Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಂದಿನಿ ಹಾಲಿನ ದರ ಏರಿಕೆ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ನೀಡಿದ್ರು ಬಿಗ್​ ಅಪ್ಡೇಟ್

ಬಜೆಟ್ ನಂತರ ಕೆಎಂಎಫ್ ನಂದಿನಿ ಹಾಲಿನ ದರ 5 ರೂಪಾಯಿ ಏರಿಕೆಯಾಗುವ ಸಾಧ್ಯತೆ ಇದೆ ಎಂಬ ವದಂತಿಗಳಿಗೆ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಸ್ಪಷ್ಟನೆ ನೀಡಿದ್ದಾರೆ. ಸರ್ಕಾರ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅವರು ಹೇಳಿದ್ದಾರೆ. ಸಂಬಂಧಿತ ಇಲಾಖೆಗಳಿಂದ ಒತ್ತಡ ಇದ್ದರೂ, ಸರ್ಕಾರದ ಅಂತಿಮ ನಿರ್ಧಾರ ಕಾಯಬೇಕಿದೆ. ರೈತರಿಗೆ ಹೆಚ್ಚುವರಿ ಹಣ ಸಿಗುವಂತೆ ದರ ಹೆಚ್ಚಳದ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಿದರು.

ನಂದಿನಿ ಹಾಲಿನ ದರ ಏರಿಕೆ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ನೀಡಿದ್ರು ಬಿಗ್​ ಅಪ್ಡೇಟ್
ನಂದಿನಿ, ಭೀಮಾನಾಯ್ಕ್​್
Follow us
ವಿನಾಯಕ ಬಡಿಗೇರ್​, ಉತ್ತರ ಕನ್ನಡ
| Updated By: ವಿವೇಕ ಬಿರಾದಾರ

Updated on: Feb 22, 2025 | 10:30 AM

ಬಳ್ಳಾರಿ, ಫೆಬ್ರವರಿ 22: ಬಜೆಟ್​ ನಂತರ ರಾಜ್ಯ ಸರ್ಕಾರ ಕೆಎಂಎಫ್​ ನಂದಿನಿ (KMF Nandini) ಹಾಲಿನ ದರ 5 ರೂ. ಏರಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದಕ್ಕೆ ಕೆಎಂಎಫ್​ ಅಧ್ಯಕ್ಷ ಭೀಮಾನಾಯ್ಕ್ (Bheema naik) ಸ್ಪಷ್ಟನೆ ನೀಡಿದ್ದು, ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಸರ್ಕಾರ ನಿರ್ಧಾರ ಮಾಡಿಲ್ಲ ಎಂದು ಹೇಳಿದರು.

ಬಳ್ಳಾರಿಯಲ್ಲಿ ಟಿವಿ9 ಜೊತೆ ಮಾತನಾಡಿದ ಅವರು, ನಂದಿನಿ ಹಾಲಿನ ದರ ಹೆಚ್ಚಳ ಮಾಡುವಂತೆ ಒತ್ತಡ ಇದೆ. ಸಂಬಂಧಿಸಿದ ನಿಗಮಗಳ ಸಭೆ ಕರೆದು ಚರ್ಚೆ ಮಾಡಲಾಗಿದೆ. 5 ರೂ. ಹೆಚ್ಚಳ ಮಾಡಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ. ಹೆಚ್ಚಳ ಮಾಡಿದ ದರವನ್ನು ರೈತರಿಗೆ ನೀಡಬೇಕೆಂದು ಚರ್ಚಿಸಲಾಗಿದೆ. ಸಭೆಯಲ್ಲಿ ಚರ್ಚಿಸಿದ ವಿಷಯವನ್ನು ಸರ್ಕಾರಕ್ಕೆ ತಿಳಿಸಿದ್ದೇವೆ. ಪಶುಸಂಗೋಪನೆ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳಿಂದ ದರ ಹೆಚ್ಚಳದ ಬಗ್ಗೆ ಒತ್ತಡ ಇದೆ. ಆದರೆ, ಸರ್ಕಾರದಿಂದ ಯಾವುದೇ ನಿರ್ಧಾರ ಹೊರಬಂದಿಲ್ಲ. ಹಾಲಿನ ದರ ಹೆಚ್ಚಳ ಬಗ್ಗೆ ಸರ್ಕಾರ ತೀರ್ಮಾನ ಮಾಡಿಲ್ಲ ಎಂದು ತಿಳಿಸಿದರು.

ಹಾಲಿನ ದರ ಏರಿಸುವಂತೆ ಒಕ್ಕೂಟಗಳ ಒತ್ತಡ

ಹಾಲಿನ ದರ ಏರಿಕೆಗಾಗಿ ರಾಜ್ಯ ಸರ್ಕಾರದ ಮೇಲೆ ಹಾಲು ಒಕ್ಕೂಟಗಳು ಒತ್ತಡ ಹೇರುತ್ತಿದ್ದು, ಲೀಟರ್​​ಗೆ 5 ರೂಪಾಯಿ ಹೆಚ್ಚಳ ಮಾಡುವಂತೆ ಬೇಡಿಕೆ ಇಟ್ಟಿವೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿತ್ತು. ಕಳೆದ ತಿಂಗಳು ಪಶು ಸಂಗೋಪನಾ ಸಚಿವರು ಕೆಎಂಎಫ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಸಭೆಯಲ್ಲಿ ಹಾಲಿನ ದರ ಏರಿಕೆ ಮಾಡಬೇಕಾದ ಅನಿವಾರ್ಯತೆ ಕುರಿತು ಚರ್ಚೆಯಾಗಿತ್ತು. ಈ ವೇಳೆ ಹಾಲಿನ ದರ ಲೀಟರಿಗೆ 5 ರೂಪಾಯಿ ಏರಿಸಬೇಕು ಎಂದು ಒಕ್ಕೂಟಗಳು ಪ್ರಸ್ತಾವನೆ ಸಲ್ಲಿಸಿದ್ದವು. ಸಂಗೋಪನೆಯ ಖರ್ಚು ವೆಚ್ಚಗಳ ಹೆಚ್ಚಳದಿಂದ ಬೆಲೆ ಏರಿಸಲೇ ಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ಹೇಳಿದ್ದವು.

ಇದನ್ನೂ ಓದಿ: ಇಂದಿನಿಂದ ದೆಹಲಿಯಲ್ಲೂ ನಂದಿನಿ ಉತ್ಪನ್ನಗಳ ಮಾರಾಟ, ಸಿಎಂ ಸಿದ್ದರಾಮಯ್ಯ ಚಾಲನೆ

ಹಾಲಿನ ದರ ಏರಿಸುವಂತೆ ರೈತರಿಂದ ಮನವಿ

ಕಳೆದ ವರ್ಷ ಡಿಸೆಂಬರ್​ನಲ್ಲಿ ರೈತರು ಹಾಗೂ ಹಾಲು‌ ಒಕ್ಕೂಟಗಳು ಪ್ರತಿ ಲೀಟರ್ ನಂದಿನಿ ಹಾಲಿನ ದರ 5 ರೂಪಾಯಿ ಏರಿಕೆ ಮಾಡುವಂತೆ ಕೆಎಂಎಫ್​ಗೆ ಮನವಿ ಮಾಡಿದ್ದವು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ತಿಳಿಸಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್​: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್​: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!
ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್
ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್
4ನೇ ಅತಿವೇಗದ ಅರ್ಧಶತಕ ಸಿಡಿಸಿದ ಮಾರ್ಷ್​
4ನೇ ಅತಿವೇಗದ ಅರ್ಧಶತಕ ಸಿಡಿಸಿದ ಮಾರ್ಷ್​
ಲಾಂಗ್ ಹಿಡಿದ ಪ್ರಕರಣ: ಪೊಲೀಸ್ ಠಾಣೆಯಲ್ಲಿ ರಜತ್, ವಿನಯ್ ವಿಚಾರಣೆ
ಲಾಂಗ್ ಹಿಡಿದ ಪ್ರಕರಣ: ಪೊಲೀಸ್ ಠಾಣೆಯಲ್ಲಿ ರಜತ್, ವಿನಯ್ ವಿಚಾರಣೆ
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
700 ಸಂಚಿಕೆ ಪೂರೈಸಿದ ಶ್ರೀರಸ್ತು ಶುಭಮಸ್ತು ಸೀರಿಯಲ್: ಸುಧಾರಾಣಿ ಸಡಗರ ನೋಡಿ
700 ಸಂಚಿಕೆ ಪೂರೈಸಿದ ಶ್ರೀರಸ್ತು ಶುಭಮಸ್ತು ಸೀರಿಯಲ್: ಸುಧಾರಾಣಿ ಸಡಗರ ನೋಡಿ
ಕಮ್ರಾ ವಿವಾದಾತ್ಮಕ ಶೋ ಬಳಿಕ ಮುಂಬೈ ಕಾಮಿಡಿ ಕ್ಲಬ್‌ ಧ್ವಂಸ ಕಾರ್ಯಾಚರಣೆ
ಕಮ್ರಾ ವಿವಾದಾತ್ಮಕ ಶೋ ಬಳಿಕ ಮುಂಬೈ ಕಾಮಿಡಿ ಕ್ಲಬ್‌ ಧ್ವಂಸ ಕಾರ್ಯಾಚರಣೆ
ಸ್ಪೀಕರ್ ಖಾದರ್ ನಿರ್ಣಯ ಪುನರ್ ಪರಿಶೀಲಿಸಿ ವಾಪಸ್ಸು ಪಡೆಯಬೇಕು: ಕಾಗೇರಿ
ಸ್ಪೀಕರ್ ಖಾದರ್ ನಿರ್ಣಯ ಪುನರ್ ಪರಿಶೀಲಿಸಿ ವಾಪಸ್ಸು ಪಡೆಯಬೇಕು: ಕಾಗೇರಿ