ವೃದ್ಧೆಗೆ ಕಚ್ಚಿದ್ದ ಬೀದಿನಾಯಿಗಾಗಿ ಹುಡುಕಾಡಿ ಬಿಬಿಎಂಪಿ ಸುಸ್ತು! ಬರೋಬ್ಬರಿ 110ಕ್ಕೂ ಹೆಚ್ಚು ಬೀದಿನಾಯಿಗಳ ಪರಿಶೀಲನೆ

ಜಾಲಹಳ್ಳಿಯ ಸುತ್ತಮುತ್ತ ಡೆಡ್ಲಿ ಡಾಗ್ ಗೆ ಹುಡುಕಾಟ ನಡೆಸಿದ್ದು, ವೃದ್ಧೆಗೆ ಕಚ್ಚಿದ್ದ ಬೀದಿನಾಯಿಗಾಗಿ ಹುಡುಕಿ ಪಾಲಿಕೆ ಸುಸ್ತಾಗಿದೆ. ಬರೋಬ್ಬರಿ 110ಕ್ಕೂ ಹೆಚ್ಚು ಬೀದಿನಾಯಿಗಳನ್ನು ಪರಿಶೀಲನೆ ಮಾಡಲಾಗಿದೆ. ಆದರೆ ವೃದ್ಧೆಗೆ ಕಚ್ಚಿದ್ದ ನಾಯಿ ಪತ್ತೆಯಾಗದೇ ಅಧಿಕಾರಿಗಳಿಗೆ ತಲೆನೋವಾಗಿದೆ. ಸದ್ಯ ವೃದ್ಧೆಗೆ ಕಚ್ಚಿದ್ದ ನಾಯಿ ಹುಡುಕುವ ಪ್ರಯತ್ನದಲ್ಲಿದ್ದೇವೆ ಎಂದಿದ್ದಾರೆ.

ವೃದ್ಧೆಗೆ ಕಚ್ಚಿದ್ದ ಬೀದಿನಾಯಿಗಾಗಿ ಹುಡುಕಾಡಿ ಬಿಬಿಎಂಪಿ ಸುಸ್ತು! ಬರೋಬ್ಬರಿ 110ಕ್ಕೂ ಹೆಚ್ಚು ಬೀದಿನಾಯಿಗಳ ಪರಿಶೀಲನೆ
ವೃದ್ಧೆಗೆ ಕಚ್ಚಿದ್ದ ಬೀದಿನಾಯಿಗಾಗಿ ಹುಡುಕಾಡಿ ಬಿಬಿಎಂಪಿ ಸುಸ್ತು! ಬರೋಬ್ಬರಿ 110ಕ್ಕೂ ಹೆಚ್ಚು ಬೀದಿನಾಯಿಗಳ ಪರಿಶೀಲಿನೆ
Follow us
ಶಾಂತಮೂರ್ತಿ
| Updated By: ಗಂಗಾಧರ​ ಬ. ಸಾಬೋಜಿ

Updated on:Sep 13, 2024 | 3:43 PM

ಬೆಂಗಳೂರು, ಸೆಪ್ಟೆಂಬರ್​​ 13: ಇತ್ತೀಚೆಗಷ್ಟೇ ಜಾಲಹಳ್ಳಿಯಲ್ಲಿ ಬೀದಿನಾಯಿಗಳ (street dog) ದಾಳಿಗೆ ವೃದ್ಧೆಯೊಬ್ಬರು ಮೃತಪಟ್ಟಿದ್ದರು. ಈ ಬಗ್ಗೆ ಜಾಲಹಳ್ಳಿಯ ಪೊಲೀಸ್ ಠಾಣೆಯಲ್ಲಿ ವೃದ್ಧೆ ಕುಟುಂಬಸ್ಥರು ದೂರು ದಾಖಲಿಸಿದ್ದರು. ಇದೀಗ ವೃದ್ಧೆಗೆ ಕಚ್ಚಿದ್ದ ನಾಯಿ ಹುಡುಕಲು ಜಾಲಹಳ್ಳಿ ಪೊಲೀಸರು, ಬಿಬಿಎಂಪಿಯ ಪಶುಪಾಲನಾ ಇಲಾಖೆ ಸರ್ಕಸ್​ ಮಾಡುತ್ತಿದ್ದು, ಎಷ್ಟೇ ಹುಡುಕಿದ್ರೂ ಶ್ವಾನ ಮಾತ್ರ ಪತ್ತೆಯಾಗಿಲ್ಲ.

ಜಾಲಹಳ್ಳಿಯ ಸುತ್ತಮುತ್ತ ಡೆಡ್ಲಿ ಡಾಗ್ ಗೆ ಹುಡುಕಾಟ ನಡೆಸಿದ್ದು, ವೃದ್ಧೆಗೆ ಕಚ್ಚಿದ್ದ ಬೀದಿನಾಯಿಗಾಗಿ ಹುಡುಕಿ ಪಾಲಿಕೆ ಸುಸ್ತಾಗಿದೆ. ಬರೋಬ್ಬರಿ 110ಕ್ಕೂ ಹೆಚ್ಚು ಬೀದಿನಾಯಿಗಳನ್ನು ಪರಿಶೀಲನೆ ಮಾಡಲಾಗಿದೆ. ಆದರೆ ವೃದ್ಧೆಗೆ ಕಚ್ಚಿದ್ದ ನಾಯಿ ಪತ್ತೆಯಾಗದೇ ಅಧಿಕಾರಿಗಳಿಗೆ ತಲೆನೋವಾಗಿದೆ. ಸದ್ಯ ವೃದ್ಧೆಗೆ ಕಚ್ಚಿದ್ದ ನಾಯಿ ಹುಡುಕುವ ಪ್ರಯತ್ನದಲ್ಲಿದ್ದೇವೆ. ಈಗಾಗಲೇ ವೃದ್ಧೆ ಕುಟುಂಬಕ್ಕೆ ಪರಿಹಾರ ಕೊಟ್ಟಿದ್ದೇವೆ ಎಂದು ವಿಶೇಷ ಆಯುಕ್ತರು ತಿಳಿಸಿದ್ದಾರೆ.

ಇದನ್ನೂ ಓದಿ: ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ BBMPಯಿಂದ 4 ವರ್ಷದಲ್ಲಿ 40 ಕೋಟಿ ರೂ. ಖರ್ಚು

ಸದ್ಯ ಬೆಂಗಳೂರಿನಲ್ಲಿ ಜನರಿಗೆ ಸಂಕಷ್ಟ ತಂದಿಟ್ಟಿರುವ ಬೀದಿನಾಯಿಗಳ ಕಾಟಕ್ಕೆ ಕಡಿವಾಣ ಹಾಕುವುದಕ್ಕೆ ಪಾಲಿಕೆ ಇನ್ನು ಎಚ್ಚೆತ್ತುಕೊಂಡಿಲ್ಲ. ಬೀದಿನಾಯಿಗಳನ್ನ ನಿಯಂತ್ರಣ ಮಾಡಬೇಕಿದ್ದ ಪಾಲಿಕೆಯ ನಿರ್ಲಕ್ಷ್ಯಕ್ಕೆ ಸಿಟಿಮಂದಿ ಹೈರಾಣಾಗಿದ್ದು, ಗಲ್ಲಿ ಗಲ್ಲಿಯಲ್ಲೂ ಬೀದಿನಾಯಿಗಳ ಕಾಟ ಹೆಚ್ಚಾಗಿದೆ. ಜೆ.ಪಿ.ನಗರ 7th ಫೇಸ್, ಚುಂಚಘಟ್ಟ ಸುತ್ತಮುತ್ತ ಬೌಬೌ ಗ್ಯಾಂಗ್ ಕಾಟಕ್ಕೆ ಏರಿಯಾ ಜನ ಬೇಸತ್ತು ಹೋಗಿದ್ದಾರೆ. ಕಂಡ ಕಂಡವರ ಮೇಲೆ ಅಟ್ಯಾಕ್ ಮಾಡುತ್ತಿರುವ ಬೌಬೌ ಅಟ್ಟಹಾಸಕ್ಕೆ ಬ್ರೇಕ್ ಹಾಕಿ ಎಂದು ಏರಿಯಾ ಜನ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚಾದ ಬೀದಿ ನಾಯಿಗಳ ಕಾಟ; ಕಬ್ಬನ್ ಪಾರ್ಕ್ ನಲ್ಲೂ ಸಾಕುನಾಯಿಗಳ ಮಾಲೀಕರಿಂದ ರೂಲ್ಸ್ ಬ್ರೇಕ್

ಬೆಳಗ್ಗೆಯಲ್ಲ ಸಿಕ್ಕ ಸಿಕ್ಕ ಕಡೆ ನಿದ್ದೆಗೆ ಜಾರುವ ಶ್ವಾನ ಪಡೆ, ರಾತ್ರಿಯಾದ್ರೆ ಸಾಕು ಏರಿಯಾ ಜನರ ನೆಮ್ಮದಿ ಕೆಡಿಸುತ್ತಿವೆ. ವಾಹನ ಸವಾರರು, ಪಾದಚಾರಿಗಳು ಹೀಗೆ ಸಿಕ್ಕ ಸಿಕ್ಕವರ ಮೇಲೆ ಅಟ್ಯಾಕ್ ಮಾಡುತ್ತಿರುವ ಬೌಬೌ ಗ್ಯಾಂಗ್ ಕಾಟಕ್ಕೆ ಸುಸ್ತಾದ ಜನ ರಸ್ತೆಯಲ್ಲಿ ಓಡಾಡುವುದಕ್ಕೆ ಹೆದರು ಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:42 pm, Fri, 13 September 24

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್