ಟಿವಿ9 ಅಭಿಯಾನದ ಬೆನ್ನಲ್ಲೆ ಎಚ್ಚೆತ್ತ ಬಿಬಿಎಂಪಿ: ಬೆಂಗಳೂರಿನ ಬೀದಿನಾಯಿಗಳಿಗೆ ಮೈಕ್ರೋಚಿಪ್ ಅಳವಡಿಕೆಗೆ ಪಾಲಿಕೆ ಸಜ್ಜು

ಬೆಂಗಳೂರಿನ ಬೀದಿನಾಯಿಗಳ ಕಾಟದ ಬಗ್ಗೆ ಟಿವಿ9 ನಿರಂತರ ವರದಿ ಪ್ರಸಾರ ಮಾಡಿತ್ತು. ಇತ್ತೀಚೆಗೆ ಬಿಬಿಎಂಪಿ ಪಶುಪಾಲನಾ ವಿಭಾಗದ ಮೂಲಕ ಬೀದಿನಾಯಿ ಕಡಿತ ಪ್ರಕರಣಗಳ ನಿರ್ವಹಣೆಗೆ ಹೆಲ್ಪ್ ಲೈನ್ ರಿಲೀಸ್ ಮಾಡಲಾಗಿತ್ತು. ಇದೀಗ ಬೆಂಗಳೂರಿನ ಬೀದಿನಾಯಿಗಳಿಗೆ ಮೈಕ್ರೋ ಚಿಪ್ ಅಳವಡಿಕೆ ಮಾಡಲಾಗುತ್ತಿದೆ. ಆ ಮೂಲಕ ಬೀದಿನಾಯಿಗಳ ಮೇಲೆ ನಿಗಾ ಇಡಲು ಪಾಲಿಕೆ ಸಜ್ಜಾಗಿದೆ.

ಟಿವಿ9 ಅಭಿಯಾನದ ಬೆನ್ನಲ್ಲೆ ಎಚ್ಚೆತ್ತ ಬಿಬಿಎಂಪಿ: ಬೆಂಗಳೂರಿನ ಬೀದಿನಾಯಿಗಳಿಗೆ ಮೈಕ್ರೋಚಿಪ್ ಅಳವಡಿಕೆಗೆ ಪಾಲಿಕೆ ಸಜ್ಜು
ಟಿವಿ9 ಅಭಿಯಾನದ ಬೆನ್ನಲ್ಲೆ ಎಚ್ಚೆತ್ತ ಬಿಬಿಎಂಪಿ: ಬೆಂಗಳೂರಿನ ಬೀದಿನಾಯಿಗಳಿಗೆ ಮೈಕ್ರೋಚಿಪ್ ಅಳವಡಿಕೆಗೆ ಪಾಲಿಕೆ ಸಜ್ಜು
Follow us
ಶಾಂತಮೂರ್ತಿ
| Updated By: ಗಂಗಾಧರ​ ಬ. ಸಾಬೋಜಿ

Updated on: Sep 21, 2024 | 5:20 PM

ಬೆಂಗಳೂರು, ಸೆಪ್ಟೆಂಬರ್ 21: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಾಯಿಗಳ (street Dogs) ಹಾವಳಿ ಕುರಿತಂತೆ ಟಿವಿ9 ಅಭಿಯಾನ ಮಾಡಿತ್ತು. ಟಿವಿ9 ಅಭಿಯಾನದ ಬೆನ್ನಲ್ಲೆ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡಿದ್ದು, ಇದೀಗ ಬೀದಿನಾಯಿಗಳಿಗೆ ಮೈಕ್ರೋ ಚಿಪ್ ಅಳವಡಿಕೆ ಮಾಡಲಾಗುತ್ತಿದೆ. ಇಂದು ಬಿಬಿಎಂಪಿ ವಿಶೇಷ ಆಯುಕ್ತ ಸುರಾಳ್ಕರ್​ ವಿಕಾಸ್ ಕಿಶೋರ್ ನೇತೃತ್ವದಲ್ಲಿ ಚಿಪ್ ಅಳವಡಿಕೆ ಚಾಲನೆ  ನೀಡಲಾಗಿದೆ.

ನಗರದ ಮಲ್ಲೇಶ್ವರ, ಮತ್ತಿಕೆರೆ ಸುತ್ತಮುತ್ತ ಮೈಕ್ರೋಚಿಪ್ ಅಳವಡಿಕೆ ಮಾಡಲಾಗುತ್ತಿದೆ. ಆ ಮೂಲಕ ಬೀದಿನಾಯಿಗಳ ಮೇಲೆ ನಿಗಾ ಇಡಲು ಪಾಲಿಕೆ ಸಜ್ಜಾಗಿದೆ. ನಾಯಿಯ ವಾಸಸ್ಥಳ, ಲಸಿಕೆ ನೀಡಿದ ದಿನಾಂಕ, ಎಬಿಸಿ ಸೇರಿ ಹಲವು ಮಾಹಿತಿ ಸಂಗ್ರಹಕ್ಕೆ ಚಿಪ್ ಸಹಕಾರಿ ಆಗಲಿದೆ. ಬಿಜ್ ಆರ್ಬಿಟ್ (BIZ ORBIT) ಸಂಸ್ಥೆ ಜೊತೆ ಸೇರಿ ಚಿಪ್ ಅಳವಡಿಕೆ ಬಿಬಿಎಂಪಿ ಮುಂದಾಗಿದ್ದು, ಪ್ರಯೋಗ ಯಶಸ್ವಿಯಾದರೆ ಎಲ್ಲಾ ವಲಯದ ಶ್ವಾನಗಳಿಗೆ ಅಳವಡಿಕೆಗೆ ಪ್ಲ್ಯಾನ್​ ಮಾಡಲಾಗುತ್ತಿದೆ.

ಇದನ್ನೂ ಓದಿ: ವೃದ್ಧೆಗೆ ಕಚ್ಚಿದ್ದ ಬೀದಿನಾಯಿಗಾಗಿ ಹುಡುಕಾಡಿ ಬಿಬಿಎಂಪಿ ಸುಸ್ತು! ಬರೋಬ್ಬರಿ 110ಕ್ಕೂ ಹೆಚ್ಚು ಬೀದಿನಾಯಿಗಳ ಪರಿಶೀಲನೆ

ಬೆಂಗಳೂರಿನ ಬೀದಿನಾಯಿಗಳ ಕಾಟದ ಬಗ್ಗೆ ಟಿವಿ9 ನಿರಂತರ ವರದಿ ಪ್ರಸಾರ ಮಾಡಿತ್ತು. ಬೀದಿನಾಯಿಗಳ ಬಗ್ಗೆ ಸೈಲೆಂಟ್ ಆಗಿದ್ದ ಪಾಲಿಕೆ ಆಯುಕ್ತರಿಗೆ ಒದೊಂದು ದಿನ ಬೀದಿನಾಯಿಗಳ ರೋಷಾವೇಷದ ಪ್ರದರ್ಶನವಾಗಿತ್ತು. ಗುಂಡಿ ಮುಚ್ಚುವ ಕೆಲಸ ಪರಿಶೀಲನೆ ವೇಳೆ ಬೀದಿನಾಯಿಗಳು ಅಟ್ಯಾಕ್​ ಮಾಡಿದ್ದವು. ಆ ಘಟನೆ ನಡೆದ ಬಳಿಕ ಬಿಬಿಎಂಪಿ ಪಶುಪಾಲನಾ ವಿಭಾಗದ ಮೂಲಕ ಬೀದಿನಾಯಿ ಕಡಿತ ಪ್ರಕರಣಗಳ ನಿರ್ವಹಣೆಗೆ ಹೆಲ್ಪ್ ಲೈನ್ ರಿಲೀಸ್ ಮಾಡಲಾಗಿತ್ತು.

ಬೀದಿನಾಯಿಗಳ ರೋಷಾವೇಷವನ್ನ ಕಣ್ಣಾರೆ ಕಂಡ ಪಾಲಿಕೆ ಮುಖ್ಯ ಆಯುಕ್ತರು, ಬಿಬಿಎಂಪಿಯ ಪಶುಪಾಲನ ಇಲಾಖೆ ಮೂಲಕ ಬೀದಿನಾಯಿಗಳ ಕಡಿತ ಹಾಗೂ ರೇಬಿಸ್​ಗೆ ಹೆಲ್ಪ್ ಲೈನ್ ನಂಬರ್ ಬಿಡುಗಡೆ ಮಾಡಿ ಪ್ರಕಟಣೆ ಹೊರಡಿಸಿದ್ದರು.

ಇದನ್ನೂ ಓದಿ: ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ BBMPಯಿಂದ 4 ವರ್ಷದಲ್ಲಿ 40 ಕೋಟಿ ರೂ. ಖರ್ಚು

6364893322 ಹಾಗೂ 1533 ಸಹಾಯವಾಣಿ ಬಿಡುಗಡೆ ಮಾಡಿರುವ ಪಾಲಿಕೆ, ಇದರ ಜೊತೆಗೆ ಬಿಬಿಎಂಪಿ ವ್ಯಾಪ್ತಿಯ ಡಾಗ್ ಕೆನಲ್ ಹೆಚ್ಚಳಕ್ಕೂ ತಯಾರಿ ನಡೆಸಿತ್ತು. ಇನ್ನು ಸಂತಾನಹರಣ, ರೋಗ ನಿರೋಧಕ ಚುಚ್ಚುಮದ್ದು ನೀಡುವುದನ್ನು ಕೂಡ ಹೆಚ್ಚಿಸಲು ಚಿಂತನೆ ನಡೆಸಿದ್ದು, ಟಿವಿ9 ವರದಿ ಬಳಿಕ ಪಾಲಿಕೆ ಅಲರ್ಟ್ ಆಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್