ಬೆಂಗಳೂರಿಗರ ಬಹುದಿನದ ಕನಸು ನನಸಾಗುವ ಕಾಲ ಬಂತು: ಕೆಂಪೇಗೌಡ ವಿಮಾನ ನಿಲ್ದಾಣ ಮಾರ್ಗಕ್ಕೆ ಶೀಘ್ರದಲ್ಲಿ ಬರಲಿದೆ ಮೆಟ್ರೋ

Bengaluru Airport Metro: ಬೆಂಗಳೂರು ಜನರಿಗೆ ಒಂದು ಗುಡ್ ನ್ಯೂಸ್! ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ನೇರ ಮೆಟ್ರೋ ಸಂಪರ್ಕ 2027ರ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. 58.19 ಕಿ.ಮೀ ಉದ್ದದ ಈ ನಮ್ಮ ಮೆಟ್ರೋ ಬ್ಲೂ ಲೈನ್ ವಿಸ್ತರಣೆ ಸಿಲ್ಕ್ ಬೋರ್ಡ್‌ನಿಂದ ಕೆಐಎ ವರೆಗೆ ಸಂಚರಿಸಲಿದೆ. ಇದು ನಗರದ ಪ್ರಮುಖ ರಸ್ತೆಗಳಲ್ಲಿನ ಟ್ರಾಫಿಕ್ ದಟ್ಟಣೆಯನ್ನು ಶೇ. 50ರಷ್ಟು ಕಡಿಮೆ ಮಾಡಿ, ವಿಮಾನ ನಿಲ್ದಾಣದ ಪ್ರಯಾಣವನ್ನು ಸುಗಮಗೊಳಿಸುತ್ತದೆ.

ಬೆಂಗಳೂರಿಗರ ಬಹುದಿನದ ಕನಸು ನನಸಾಗುವ ಕಾಲ ಬಂತು: ಕೆಂಪೇಗೌಡ ವಿಮಾನ ನಿಲ್ದಾಣ ಮಾರ್ಗಕ್ಕೆ ಶೀಘ್ರದಲ್ಲಿ ಬರಲಿದೆ ಮೆಟ್ರೋ
ಬೆಂಗಳೂರು

Updated on: Jan 11, 2026 | 10:39 AM

ಬೆಂಗಳೂರು, ಜ.11: ಬೆಂಗಳೂರು ಜನರಿಗೆ ಇದೀಗ ಮೆಟ್ರೋ (Bengaluru Airport Metro) ಕಡೆಯಿಂದ ಮತ್ತೊಂದು ಗುಡ್​​​ ನ್ಯೂಸ್​ ಇದೆ. ಬಹುದಿನಗಳಿಂದ ಕಾಯುತ್ತಿದ್ದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ನೇರ ಮೆಟ್ರೋ ಸಂಪರ್ಕಕ್ಕೆ ಅಡ್ಡಿಗಲ್ಲು ಹಾಕಲಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ವಿಮಾನ ನಿಲ್ದಾಣದ ಮೆಟ್ರೋ ಕಾರಿಡಾರ್ 2027ರ ಅಂತ್ಯದ ವೇಳೆಗೆ ಪೂರ್ಣಗೊಳಿಸಲಿದೆ ಎಂದು ಹೇಳಲಾಗಿದೆ. ಇದು ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣವನ್ನು ಸುಗಮಗೊಳಿಸುವ ಮತ್ತು ಪ್ರಮುಖ ಕಾರಿಡಾರ್‌ಗಳಲ್ಲಿನ ರಸ್ತೆ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆ. ಇದೊಂದು ಬೆಂಗಳೂರಿನ ಮೆಟ್ರೋ ಇತಿಹಾ ಯೋಜನೆ ಆಗಲಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಗೆ ಬೇಕಾದ ಎಲ್ಲ ಕಾರ್ಯಚರಣೆಗಳನ್ನು ಮಾಡಲಾಗುವುದು ಎಂದು ಹೇಳಿದ್ದಾರೆ. ಮುಂಬರುವ ವಿಮಾನ ನಿಲ್ದಾಣ ಮೆಟ್ರೋ ಕಾರಿಡಾರ್ ನಮ್ಮ ಮೆಟ್ರೋದ ವಿಸ್ತರಣೆಯ ಭಾಗವಾಗಿದೆ ಮತ್ತು ಇದನ್ನು ಬ್ಲೂ ಲೈನ್ / ಒಆರ್ಆರ್-ವಿಮಾನ ನಿಲ್ದಾಣ ಮಾರ್ಗಕ್ಕೆ ಜೋಡಿಸಲಾಗುವುದು.

ಸಿದ್ಧವಾದ ನಂತರ, ಇದು ಬೆಂಗಳೂರಿನ ಪ್ರಮುಖ ಸಾರ್ವಜನಿಕ ಸಾರಿಗೆ ಸಂಪರ್ಕಗಳಲ್ಲಿ ಒಂದಾಗಲಿದ್ದು, ಪ್ರಮುಖ ಐಟಿ ವಲಯಗಳು ಮತ್ತು ಹೆಚ್ಚಿನ ಸಾಂದ್ರತೆಯ ವಸತಿ ಪ್ರದೇಶಗಳನ್ನು ವಿಮಾನ ನಿಲ್ದಾಣದೊಂದಿಗೆ ಸಂಪರ್ಕಿಸುತ್ತದೆ. ಕಾರಿಡಾರ್ ಎರಡು ಹಂತಗಳಲ್ಲಿ ಉದ್ಘಾಟನೆಗೊಳ್ಳಲಿದ್ದು, ಮೊದಲ ಹಂತವು ಅದಕ್ಕೂ ಮುನ್ನ ಉದ್ಘಾಟನೆ ಆಗಲಿದೆ ಎಂದು ಹೇಳಲಾಗಿದೆ. ಒಟ್ಟು ಕಾರಿಡಾರ್ ಉದ್ದ 58.19 ಕಿ.ಮೀ. ಇರಲಿದ್ದು, ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಸಂಚಾರಿಸಲಿದೆ. 2A+2B ಎಂದು ಎರಡು ಹಂತದಲ್ಲಿ ಯೋಜನೆಯ ವಿಭಜನೆ ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್! ಪಿಂಕ್ ಲೈನ್​ನಲ್ಲಿ ಮೆಟ್ರೋ ಸಂಚಾರ ಟ್ರಯಲ್ ಆರಂಭ

ವಿಮಾನ ನಿಲ್ದಾಣ ಮಾರ್ಗವನ್ನು ಎರಡು ಭಾಗಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ:

ಹಂತ 2A : ಹಂತ 2Aಯಲ್ಲಿ 19.75 ಕಿ.ಮೀ. ಉದ್ದದ ಮೆಟ್ರೋ ಮಾರ್ಗವನ್ನು ಅಭಿವೃದ್ಧಿಪಡಿಸಲಾಗುವುದು. ಇದು ಸೆಂಟ್ರಲ್ ಸಿಲ್ಕ್ ಬೋರ್ಡ್ನಿಂದ ಕೆ.ಆರ್. ಪುರಂ ವರೆಗೆ.

ಹಂತ 2B : ಇದು 38.44 ಕಿ.ಮೀ. ಉದ್ದದ ಮೆಟ್ರೋ ಮಾರ್ಗವನ್ನು ಅಭಿವೃದ್ಧಿಪಡಿಸಲಾಗುವುದು.ಇದು ಕೆ.ಆರ್. ಪುರಂನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವರೆಗೆ ಇರಲಿದೆ.

ಸಿಲ್ಕ್ ಬೋರ್ಡ್–ಕೆಆರ್ ಪುರಂ ಮಾರ್ಗವನ್ನು ಈ ವರ್ಷದ ಒಳಗೆ ಅಂದರೆ 2026 ಮುಗಿಯುವುದರೊಳಗೆ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ಆದರೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮೆಟ್ರೋ ಮಾರ್ಗವನ್ನು 2027ಕ್ಕೆ ಪೂರ್ಣಗೊಳಿಸಲಾಗುವುದು ಎಂದು ಹೇಳಲಾಗಿದೆ. ಇನ್ನು ಯೋಜನೆ ತುಂಬಾ ಒಳ್ಳೆಯ ಯೋಜನೆಯಾಗಿದೆ. ಇದರಿಂದ 50%ದಷ್ಟು ಟ್ರಾಫಿಕ್​ನಿಂದ ಮುಕ್ತಿ ಸಿಗುತ್ತದೆ. ಇನ್ನು ಕ್ಯಾಬ್​​​​ಗಳಿಗೆ ಹೆಚ್ಚಿನ ಹಣ ನೀಡುವುದನ್ನು ತಪ್ಪಿಸುತ್ತದೆ.

ಬೆಂಗಳೂರು ಮೆಟ್ರೋ ಪ್ರಯಾಣ ದರ: ಟಿಕೆಟ್ ಬೆಲೆಗಳು ಹೇಗಿರುತ್ತವೆ?

ವಿಮಾನ ನಿಲ್ದಾಣ ಮಾರ್ಗದ ದರ ಸ್ಲ್ಯಾಬ್‌ಗಳನ್ನು ಬಿಎಂಆರ್‌ಸಿಎಲ್ ಅಧಿಕೃತವಾಗಿ ಘೋಷಿಸಿಲ್ಲ.

ಇದು ನಮ್ಮ ಮೆಟ್ರೋದ ದೂರ ಆಧಾರಿತ ಶುಲ್ಕ ರಚನೆಯನ್ನು ಅನುಸರಿಸುವ ನಿರೀಕ್ಷೆಯಿದೆ.

ಸ್ಮಾರ್ಟ್ ಕಾರ್ಡ್, QR ಟಿಕೆಟಿಂಗ್, ಪ್ರಮಾಣಿತ ಮೆಟ್ರೋ ದರ ಸ್ಲ್ಯಾಬ್‌ಗಳಂತಹ ಪಾವತಿ ವ್ಯವಸ್ಥೆಯು ಇವುಗಳನ್ನು ಒಳಗೊಂಡಿರಬಹುದು.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 10:39 am, Sun, 11 January 26