ಅಪಾರ್ಟ್​ಮೆಂಟ್ ಜನರ ಜೀವ ಉಳಿಸಿದ ನಾಯಿ! ಮೂಕಪ್ರಾಣಿಯ ಸಮಯಪ್ರಜ್ಞೆಗೆ ಜನ ಬೆರಗು

| Updated By: ganapathi bhat

Updated on: Nov 17, 2021 | 5:17 PM

ಏನೇ ಆದರೂ, ಎರಡು ಫ್ಲಾಟ್ ಹೊತ್ತಿ ಉರಿದ ಅಗ್ನಿ ಅವಘಡದ ವೇಳೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನುವುದಕ್ಕೆ ಇಲ್ಲಿ ವಿಶೇಷ ಕಾರಣ ಒಂದಿದೆ. ಅದುವೇ ಫ್ಲಾಟ್​ನ ಸಾಕು ನಾಯಿ.

ಅಪಾರ್ಟ್​ಮೆಂಟ್ ಜನರ ಜೀವ ಉಳಿಸಿದ ನಾಯಿ! ಮೂಕಪ್ರಾಣಿಯ ಸಮಯಪ್ರಜ್ಞೆಗೆ ಜನ ಬೆರಗು
ಅಪಾರ್ಟ್​ಮೆಂಟ್ ಜನರ ಜೀವ ಉಳಿಸಿದ ನಾಯಿ
Follow us on

ಆನೇಕಲ್: ಇಲ್ಲಿನ ಅಪಾರ್ಟ್​ಮೆಂಟ್ ಒಂದರಲ್ಲಿ ಇಂದು (ನವೆಂಬರ್ 17) ಅಗ್ನಿ ಅವಘಡ ಸಂಭವಿಸಿದೆ. ಎಲೆಕ್ಟ್ರಾನಿಕ್​ ಸಿಟಿಯ ಅಪಾರ್ಟ್​ಮೆಂಟ್ ಒಂದರಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಬೆಂಗಳೂರಿನ ವಸುಂಧರಾ ಲೇಔಟ್​ನ ವಿ ಮ್ಯಾಕ್ಸ್ ಚಾಲೇಟ್ ಅಪಾರ್ಟ್​​ಮೆಂಟ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕೆನ್ನಾಲಿಗೆ ಎರಡು ಫ್ಲ್ಯಾಟ್​ಗಳಿಗೆ ಆವರಿಸಿದೆ ಎಂದು ತಿಳಿದುಬಂದಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಜನರು ಹೊರಗೆ ಓಡಿ ಬಂದಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುತ್ತಿದ್ದಾರೆ.

ಈ ದುರ್ಘಟನೆ ಇಷ್ಟರಲ್ಲೇ ಮುಗಿದಿದೆ. ಸದ್ಯಕ್ಕೆ ಯಾವುದೇ ಪ್ರಾಣಾಪಾಯ‌ ಇಲ್ಲ ಎಂದು ಮಾಹಿತಿ ಲಭ್ಯವಾಗಿದೆ. ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕಾಗಿಮಿಸಿ ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿದ್ದಾರೆ. ಅಗ್ನಿ ಅವಘಡಕ್ಕೆ ಕಾರಣವೂ ತಿಳಿದುಬಂದಿಲ್ಲ. ಏನೇ ಆದರೂ, ಎರಡು ಫ್ಲಾಟ್ ಹೊತ್ತಿ ಉರಿದ ಅಗ್ನಿ ಅವಘಡದ ವೇಳೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನುವುದಕ್ಕೆ ಇಲ್ಲಿ ವಿಶೇಷ ಕಾರಣ ಒಂದಿದೆ. ಅದುವೇ ಫ್ಲಾಟ್​ ಒಂದರ ಸಾಕು ನಾಯಿ.

ಒಂದು ಮೂಕ ಪ್ರಾಣಿ ಅಪಾರ್ಟ್​ಮೆಂಟ್​ನ ಜನರಿಗೆ ಆಗಬಹುದಾಗಿದ್ದ ದೊಡ್ಡ ಹಾನಿಯನ್ನು ಕಡಿಮೆ ಮಾಡಿದೆ. ಸಣ್ಣ ಪ್ರಮಾಣದಲ್ಲಿ ಅಪಾಯ ತಪ್ಪಿಸಿದೆ. ಅಪಾರ್ಟ್​ಮೆಂಟ್​ನಲ್ಲಿ ಬೆಂಕಿ ಹತ್ತಿದ ತಕ್ಷಣ ನಾಯಿ ಜೋರಾಗಿ ಕೂಗಿಕೊಂಡಿದೆ. 119 ರ ಫ್ಲಾಟ್​ನಲ್ಲಿ ಇದ್ದ ನಾಯಿ ಜೋರಾಗಿ ಬೊಗಳಿದೆ. ಇಡೀ ಅಪಾರ್ಟ್ಮೆಂಟ್ ಓಡಿ ಕೂಗಿದ ಕಾರಣ ಜನರಿಗೆ ಎಚ್ಚರವಾಗಿದೆ. ನಾಯಿ ಕೂಗೋದನ್ನು ಕೇಳಿ ಚಾಲೇಟ್ ಅಪಾರ್ಟ್​ಮೆಂಟ್ ನಿವಾಸಿಗಳು ಹೊರಗೆ ಓಡಿ ಬಂದಿದ್ದಾರೆ.

ನಾಯಿ ಬೊಗಳುವಿಕೆ ಕೇಳಿ ಜನರು ಹೊರ ಬಂದು ನೋಡುತ್ತಿದ್ದಂತೆ ಹೊಗೆ ಕಾಣಿಸಿಕೊಂಡಿದೆ. ಹೊಗೆ ನೋಡಿ ಜನರು ಗಾಬರಿ ಪಟ್ಟಿದ್ದಾರೆ. ಇದಕ್ಕೂ ಮೊದಲು ನಾಯಿ ಸೆಕ್ಯುರಿಟಿ ಸಿಬ್ಬಂದಿ ಬಳಿ ಬಂದು ಬೊಗಳಿ ಓಡಿತ್ತು ಎಂದು ತಿಳಿದುಬಂದಿದೆ. ನಾಯಿಯ ಸಮಯ ಪ್ರಜ್ಞೆ ಕಂಡು ಇದೀಗ ಅಪಾರ್ಟ್​ಮೆಂಟ್ ನಿವಾಸಿಗಳು ಬೆರಗಾಗಿದ್ದಾರೆ.

ಇದನ್ನೂ ಓದಿ: ಆನೇಕಲ್: ಅಪಾರ್ಟ್​ಮೆಂಟ್ ಒಂದರಲ್ಲಿ ಅಗ್ನಿ ಅವಘಡ; ಎರಡು ಫ್ಲಾಟ್​ಗಳಿಗೆ ಆವರಿಸಿದ ಬೆಂಕಿ

ಇದನ್ನೂ ಓದಿ: ಮುಂಬೈನ ಸ್ಯಾಮ್‌ಸಂಗ್ ಸರ್ವೀಸ್ ಸೆಂಟರ್​​ನಲ್ಲಿ ಬೆಂಕಿ; 8 ಅಗ್ನಿಶಾಮಕ ವಾಹನಗಳು ದೌಡು