AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದ ವಾಯುಗುಣಮಟ್ಟ: ಬೆಂಗಳೂರಿನ ವಿವಿಧೆಡೆ ಎಕ್ಯೂಐ ಸಾಧಾರಣ; ಕರಾವಳಿಯಲ್ಲಿ ಶುದ್ಧ ಗಾಳಿ

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ವಾಯು ಗುಣಮಟ್ಟ ಸಾಧಾರಣ ಮಟ್ಟದಲ್ಲಿದೆ. ಸಿಲ್ಕ್ ಬೋರ್ಡ್ ಮತ್ತು ಬಿಟಿಎಂ ಲೇಔಟ್‌ನಲ್ಲಿ ಎಕ್ಯೂಐ ಪ್ರಮಾಣ ಹೆಚ್ಚಾಗಿದ್ದು, ಮೈಸೂರು-ಮಂಗಳೂರಿನಲ್ಲಿ ವಾಯು ಸ್ಥಿತಿ ಉತ್ತಮವಾಗಿದೆ. ಉಸಿರಾಟದ ತೊಂದರೆ, ಆಸ್ತಮಾ ಹಾಗೂ ಅಲರ್ಜಿ ಇರುವ ಹಿರಿಯ ನಾಗರಿಕರು ಮತ್ತು ಮಕ್ಕಳು ಬೆಳಗಿನ ವೇಳೆ ಸಂಚರಿಸುವಾಗ ಮಾಸ್ಕ್ ಧರಿಸಲು ಆರೋಗ್ಯ ಇಲಾಖೆ ಸಲಹೆ ನೀಡಿದೆ.

ಕರ್ನಾಟಕದ ವಾಯುಗುಣಮಟ್ಟ: ಬೆಂಗಳೂರಿನ ವಿವಿಧೆಡೆ ಎಕ್ಯೂಐ ಸಾಧಾರಣ; ಕರಾವಳಿಯಲ್ಲಿ ಶುದ್ಧ ಗಾಳಿ
ಕರ್ನಾಟಕದ ವಾಯುಗುಣಮಟ್ಟ
ಭಾವನಾ ಹೆಗಡೆ
|

Updated on: Sep 30, 2026 | 6:41 AM

Share

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳ ಮಳೆಯಿಂದಾಗಿ ವಾಯು ಗುಣಮಟ್ಟ ಸಾಧಾರಣವಾಗಿದೆ.
  • ನಗರದ ವಿವಿಧ ಭಾಗಗಳಲ್ಲಿ ಸಿಲ್ಕ್ ಬೋರ್ಡ್ ಹೆಚ್ಚು ಎಕ್ಯೂಐ ದಾಖಲಿಸಿದೆ.
  • ಉಸಿರಾಟ ಸಮಸ್ಯೆಯಿರುವ ಹಿರಿಯರು ಮತ್ತು ಮಕ್ಕಳು ಮುನ್ನೆಚ್ಚರಿಕೆ ವಹಿಸುವುದು ಸೂಕ್ತವಾಗಿದೆ.

ಬೆಂಗಳೂರು, ಸೆಪ್ಟೆಂಬರ್ 30: ಕಳೆದ ಎರಡು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಪರಿಣಾಮವಾಗಿ ಇಂದು ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಸೂಚಿ ‘ಸಾಧಾರಣ’ಮಟ್ಟದಲ್ಲಿ ದಾಖಲಾಗಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ ಮಾಹಿತಿಯಂತೆ, ರಾಜ್ಯದ ನಗರಗಳಲ್ಲಿ ಗಾಳಿಯ ಗುಣಮಟ್ಟವು ತೃಪ್ತಿಕರವಾಗಿದ್ದರೂ, ಕೆಲ ಪ್ರದೇಶಗಳಲ್ಲಿ ಧೂಳಿನ ಕಣಗಳ ಪ್ರಮಾಣ ಹೆಚ್ಚಿರುವುದು ಕಂಡುಬಂದಿದೆ.

ಬೆಂಗಳೂರಿನಲ್ಲಿ ವಾಯು ಮಾಲಿನ್ಯದ ಸ್ಥಿತಿಗತಿ

ಇಂದು ಬೆಂಗಳೂರು ನಗರದ ಸರಾಸರಿ ಎಕ್ಯೂಐ ಮಟ್ಟ 70 ರಿಂದ 75 ರ ಆಸುಪಾಸಿನಲ್ಲಿದೆ. ಇದು ‘ಸಾಧಾರಣ’ ವಿಭಾಗಕ್ಕೆ ಸೇರುತ್ತದೆ.

  • ಬಿಟಿಎಂ ಲೇಔಟ್ ಹಾಗೂ ಸಿಕ್ ರಸ್ತೆಗಳು: ವಾಹನ ಸಂಚಾರ ದಟ್ಟಣೆ ಹೆಚ್ಚಿರುವ ಬಿಟಿಎಂ ಲೇಔಟ್ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ಪ್ರದೇಶಗಳಲ್ಲಿ ಎಕ್ಯೂಐ 85ಕ್ಕೂ ಹೆಚ್ಚು ದಾಖಲಾಗಿದೆ.
  • ಪೀಣ್ಯ ಹಾಗೂ ಹೆಬ್ಬಾಳ: ಕೈಗಾರಿಕಾ ಪ್ರದೇಶವಾದ ಪೀಣ್ಯ ಮತ್ತು ಹೆಬ್ಬಾಳ ಭಾಗದಲ್ಲಿ ಎಕ್ಯೂಐ ಸುಮಾರು 65 ರಿಂದ 72 ರಷ್ಟಿದೆ.
  • ಜಯನಗರ ಹಾಗೂ ಮಲ್ಲೇಶ್ವರಂ: ಇಲ್ಲಿ ಗಾಳಿಯ ಗುಣಮಟ್ಟ ತುಸು ಉತ್ತಮವಾಗಿದ್ದು, ಎಕ್ಯೂಐ 55 ರಿಂದ 65 ರ ನಡುವೆ ಇದೆ.

ನಗರದಲ್ಲಿ ಗಾಳಿಯಲ್ಲಿನ ಮುಖ್ಯ ಮಾಲಿನ್ಯಕಾರಕವಾಗಿ PM2.5 ಮತ್ತು PM10 ಕಣಗಳು ಕಂಡುಬಂದಿವೆ. ಕಟ್ಟಡ ನಿರ್ಮಾಣ ಕಾಮಗಾರಿಗಳು ಹಾಗೂ ಹೆಚ್ಚುತ್ತಿರುವ ವಾಹನಗಳ ಹೊಗೆಯೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ರಾಜ್ಯದ ಇತರೆ ಪ್ರಮುಖ ನಗರಗಳ ಪರಿಸ್ಥಿತಿ ಹಾಗೂ ಆರೋಗ್ಯ ಸಲಹೆ

ಕರ್ನಾಟಕದ ಇತರ ಪ್ರಮುಖ ನಗರಗಳಾದ ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿಗಳಲ್ಲಿ ವಾಯು ಗುಣಮಟ್ಟವು ಉತ್ತಮದಿಂದ ಸಾಧಾರಣ ಮಟ್ಟದಲ್ಲಿದೆ.

ಮೈಸೂರು ಹಾಗೂ ಮಂಗಳೂರು:ಕರಾವಳಿ ಮತ್ತು ಸಾಂಸ್ಕೃತಿಕ ನಗರಗಳಲ್ಲಿ ಎಕ್ಯೂಐ 55ರಷ್ಟಿದ್ದು, ‘ಉತ್ತಮ’ವಿಭಾಗದಲ್ಲಿದೆ. ಹುಬ್ಬಳ್ಳಿ, ಕಲಬುರಗಿ ಮತ್ತು ಬೆಳಗಾವಿ: ಉತ್ತರ ಕರ್ನಾಟಕದ ನಗರಗಳಲ್ಲಿ ಎಕ್ಯೂಐ 65 ರಿಂದ 80 ರ ನಡುವೆ ದಾಖಲಾಗಿದೆ.

ಆರೋಗ್ಯ ಇಲಾಖೆ ಸಲಹೆ

ಇಂದಿನ ವಾಯು ಗುಣಮಟ್ಟವು ಸಾಮಾನ್ಯ ಜನರಿಗೆ ಯಾವುದೇ ಗಂಭೀರ ಸಮಸ್ಯೆಯನ್ನು ಉಂಟುಮಾಡುವುದಿಲ್ಲ. ಆದರೆ, ಉಸಿರಾಟದ ತೊಂದರೆ, ಆಸ್ತಮಾ ಹಾಗೂ ಅಲರ್ಜಿ ಇರುವ ಹಿರಿಯ ನಾಗರಿಕರು ಮತ್ತು ಮಕ್ಕಳು ಬೆಳಗಿನ ಜಾವ ಹೊರಸಂಚಾರ ಮಾಡುವಾಗ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ. ಸಂಚಾರ ದಟ್ಟಣೆ ಇರುವ ರಸ್ತೆಗಳಲ್ಲಿ ಪ್ರಯಾಣಿಸುವಾಗ ಮಾಸ್ಕ್ ಧರಿಸುವುದು ಆರೋಗ್ಯಕ್ಕೆ ಹಿತಕರ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಭಾವನಾ ಹೆಗಡೆ
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More