. ತುಂಬ ಖುಷಿಯಾಗುತ್ತಿದೆ ಎಂದು ಹೇಳಿದರು. ಒಟ್ನಲ್ಲಿ, ಎಂಟು ತಿಂಗಳಿಂದ ನೆನೆಗುದಿಗೆ ಬಿದ್ದಿದ್ದ ದೇವಸ್ಥಾನದ ಕೆಲಸ ಸಧ್ಯ ಆರಂಭವಾಗಿದ್ದು, ಇನ್ನು ಒಂದು ವರ್ಷದ ಒಳಗೆ ಕೆಲಸ ಮುಗಿಯಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ