ಸದನದಲ್ಲಿ ಸದ್ದು ಮಾಡಿದ ಉಡುಪಿಯ ಪರಶುರಾಮ ಥೀಮ್ ಪಾರ್ಕ್ ಹಗರಣ
ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಿರ್ಮಾಣಗೊಂಡ ಪರಶುರಾಮ ಥೀಮ್ ಪಾರ್ಕ್ನಲ್ಲಿ ಪರಶುರಾಮನ ಕಂಚಿನ ಪ್ರತಿಮೆಯಲ್ಲಿ ಅರ್ಧ ಭಾಗ ಕಂಚು, ಇನ್ನರ್ಧ ಭಾಗ ಫೈಬರ್‌ನಲ್ಲಿ ನಿರ್ಮಾಣ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ವಿಚಾರ ಇಂದು ವಿಧಾನ ಪರಿಷತ್ ಅಧಿವೇಶನದಲ್ಲಿ ಸುದ್ದು ಮಾಡಿತು. ಸಚಿವ ಶಿವರಾಜ್ ತಂಗಡಗಿ ಹೇಳಿಕೆಗೆ ಬಿಜೆಪಿ ಸದಸ್ಯರು ಆಕ್ರೋಶ ಹೊರಹಾಕಿದರು.
ವಿಧಾನ ಪರಿಷತ್, ಫೆ.13: ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಿರ್ಮಾಣಗೊಂಡ ಪರಶುರಾಮ ಥೀಮ್ ಪಾರ್ಕ್ನಲ್ಲಿ (Parashurama Theme Park, Karkala) ಪರಶುರಾಮನ ಕಂಚಿನ ಪ್ರತಿಮೆಯಲ್ಲಿ ಅರ್ಧ ಭಾಗ ಕಂಚು, ಇನ್ನೂ ಅರ್ಧ ಭಾಗ ಫೈಬರ್‌ನಲ್ಲಿ ನಿರ್ಮಾಣ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ವಿಚಾರ ಇಂದು ವಿಧಾನ ಪರಿಷತ್ ಅಧಿವೇಶನದಲ್ಲಿ ಸುದ್ದು ಮಾಡಿತು. ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಹೇಳಿಕೆಗೆ ಬಿಜೆಪಿ (BJP) ಸದಸ್ಯರು ಆಕ್ರೋಶ ಹೊರಹಾಕಿದರು.
ಕಾರ್ಕಳದಲ್ಲಿ ಪರಶುರಾಮ ವಿಗ್ರಹ ದೋಷ ಪೂರಿತವಾಗಿರುವ ಬಗ್ಗೆ ವಿಧಾನ ಪರಿಷತ್ನಲ್ಲಿ ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಪ್ರಸ್ತಾಪ ಮಾಡಿದರು. ಅಲ್ಲದೆ, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಹಿಂದಿನ ಸರ್ಕಾರದಲ್ಲಾದ ಎಡವಟ್ಟನ್ನು ಸರ್ಕಾರ ಬಯಲು ಮಾಡಿದೆ ಎಂದರು.
ಪ್ರತಿಮೆ ನಿರ್ಮಾಣದಲ್ಲಿನ ಅಕ್ರಮದ ಬಗ್ಗೆ ಆ ಊರಿನ ಯುವಕರು ದೂರು ನೀಡಿದ್ದರು. ಪ್ರತಿಮೆ ಅರ್ಧ ಭಾಗ ಕಂಚು, ಇನ್ನರ್ಧ ಭಾಗ ಫೈಬರ್‌ನದ್ದಾಗಿತ್ತು. ಪರಶುರಾಮನ ಮೇಲೆ ಆ ಊರಿನ ಭಾಗದ ಜನರಿಗೆ ನಂಬಿಕೆ ಇದೆ. ಆದರೆ ದೇವರ ಹೆಸರು ಹೇಳಿ ಹಣ ಕಬಳಿಸುವ ಕೆಲಸ ಆಗಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: ವಿಧಾನಸಭೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಸುದ್ದು; ಬೆಟ್ಟಿಂಗ್ ಬ್ಯಾನ್ಗೆ ಪಕ್ಷಾತೀತವಾಗಿ ಒತ್ತಾಯಿಸಿದ ಶಾಸಕರು
ಈ ವೇಳೆ ಬಿಜೆಪಿ ಸದಸ್ಯರು ತನಿಖೆ ಮಾಡಿ, ಪೇಪರ್ನಲ್ಲಿರೋದನ್ನ ಹೇಳಬೇಡಿ ಎಂದರು. ಇದಕ್ಕೆ, ಇದು ನಮ್ಮ ಸರ್ಕಾರದಲ್ಲಿ ಆಗಿದ್ದಲ್ಲ, ಹಿಂದಿನ ಸರ್ಕಾರದಲ್ಲಿ ಆಗಿದ್ದು. ನ್ಯಾ.ನಾಗಮೋಹನ ದಾಸ್ ಸಮಿತಿ ಸ್ಥಳಕ್ಕೆ ಭೇಟಿ ನೀಡಿತ್ತು. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ದೂರು ನೀಡಿದ್ದರು ಎಂದು ತಂಗಡಗಿ ಹೇಳಿದಾಗ ಪ್ರಕರಣದ ಬಗ್ಗೆ ತನಿಖೆ ಮಾಡಿ ಎಂದು ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಹೇಳಿದರು.
ಮತ್ತೆ, ಬಿಜೆಪಿ ಅವಧಿಯಲ್ಲೇ ಆಗಿದ್ದು ಎಂದು ತಂಗಡಗಿ ಹೇಳಿದಾಗ ಬಿಜೆಪಿ ಸದಸ್ಯರು ಆಕ್ರೋಶ ಹೊರಹಾಕಿದರು. ಜವಾಬ್ದಾರಿಯಿಂದ ಹೇಳಿಕೆ ಕೊಡಿ ಎಂದು ಬಿಜೆಪಿ ಸದಸ್ಯರು ಹೇಳಿದರು. ದೇವರ ತಲೆ ಮೇಲೆ ಹೊತ್ತು ಅಂದರೆ ಏನರ್ಥ ಎಂದು ಕೇಶವ ಪ್ರಸಾದ್ ಹೇಳಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಭಾಪತಿ ಬಸವರಾಜ್ ಹೊರಟ್ಟಿ, ಎರಡೂ ಕಡೆಯ ಸದಸ್ಯರನ್ನ ಸಮಾಧಾನ ಮಾಡಿದರು.
ಪರಶುರಾಮ್ ಥೀಮ್ ಪಾರ್ಕ್ ಹಗರಣ ಸಿಐಡಿ ಹೆಗಲಿಗೆ
ಪರಶುರಾಮ್ ಪ್ರತಿಮೆ ನಿರ್ಮಾಣದಲ್ಲಾದ ಅಕ್ರಮದ ಬಗ್ಗೆ ಸಿಐಡಿ ತನಿಖೆ ಮಾಡಿಸುತ್ತೇವೆ ಎಂದು ಶಿವರಾಜ್ ತಂಗಡಗಿ ಹೇಳಿದರು. ಮಂಗಳೂರು ಭಾಗದವರು ಬಹಳ ದೈವ ಭಕ್ತರು. ಸಿಐಡಿ ತನಿಖೆಗೆ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧಾರ ಮಾಡಿದ್ದಾರೆ. ಸಿಐಡಿ ತನಿಖೆ ಮಾಡಿಸೇ ಮಾಡಿಸ್ತೇವೆ. ಕೆಳಗೆ ಕಂಚು, ಮೇಲೆ ಫೈಬರ್ ಇಟ್ಟ ಗುತ್ತಿಗೆದಾರರ ವಿಚಾರಣೆ ಮಾಡಲಾಗುತ್ತದೆ. ನಿಜವಾದ ಕಳ್ಳರಿಗೆ ಶಿಕ್ಷೆ ಕೊಡುತ್ತೇವೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ