ಬೆಂಗಳೂರು: ಫುಟ್ ಪಾತ್ ವ್ಯಾಪಾರಿಗಳಿಗೆ ಬಿಸಿ ಮುಟ್ಟಿಸಲು ಸಜ್ಜಾದ ಪಾಲಿಕೆ

ಬೆಂಗಳೂರಿನಲ್ಲಿ ಫುಟ್ ಪಾತ್ ಒತ್ತುವರಿ ತೆರವಿಗೆ ಕೆಲದಿನಗಳ ಕಾಲ ಬ್ರೇಕ್ ನೀಡಿದ್ದ ಪಾಲಿಕೆ, ಇದೀಗ ಮತ್ತೆ ಕಾರ್ಯಾಚರಣೆಗೆ ಸಜ್ಜಾಗಿದೆ. ಫುಟ್ ಪಾತ್ ವ್ಯಾಪಾರಿಗಳಿಗೆ ಬಿಸಿ ಮುಟ್ಟಿಸಲು ಮುಂದಾಗಿರುವ ಬಿಬಿಎಂಪಿ, ಇದೀಗ ಕೆಲ ನಿಯಮಗಳನ್ನು ರೂಪಿಸಲು ಹೊರಟಿದೆ. ಶುಕ್ರವಾರವಷ್ಟೇ ಫುಟ್ ಪಾತ್​ಗಳ ಅತಿಕ್ರಮಣವಾಗಿರುವ ಕಡೆ ರೌಂಡ್ಸ್ ಹಾಕಿದ್ದ ಬಿಬಿಎಂಪಿಯ ಆಯುಕ್ತರು, ಒತ್ತುವರಿ ತೆರವಿಗೆ ಕಡಕ್ ಸೂಚನೆ ಕೊಟ್ಟಿದ್ದಾರೆ.

ಬೆಂಗಳೂರು: ಫುಟ್ ಪಾತ್ ವ್ಯಾಪಾರಿಗಳಿಗೆ ಬಿಸಿ ಮುಟ್ಟಿಸಲು ಸಜ್ಜಾದ ಪಾಲಿಕೆ
ಸಂಗ್ರಹ ಚಿತ್ರ
Edited By:

Updated on: Sep 21, 2024 | 6:36 PM

ಬೆಂಗಳೂರು, ಸೆಪ್ಟೆಂಬರ್ 21: ರಾಜಧಾನಿ ಬೆಂಗಳೂರಿನ ಫುಟ್ ಪಾತ್​​ಗಳಲ್ಲಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳಿಗೆ ಬಿಸಿ ಮುಟ್ಟಿಸಲು ಬಿಬಿಎಂಪಿ ಸಜ್ಜಾಗಿದೆ. ಶುಕ್ರವಾರವಷ್ಟೇ ಜಯನಗರ ಸುತ್ತಮುತ್ತ ಫುಟ್ ಪಾತ್ ವ್ಯಾಪಾರಿಗಳಿರುವ ಕಡೆ ರೌಂಡ್ಸ್ ಹಾಕಿದ್ದ ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್, ರಾಜಧಾನಿಯ ಫುಟ್ ಪಾತ್​ಗಳನ್ನ ಅತಿಕ್ರಮಿಸಿರುವವರ ಮೇಲೆ ಕ್ರಮ ಕೈಗೊಳ್ಳೋಕೆ ಆಯಾ ವಲಯದ ಆಯುಕ್ತರಿಗೆ ಸೂಚನೆ ಕೊಟ್ಟಿದ್ದಾರೆ.

ಇನ್ನು ಬೆಂಗಳೂರಿನ ಹಲವೆಡೆ ಫುಟ್ ಪಾತ್​​ಗಳ ಮೇಲೆ ವ್ಯಾಪಾರ ಮಾಡುತ್ತಿರುವುದರಿಂದ ಪಾದಚಾರಿಗಳ ಸಂಚಾರಕ್ಕೆ ಅಡಚಣೆ ಎದುರಾಗುತ್ತಿದೆ ಎಂದು ಪಾಲಿಕೆಗೆ ಹಲವು ದೂರುಗಳು ಬಂದಿದ್ದವು. ಈ ಬೆನ್ನಲ್ಲೆ ಅಲರ್ಟ್ ಆದ ಪಾಲಿಕೆ, ಇದೀಗ ಫುಟ್ ಪಾತ್ ವ್ಯಾಪಾರಿಗಳಿಗೆ ಕೆಲ ನಿಯಮ ಜಾರಿಗೆ ತrಲು ಕೂಡ ಚಿಂತನೆ ನಡೆಸಿದೆ. ಫುಟ್ ಪಾತ್ ಮೇಲೆ ವ್ಯಾಪಾರ ಮಾಡುವವರಿಗೆ ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಲು ಚಿಂತನೆ ನಡೆಸಿರುವ ಪಾಲಿಕೆ, ಸಮಿತಿ ಮೂಲಕ ಫುಟ್ ಪಾತ್ ವ್ಯಾಪಾರಿಗಳ ಮೇಲೆ ನಿಗಾ ಇಡಲು ಸಜ್ಜಾಗಿದೆ.

ಸದ್ಯ ಫುಟ್ ಪಾತ್​​​ಗಳಲ್ಲಿ ತಾತ್ಕಾಲಿಕವಾಗಿ ಪಾದಚಾರಿಗಳಿಗೆ ಸಮಸ್ಯೆಯಾಗದಂತೆ ವ್ಯಾಪಾರ ಮಾಡೋಕೆ ಅವಕಾಶ ನೀಡಿರೋ ಪಾಲಿಕೆ, ಫುಟ್ ಪಾತ್ ಮೇಲೆ ಅಂಗಡಿ ಹಾಕುವವರುರು, ಕಟ್ಟಡ ನಿರ್ಮಿಸುವವರ ಮೇಲೆ ಕ್ರಮ ಕೈಗೊಳ್ಳುವ ಸೂಚನೆ ನೀಡಿದೆ. ಸದ್ಯ ರಾಜಧಾನಿಯ ಟ್ರಾಫಿಕ್ ಕಿರಿಕಿರಿಯ ಮಧ್ಯೆ ಫುಟ್ ಪಾತ್ ಮೇಲೆ ಕೂಡ ಜಾಗ ಇಲ್ಲದೇ ಕಂಗಾಲಾಗಿದ್ದ ಪಾದಚಾರಿಗಳಿಗೆ, ಪಾಲಿಕೆ ಪ್ಲಾನ್ ಕೊಂಚ ರಿಲೀಫ್ ತಂದಂತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ