ಜ್ಞಾನವಾಪಿ ಮಸೀದಿ ಮಸೀದಿ ಕುರಿತ ಈಮೇಲ್ ಸೂಕ್ತ ಪರಿಷ್ಕರಣೆ ಮಾಡದೆ ಕಳಿಸಲಾಗಿತ್ತು ಎಂದ ಬೆಂಗಳೂರು ಶಾಲೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 24, 2022 | 9:10 PM

ಸದರಿ ಪ್ರಮಾದವನ್ನು ಮೊದಲ ಸ್ತರದ ಅದ್ಯತೆ ನೀಡಿ ನಿರ್ವಹಣೆ ಮಾಡಲಾಗುತ್ತಿದೆ. ಸಾಮಾನ್ಯವಾಗಿ ನಮ್ಮ ಸಂಸ್ಥೆಯಿಂದ ರವಾನೆಯಾಗುವ ಈಮೇಲ್ ಗಳ ಸೂಕ್ತ ಪರಿಷ್ಕರಣೆಯ ನಂತರವೇ ಕಳಿಸಲಾಗುತ್ತದೆ. ಆದರೆ ವಿವಾದಕ್ಕೆ ಕಾರಣವಾಗಿರುವ ಸದರಿ ಮೇಲ್ ವಿಷಯದಲ್ಲಿ ಅದು ಆಗಿಲ್ಲ ಎಂದು ಆಡಳಿತ ಮಂಡಳಿ ಹೇಳಿದೆ.

ಜ್ಞಾನವಾಪಿ ಮಸೀದಿ ಮಸೀದಿ ಕುರಿತ ಈಮೇಲ್ ಸೂಕ್ತ ಪರಿಷ್ಕರಣೆ ಮಾಡದೆ ಕಳಿಸಲಾಗಿತ್ತು ಎಂದ ಬೆಂಗಳೂರು ಶಾಲೆ
ನ್ಯೂ ಹೊರೈಜನ್ ಪಬ್ಲಿಕ್ ಶಾಲೆಯ ಸ್ಪಷ್ಟನೆ
Follow us on

Bengaluru:  ಮೂರು ದಿನಗಳ ಹಿಂದೆ ತನ್ನ ಶೈಕ್ಷಣಿಕ ಸಂಸ್ಥೆಯಲ್ಲಿ ಓದಿದ ಹಳೆ ವಿದ್ಯಾರ್ಥಿಗಳಿಗೆ (alumni) ವಿವಾದಾತ್ಮಕ ಈಮೇಲ್ (controversial email) ಕಳಿಸಿ ವ್ಯಾಪಕ ಖಂಡನೆಗೆ ಗುರಿಯಾಗಿದ್ದ ಬೆಂಗಳೂರಿನ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾಗಿರುನ ನ್ಯೂ ಹೊರೈಜನ್ ಪಬ್ಲಿಕ್ ಶಾಲೆ (New Horizon Public School) ತನ್ನಿಂದಾಗಿರುವ ಪ್ರಮಾದಕ್ಕೆ ಸ್ಪಷ್ಟನೆ ನೀಡಿದೆಯೇ ಹೊರತು ಕ್ಷಮೆ ಕೇಳಿಲ್ಲ. ಗೂಗಲ್ ‌ಮ್ಯಾಪ್ನಲ್ಲಿ ಜ್ಞಾನವಾಪಿ ಮಸೀದಿ ಬದಲು ಮಂದಿರ ಎಂದು ಬದಲಾಯಿಸಿಕೊಳ್ಳಿ ಅಂತ ಶಾಲೆಯು ತನ್ನ ಹಳೆ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಈಮೇಲ್ ಕಳಿಸಿತ್ತು.

ಕಳೆದ 50 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ನಮ್ಮ ಸಂಸ್ಥೆಯು ಈ ಎಲ್ಲ ವರ್ಷಗಳಲ್ಲಿ ವಿದ್ಯಾರ್ಥಿಗಳಿಗೆ ಸಮಗ್ರ ಶಿಕ್ಷಣ ನೀಡುವ ಪ್ರಯತ್ನಮಾಡುತ್ತಿದೆ. ನಮ್ಮ ಶಾಲಾ ಆವರಣದಲ್ಲಿ ಉತ್ತ್ತಮ ಶಿಕ್ಷಣಕ್ಕಾಗಿ ಪೂರಕ ಮತ್ತು ಸೌಹಾರ್ದಯುತ ವಾತಾವರಣವನ್ನು ಕಲ್ಪಿಸಲಾಗಿದೆ. ನಮ್ಮ ವಿದ್ಯಾರ್ಥಿಗಳಿಗೆ ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ಶಾಲೆಯಲ್ಲಿ ನೀಡಿದ್ದೇವೆ ಎಂದು ತನ್ನ ಸ್ಪಷ್ಟನೆಯಲ್ಲಿ ಹೇಳಿರುವ ನ್ಯೂ ಹೊರೈಜನ್ ಪಬ್ಲಿಕ್ ಶಾಲೆ ಆಡಳಿತ ಮಂಡಳಿಯು ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವ ಇಮೇಲ್‌ನ ಕಳಿಸಿದ್ದು ನಮ್ಮ ಗಮನಕ್ಕೆ ಬಂದಿದೆ ಎಂದಿದೆ.

ಈಮೇಲ್ ಕಳಿಸುವ ಮುನ್ನ ಸರಿಯಾದ ಪರಿಶೀಲನೆ ಆಗಿಲ್ಲ ಇದು ನಮ್ಮ ಕಣ್ತಪ್ಪಿನಿಂದ ಆದ ಪ್ರಮಾದ ಎಂದು ಆಡಳಿಯ ಮಂಡಳಿ ಸ್ಪಷ್ಟನೆ ನೀಡಿದೆ. ಸದರಿ ಪ್ರಮಾದವನ್ನು ಮೊದಲ ಸ್ತರದ ಅದ್ಯತೆ ನೀಡಿ ನಿರ್ವಹಣೆ ಮಾಡಲಾಗುತ್ತಿದೆ. ಸಾಮಾನ್ಯವಾಗಿ ನಮ್ಮ ಸಂಸ್ಥೆಯಿಂದ ರವಾನೆಯಾಗುವ ಈಮೇಲ್ ಗಳ ಸೂಕ್ತ ಪರಿಷ್ಕರಣೆಯ ನಂತರವೇ ಕಳಿಸಲಾಗುತ್ತದೆ. ಆದರೆ ವಿವಾದಕ್ಕೆ ಕಾರಣವಾಗಿರುವ ಸದರಿ ಮೇಲ್ ವಿಷಯದಲ್ಲಿ ಅದು ಆಗಿಲ್ಲ ಎಂದು ಆಡಳಿತ ಮಂಡಳಿ ಹೇಳಿದೆ.

ಭಾರತದ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಯಲ್ಲಿ ನಮಗೆ ಹೆಮ್ಮೆಯಿದೆ ಮತ್ತು ನಾವು ಅದನ್ನು ಪ್ರತಿದಿನ ಮತ್ತು ಶಾಲೆಯ ಎಲ್ಲ ಕಾರ್ಯಕ್ರಮಗಳಲ್ಲಿ ತತ್ವಶಃ ಪಾಲಿಸುತ್ತೇವೆ ಎಂದು ಮಂಡಳಿ ಹೇಳಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.