4 ಲಕ್ಷ ದೇವಸ್ಥಾನಗಳಿವೆ, ಅವುಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಿಗೊಳಿಸಲು ಸಂಘಟಿತರಾಗಬೇಕು- ಉಡುಪಿ ಸಮಾವೇಶ
ಕೇವಲ ದೇವಸ್ಥಾನಗಳನ್ನು ಕಟ್ಟಿದರೆ ಸಾಲದು ಅದನ್ನು ಉಳಿಸುವ ಕೆಲಸ ಆಗಬೇಕು. ಈ ಮೂಲಕ ನಮ್ಮ ಸಂಸ್ಕೃತಿಯ ರಕ್ಷಣೆ ಆಗಬೇಕು ಎಂದು ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದ ಸ್ವಾಮೀಜಿ ಹೇಳಿದರು. ದೇವಸ್ಥಾನ ಮತ್ತು ಮಂದಿರಗಳ ರಾಜ್ಯ ಸಂಯೋಜಕ ಮೋಹನ ಗೌಡ ಈ ವೇಳೆ ಕೆಲ ಪ್ರಮುಖ ಘೋಷಣೆಗಳನ್ನು ಮಾಡಿದರು.
ಉಡುಪಿ, ಫೆಬ್ರವರಿ 13: ಸರಕಾರದ ನಿಯಂತ್ರಣದಲ್ಲಿರುವ ದೇವಸ್ಥಾನಗಳನ್ನು ( Hindu temples) ಮುಜರಾಯಿ ಇಲಾಖೆ (Muzrai Department) ಆಡಳಿತದಿಂದ ಮುಕ್ತಿಗೊಳಿಸಿ ಅವುಗಳ ರಕ್ಷಣೆಗೆ ಸಂಘಟಿತರಾಗುವ ದೃಷ್ಟಿಯಿಂದ ಚರ್ಚಿಸಲು ಉಡುಪಿ (Udupi) ಜಿಲ್ಲಾ ಮಟ್ಟದ ದೇವಸ್ಥಾನಗಳ ಪ್ರಮುಖರ ಸಮಾವೇಶವು ನಿನ್ನೆ ಸೋಮವಾರ ನಡೆಯಿತು. ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಈ ಸಮಾವೇಶವನ್ನು ಉದ್ಘಾಟಿಸಿದರು.
ಕೇವಲ ದೇವಸ್ಥಾನಗಳನ್ನು ಕಟ್ಟಿದರೆ ಸಾಲದು ಅದನ್ನು ಉಳಿಸುವ ಕೆಲಸ ಆಗಬೇಕು. ಈ ಮೂಲಕ ನಮ್ಮ ಸಂಸ್ಕೃತಿಯ ರಕ್ಷಣೆ ಆಗಬೇಕು ಎಂದು ಸ್ವಾಮೀಜಿ ಹೇಳಿದರು. ದೇವಸ್ಥಾನ ಮತ್ತು ಮಂದಿರಗಳ ರಾಜ್ಯ ಸಂಯೋಜಕ ಮೋಹನ ಗೌಡ ಈ ವೇಳೆ ಕೆಲ ಪ್ರಮುಖ ಘೋಷಣೆಗಳನ್ನು ಮಾಡಿದರು.
ಬ್ರಿಟಿಷರ ಅವಧಿಯಲ್ಲಿಯೇ ದೇವಸ್ಥಾನಗಳ ನಿಯಂತ್ರಣಕ್ಕೆ ಮದ್ರಾಸ್ ಎಂಡೋಮೆಂಟ್ ಕಾಯ್ದೆ ಜಾರಿಗೆ ತರಲಾಗಿದೆ. ಇಂದು ದೇಶದಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ದೇವಸ್ಥಾನಗಳಿದ್ದು ಇವುಗಳನ್ನು ಬೇರೆ ಬೇರೆ ಕಾಯ್ದೆಗಳ ಮೂಲಕ ನಿಯಂತ್ರಿಸಲಾಗುತ್ತಿದೆ. ನಮಗೆ ಸ್ವಾತಂತ್ರ್ಯ ಸಿಕ್ಕಿದರೂ ಸಹ ನಮ್ಮ ದೇವಸ್ಥಾನಗಳಿಗೆ ಸ್ವಾತಂತ್ರ್ಯ ಲಭಿಸಿಲ್ಲ.
ಇದನ್ನೂ ಓದಿ: ಅಯೋಧ್ಯೆಯಲ್ಲಿ ಬಾಲರಾಮನಿಗೆ ರಜತ ಕಲಶ ಅಭಿಷೇಕ ಸೇವೆ ಮಾಡಿಸಬೇಕಾ? ಹಾಗಾದರೆ ಈ ಉದಾತ್ತ ಸಮಾಜ ಕಾರ್ಯ ನಡೆಸಿಕೊಡಿ
ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣಗಳಿಂದ ಮುಕ್ತಿಗೊಳಿಸಲು ನಾವೆಲ್ಲ ಸಂಘಟಿತರಾಗಬೇಕು. ಮುಂದಿನ ದಿನಗಳಲ್ಲಿ ತಾಲೂಕು ಕೇಂದ್ರಗಳಲ್ಲಿಯೂ ಸಮಾವೇಶ ನಡೆಸಲಾಗುವುದು ಎಂದು ಮೋಹನ ಗೌಡ ಹೇಳಿದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:13 pm, Tue, 13 February 24



