ಮುಂಬೈನ ಸ್ಯಾಮ್‌ಸಂಗ್ ಸರ್ವೀಸ್ ಸೆಂಟರ್ನಲ್ಲಿ ಬೆಂಕಿ; 8 ಅಗ್ನಿಶಾಮಕ ವಾಹನಗಳು ದೌಡು
Fire At Samsung Service Centre ಉರಿಯುತ್ತಿರುವ ಬೆಂಕಿಯ ನಡುವೆ ಮುಂಬೈ ಸ್ಕೈಲೈನ್ ಮುಂದೆ ದಟ್ಟಹೊಗೆ ಕಾಣಿಸಿಕೊಂಡಿದೆ. ಕಂಜುರ್ಮಾರ್ಗ್ ಪೂರ್ವ ಪೊಲೀಸ್ ಠಾಣೆ ಬಳಿಯ ಸ್ಯಾಮ್ ಸಂಗ್ ಸರ್ವೀಸ್ ಸೆಂಟರ್ ನಲ್ಲಿ 2 ನೇ ಹಂತದ ಬೆಂಕಿ ಕಾಣಿಸಿಕೊಂಡಿದೆ. ರಾತ್ರಿ 8.59ಕ್ಕೆ ಬೆಂಕಿ ಕಾಣಿಸಿಕೊಂಡಿತ್ತು.
ಮುಂಬೈ: ಮುಂಬೈ ಉಪನಗರ ಕಂಜುರ್ಮಾರ್ಗ್‌ನಲ್ಲಿರುವ (Kanjurmarg )ಸ್ಯಾಮ್‌ಸಂಗ್ ಸರ್ವೀಸ್ ಸೆಂಟರ್ನಲ್ಲಿ(Samsung service centre) ಸೋಮವಾರ ಸಂಜೆ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಇಲ್ಲಿಯವರೆಗೆ ಯಾವುದೇ ಸಾವು ನೋವು ವರದಿಯಾಗಿಲ್ಲ. ಎಂಟು ಅಗ್ನಿಶಾಮಕ ವಾಹನಗಳು ಮತ್ತು ನಾಲ್ಕು ನೀರಿನ ಟ್ಯಾಂಕರ್‌ಗಳು ಬೆಂಕಿಯನ್ನು ನಂದಿಸಲು ಸ್ಥಳಕ್ಕೆ ಧಾವಿಸಿವೆ. ಉರಿಯುತ್ತಿರುವ ಬೆಂಕಿಯ ನಡುವೆ ಮುಂಬೈ ಸ್ಕೈಲೈನ್ ಮುಂದೆ ದಟ್ಟಹೊಗೆ ಕಾಣಿಸಿಕೊಂಡಿದೆ. ಕಂಜುರ್ಮಾರ್ಗ್ ಪೂರ್ವ ಪೊಲೀಸ್ ಠಾಣೆ ಬಳಿಯ ಸ್ಯಾಮ್ ಸಂಗ್ ಸರ್ವೀಸ್ ಸೆಂಟರ್ ನಲ್ಲಿ 2 ನೇ ಹಂತದ ಬೆಂಕಿ ಕಾಣಿಸಿಕೊಂಡಿದೆ. ರಾತ್ರಿ 8.59ಕ್ಕೆ ಬೆಂಕಿ ಕಾಣಿಸಿಕೊಂಡಿತ್ತು. ಮುಂಬೈ ಅಗ್ನಿಶಾಮಕ ದಳ 8 ಅಗ್ನಿಶಾಮಕ ವಾಹನಗಳು, 4 ನೀರಿನ ಟ್ಯಾಂಕರ್‌ಗಳು ಸ್ಥಳಕ್ಕೆ ಧಾವಿಸಿವೆ. ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
Maharashtra: Fire breaks out at Samsung Service Centre in Kanjurmarg East, Mumbai; 7 fire engines and 4 water tankers moved to the spot; no casualties reported.
— ANI (@ANI) November 15, 2021
ಬೆಂಕಿ ನಂದಿಸಲು ನಾಲ್ಕು ಅಗ್ನಿಶಾಮಕ ವಾಹನಗಳು, ನಾಲ್ಕು ನೀರಿನ ಟ್ಯಾಂಕರ್‌ಗಳು ಸ್ಥಳಕ್ಕೆ ಧಾವಿಸಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ವೈದ್ಯಕೀಯ ತುರ್ತು ಸಂದರ್ಭದಲ್ಲಿ ಆಂಬ್ಯುಲೆನ್ಸ್ ಕೂಡ ಸ್ಥಳಕ್ಕೆ ಆಗಮಿಸಿದೆ. ರಾತ್ರಿ 9 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ರಾತ್ರಿ 9.42ಕ್ಕೆ ಅಗ್ನಿಶಾಮಕ ಇಲಾಖೆಗೆ ಮಾಹಿತಿ ಲಭಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿ ಅವಘಡಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.
ಇದನ್ನೂ ಓದಿ: ಅಮರಾವತಿಯಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪ: ಮಹಾರಾಷ್ಟ್ರದ ಮಾಜಿ ಸಚಿವ ಅನಿಲ್ ಬೋಂಡೆ ಬಂಧನ
ಇದನ್ನೂ ಓದಿ: Rashmika Mandanna: ಮುಂಬೈನಲ್ಲಿ ಹೆಚ್ಚಿದೆ ರಶ್ಮಿಕಾ ಮಂದಣ್ಣ ತಿರುಗಾಟ; ಕೊಡಗಿನ ಕುವರಿ ಹೋದಲ್ಲೆಲ್ಲ ಕ್ಯಾಮೆರಾ ಕಣ್ಣು
Published On - 11:02 pm, Mon, 15 November 21