Bengaluru: ಬೆಂಗಳೂರಿನಲ್ಲಿ ರ‍್ಯಾಪಿಡೋ ಬೈಕ್ ಚಾಲಕನಿಗೆ ಕಿರುಕುಳ, ಫೋನ್​ ಕಸಿದು ನೆಲಕ್ಕೆ ಎಸೆದ ಆಟೋ ಚಾಲಕ

| Updated By: Digi Tech Desk

Updated on: Mar 08, 2023 | 3:25 PM

ಆಟೋ ಚಾಲಕನೊಬ್ಬ ರಾಪಿಡೋ ಬೈಕ್ ಚಾಲಕನಿಗೆ ಕಿರುಕುಳ ನೀಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಇದೀಗ ಈ ವಿಡಿಯೋ ವೈರಲ್​ ಆಗುತ್ತಿದೆ. ವಿಡಿಯೋನಲ್ಲೇನಿದೆ? ಇಲ್ಲಿದೆ ನೋಡಿ

Bengaluru: ಬೆಂಗಳೂರಿನಲ್ಲಿ ರ‍್ಯಾಪಿಡೋ ಬೈಕ್ ಚಾಲಕನಿಗೆ ಕಿರುಕುಳ, ಫೋನ್​ ಕಸಿದು ನೆಲಕ್ಕೆ ಎಸೆದ ಆಟೋ ಚಾಲಕ
Follow us on

ಬೆಂಗಳೂರು: ಬೆಂಗಳೂರಿನಲ್ಲಿ ಆಟೋ ಚಾಲಕನೊಬ್ಬ (Auto Driver) ರ‍್ಯಾಪಿಡೋ ಬೈಕ್ (Rapido Bike Taxi) ಚಾಲಕನಿಗೆ ಕಿರುಕುಳ ನೀಡಿದ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಆಟೋ ಚಾಲಕ, ರ‍್ಯಾಪಿಡೋ ಬೈಕ್ ಚಾಲಕನನ್ನು ನಿಲ್ಲಿಸಿ ಬೈದಿದ್ದಾನೆ. ಅಲ್ಲದೇ ಕೋಪದಲ್ಲಿ ಫೋನ್ ಕಸಿದುಕೊಂಡು ನೆಲಕ್ಕೆ ಎಸೆದಿದ್ದಾನೆ. ಈ ಘಟನೆ ಇಂದಿರಾನಗರ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ ಎನ್ನಲಾಗಿದ್ದು, ವಿಡಿಯೋ ವೈರಲ್ ಆಗಿದೆ. ಆಟೋ ಚಾಲಕನ ಕೃತ್ಯಕ್ಕೆ ಖಂಡನೆ ವ್ಯಕ್ತವಾಗಿದೆ. ಇನ್ನು ಈ ಬಗ್ಗೆ ಬೆಂಗಳೂರು ಪೊಲೀಸ್​ ಗಮನಕ್ಕೆ ಬಂದಿದ್ದು, ಆಟೋ ಚಾಲಕನ ವಿರುದ್ಧ ಸೂಕ್ತ ಕ್ರಮಕೈಗೊಳ್ಳುಂತೆ ಇಂದಿರಾನಗರ ಪೊಲೀಸರಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ವಿಮಾನದಲ್ಲಿ ಸಿಗರೇಟ್ ಸೇದಿ ಆತಂಕ ಸೃಷ್ಟಿಸಿದ ಯುವತಿ, ಬೆಂಗಳೂರಿನಲ್ಲಿ ಫ್ಲೈಟ್​ ಲ್ಯಾಂಡ್​ ಆಗುತ್ತಿದ್ದಮತೆಯೇ ಅರೆಸ್ಟ್

ವಿಡಿಯೋನಲ್ಲಿ ಆಟೋ ಚಾಲಕ ಹೇಳಿದ್ದೇನು?

ಸ್ನೇಹಿತರೇ, ಅಕ್ರಮ ರಾಪಿಡೋ ದಂಧೆ ಹೇಗೆ ನಡೆಯುತ್ತಿದೆ ಎಂಬುದನ್ನು ನೋಡಿ. ಈ ಸಹೋದ್ಯೋಗಿ ಬೇರೆ ದೇಶದಿಂದ ಬಂದು ರಾಜನಂತೆ ಓಡಿಸುತ್ತಾನೆ. ಆಟೋ ಇಲಾಖೆ ಎಷ್ಟು ಹಾಳಾಗಿದೆ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಇಲಾಖೆಯು ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ, ಬೇರೆ ದೇಶದಿಂದ ಬಂದವನು, ವೈಟ್ ಬೋರ್ಡ್ ಹೊಂದಿದ್ದರೂ ಹುಡುಗಿಯನ್ನು ಕರೆದುಕೊಂಡು ಹೋಗಲು ಬಂದಿದ್ದಾನೆ’ ಎಂದು ಆಟೋ ಚಾಲಕ ರಾಪಿಡೋ ಬೈಕ್ ಚಾಲಕನ ಮೇಲೆ ಕೈ ಮಾಡಲು ಮುಂದಾಗುತ್ತಾನೆ.


ಇನ್ನು ಈ ಬಗ್ಗೆ ಬೈಕ್ ಸವಾರರು ಇನ್ನೂ ಯಾವುದೇ ದೂರು ದಾಖಲಿಸಿಲ್ಲವಾದರೂ, ವೈರಲ್ ವಿಡಿಯೋ ಆಧರಿಸಿ ಪೊಲೀಸರು ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಟ್ಟುನಿಟ್ಟಿನ ಮತ್ತು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರ ಪೊಲೀಸರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಆಟೋ ಚಾಲಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಬೆಂಗಳೂರಿನಂತಹ ಮಹಾನಗರಗಳಲ್ಲಿ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳಲ್ಲಿ ಬುಕ್ಕಿಂಗ್‌ ಮಾಡಿ ತಲುಪಬೇಕಾದ ಸ್ಥಳಕ್ಕೆ ಸುಲಭವಾಗಿ ಹೋಗಬಹುದು. ಇದಕ್ಕಾಗಿ ರಾಪಿಡೋ ಬೈಕ್ ಸೇವೆಯನ್ನು ಒದಗಿಸುತ್ತಿದೆ. ರಾಪಿಡೋ ಬೈಕ್ ಬುಕ್ ಮಾಡುವ ಮೂಲಕ ಏಕಾಂಗಿಯಾಗಿರುವವರು ತಾವು ತಲುಪಬೇಕಾದ ಸ್ಥಳಕ್ಕೆ ತಲುಪಬಹುದು. ಆದ್ರೆ, ಇದಕ್ಕೆ ಆಟೋ ಚಾಲಕರು ವಿರೋಧಿಸುತ್ತಿದ್ದಾರೆ. ರ‍್ಯಾಪಿಡೋ ಬೈಕ್ ಟ್ಯಾಕ್ಸಿ ನಿಷೇಧಿಸುವಂತೆ ಒತ್ತಾಯಿಸಿ ಈ ಹಿಂದೆ ಆಟೋ ಚಾಲಕರ ಸಂಘ ಪ್ರತಿಭಟನೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹಹುದು.

ರ‍್ಯಾಪಿಡೋ ಆ್ಯಪ್‌ ಆಧಾರಿತ ಬೈಕ್‌ ಟ್ಯಾಕ್ಸಿ ಹೆಸರಿನಲ್ಲಿ ವೈಟ್‌ ಬೋರ್ಡ್‌ ಬೈಕ್‌ಗಳಲ್ಲಿ ಅತಿ ಕಡಿಮೆ ದರಕ್ಕೆ ಸೇವೆ ನೀಡಲಾಗುತ್ತಿದೆ. ಕಾನೂನಿನಲ್ಲಿ ಇದ್ದಕ್ಕೆ ಅವಕಾಶವಿಲ್ಲ. ಆಟೋ ಚಾಲಕರು ಸರ್ಕಾರಕ್ಕೆ ಟ್ಯಾಕ್ಸ್‌ ಪಾವತಿಸಿ ಎಲ್ಲೋ ಬೋರ್ಡ್‌ ಆಟೋಗಳಲ್ಲಿ ಸೇವೆ ನೀಡುತ್ತಿದ್ದೇವೆ. ತೆರಿಗೆ ಪಾವತಿಸುವ ನಾವು ಎಲ್ಲಿಗೆ ಹೋಗಬೇಕು? ಯಾವುದೇ ಕಾರಣಕ್ಕೂ ಈ ಕಾನೂನು ಬಾಹಿರ ಬೈಕ್‌ ಟ್ಯಾಕ್ಸಿ ಸೇವೆಗೆ ಅವಕಾಶ ನೀಡಬಾರದು ಎಂದು ಆಟೋ ಚಾಲಕರ ಸಂಘದಿಂದ ಆಗ್ರಹಿಸಿತ್ತು.

Published On - 1:28 pm, Wed, 8 March 23