ಬೆಂಗಳೂರಿನಲ್ಲಿ ಆಟೋ ಮೀಟರ್ ದರ ಏರಿಕೆಗೆ ಮುಹೂರ್ತ ಫಿಕ್ಸ್ , ಎಷ್ಟು ಹೆಚ್ಚಳ?

ಜನವರಿಯಲ್ಲಿ ಕೆಎಸ್ಆರ್​ಸಿ, ಬಿಎಂಟಿಸಿ ಬಸ್​ ಟಿಕೆಟ್ ದರ ಹೆಚ್ಚಾಯಿತು. ಫೆಬ್ರುವರಿಯಲ್ಲಿ ನಮ್ಮ ಮೆಟ್ರೋ ಟಿಕೆಟ್ ದರ ಹೆಚ್ಚಾಯಿತು. ಇದೀಗ ಮಾರ್ಚ್ ನಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಆಟೋ ಮೀಟರ್ ದರ ಹೆಚ್ಚಳವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ದರ ಏರಿಕೆ ಬಗ್ಗೆ ತೀರ್ಮಾನಿಸಲು ಮಾರ್ಚ್ 12 ರಂದು ಮುಹೂರ್ತ ಫಿಕ್ಸ್ ಆಗಿದೆ. ಹಾಗಾದ್ರೆ, ಎಷ್ಟು ಏರಿಕೆಯಾಗಹುದು? ಆಟೋ ಸಂಘಟನೆಗಳು ಹೇಳಿದ್ದೇನು? ಎನ್ನುವ ಮಾಹಿತಿ ಇಲ್ಲಿದೆ.

ಬೆಂಗಳೂರಿನಲ್ಲಿ ಆಟೋ ಮೀಟರ್ ದರ ಏರಿಕೆಗೆ ಮುಹೂರ್ತ ಫಿಕ್ಸ್ , ಎಷ್ಟು ಹೆಚ್ಚಳ?
Auto
Edited By:

Updated on: Mar 05, 2025 | 9:18 PM

ಬೆಂಗಳೂರು, (ಮಾರ್ಚ್​ 05): ಬಿಎಂಟಿಸಿ, ಕೆಎಸ್​ಆರ್​ಟಿಸಿ ಹಾಗೂ ನಮ್ಮ ಮೆಟ್ರೋ ಟಿಕೆಟ್​ ದರ ಏರಿಕೆ ಬೆನ್ನಲ್ಲೇ ಇದೀಗ ಆಟೋ ಮೀಟರ್ ದರ ಏರಿಕೆ ಮಾಡುವ ಸಾಧ್ಯತೆಗಳಿವೆ. ಆಟೋ ಮೀಟರ್ ದರ ಹೆಚ್ವಳ ಮಾಡಿ ನಾಲ್ಕು ವರ್ಷ ಆಗಿದೆ. ಈಗ ಸಿಎನ್​ಜಿ ಹಾಗೂ ಎಲ್​ಪಿಜಿ ದರ ಹೆಚ್ಚಳವಾಗಿದೆ. ಹಾಗಾಗಿ ಬೆಂಗಳೂರು ಆಟೋ ಮೀಟರ್ ದರ ಹೆಚ್ಚಳಕ್ಕೆ ಚರ್ಚೆಗಳು ನಡೆದಿವೆ. ಕಳೆದ ವರ್ಷವೇ ಆಟೋ ಚಾಲಕ ಸಂಘಟನೆಗಳು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ದರ ಏರಿಕೆ ಮಾಡುವಂತೆ ಮನವಿ ಮಾಡಿದ್ದವು. ಈ ದರ ಏರಿಕೆ ಮಾಡುವ ಬಗ್ಗೆ ಚರ್ಚಿಸಲು ಮಾರ್ಚ್12 ರಂದು 11 ಗಂಟೆಗೆ ಇನ್ ಫೆಂಟ್ರಿ ರಸ್ತೆಯಲ್ಲಿರುವ.ಸಂಚಾರ ಪೂರ್ವ ವಿಭಾಗದ ಡಿಸಿಪಿ ಕಚೇರಿಯಲ್ಲಿ ಸಭೆ ಕರೆಯಲಾಗಿದೆ.

ಟ್ರಾಫಿಕ್ ಈಸ್ಟ್ ಡಿಸಿಪಿ ನೇತೃತ್ವದಲ್ಲಿ ಈ ಸಭೆ ನಡೆಯಲಿದ್ದು, ಎಷ್ಟು ಏರಿಕೆ ಮಾಡಬೇಕೆಂಬ ಮಾತು ನಡೆಯಲಿದೆ. ಒಂದು ಕಿ.ಮೀಗೆ 5 ರುಪಾಯಿ, ಎರಡು ಕಿಮೀಗೆ 10 ರುಪಾಯಿ ಏರಿಕೆ ಮಾಡುವಂತೆ ಆಟೋ ಸಂಘಟನೆಗಳು ಮನವಿ ಮಾಡಲಾಗಿದೆ. ಬೆಂಗಳೂರಲ್ಲಿ ಮಿನಿಮಮ್ ಆಟೋ ಮೀಟರ್ ದರ ಎರಡು ಕಿಮೀ ಗೆ 30 ರುಪಾಯಿ ಇದೆ. ಈ ಮಿನಿಮಮ್ ದರವನ್ನು 40 ರೂಪಾಯಿಗೆ ಏರಿಕೆ ಮಾಡುವಂತೆ ಮನವಿ ಮಾಡಿವೆ.

ಇದನ್ನೂ ಓದಿ: ನಂದಿನಿ ಹಾಲಿನ ದರ ಏರಿಕೆ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ನೀಡಿದ್ರು ಬಿಗ್​ ಅಪ್ಡೇಟ್

2021ರಲ್ಲಿ ಆಟೋ ಮೀಟರ್ ದರ ಹೆಚ್ಚಳ ಮಾಡಲಾಗಿತ್ತು.ಇತ್ತ ಆಟೋ ಸಿಎನ್​ಜಿ ಒಂದು ಕೆಜಿಗೆ 88 ರುಪಾಯಿ ಆಗಿದೆ. ಇನ್ನು ಎಲ್ಪಿಜಿ ಕೆಜಿ 61 ರುಪಾಯಿ ಆಗಿದೆ. ಹಾಗಾಗಿ ಮೀಟರ್ ದರ ಏರಿಕೆ ಮಾಡಲೇಬೇಕೆಂದು ಆಟೋ ಚಾಲಕರು ಪಟ್ಟು ಹಿಡಿದಿದ್ದು, ಮಾ. 12 ರಂದು ನಡೆಯಲಿರುವ ಸಭೆಯಲ್ಲಿ ದರ ಏರಿಕೆ ಬಗ್ಗೆ ಅಂತಿಮ ತೀರ್ಮಾನವಾಗಲಿದೆ.

ಇದನ್ನೂ ಓದಿ
ಹಾಲು ಉತ್ಪಾದಕರ 656 ಕೋಟಿ ರೂ. ಪ್ರೋತ್ಸಾಹ ಧನ ಬಾಕಿ ಉಳಿಸಿಕೊಂಡ ಸರ್ಕಾರ
ಟಿಕೆಟ್ ದರ ಏರಿಕೆ ಪರಿಣಾಮ: 5 ಲಕ್ಷಕ್ಕಿಳಿದ ಮೆಟ್ರೋ ಪ್ರಯಾಣಿಕರ ಸಂಖ್ಯೆ
ನಂದಿನಿ ಹಾಲಿನ ದರ ಏರಿಕೆ ಬಗ್ಗೆ KMF ಅಧ್ಯಕ್ಷ ನೀಡಿದ್ರು ಬಿಗ್​ ಅಪ್ಡೇಟ್​
ಜನಾಕ್ರೋಶ ಹಿನ್ನೆಲೆ ಪ್ರಯಾಣ ದರ ಸರಿಪಡಿಸಿದ ಮೆಟ್ರೋ: ಎಷ್ಟು ಕಡಿಮೆಯಾಯ್ತು?

ಒಟ್ಟಿನಲ್ಲಿ ಆಟೋ ಚಾಲಕ ಸಂಘಟನೆಗಳೇನೋ ಬಿಎಂಟಿಸಿ ಮೆಟ್ರೋ ಟಿಕೆಟ್ ದರ ಹೆಚ್ಚಳ ಆಗಿದೆ. ಸಿಎನ್​ಜಿ, ಎಲ್ಪಿಜಿ ರೇಟ್ ಹೆಚ್ಚಾಗಿದೆ. ಹಾಗಾಗಿ ಆಟೋ ಮೀಟರ್ ದರವು ಏರಿಕೆ ಮಾಡಲು ಅನುಮತಿ ನೀಡಿ ಎಂದು ಮನವಿ ಮಾಡಿದ್ದು, ಮಾರ್ಚ್​ 12ರ ಸಭೆಯಲ್ಲಿ ಯಾವ ತೀರ್ಮಾನ ಕೈಗೊಳ್ಳಲಾಗುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Loading...
Unable to load recommendations.
Follow Us