ನಾಯಿಗಳ ದಾಳಿ: ಕರ್ನಾಟಕದಲ್ಲಿ ಈವರೆಗೂ 12ಕ್ಕೂ ಹೆಚ್ಚು ಜನರು ರೇಬಿಸ್​ಗೆ ಬಲಿ!

ಕರ್ನಾಟಕದಲ್ಲಿ ರೇಬಿಸ್​ ರೋಗ ಕೊಂಚ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂಬ ಆತಂಕಕಾರಿ ಅಂಶ ಬಯಲಾಗಿದೆ. ಬೀದಿ ನಾಯಿಗಳ ಹಾವಳಿಯಿಂದ ಪೋಷಕರು ಮಕ್ಕಳನ್ನು ಮನೆಯಿಂದ ಹೊರಗಡೆ ಬಿಡಲು ಹಿಂಜರಿಯುತ್ತಿದ್ದಾರೆ. ಬೆಂಗಳೂರಲ್ಲೂ ನಾಯಿಗಳ ದಾಳಿ ಹೆಚ್ಚಾಗಿದೆ. ಕಡಿವಾಣ ಹಾಕುವಂತೆ ಸಾರ್ವಜನಿಕರು ಬಿಬಿಎಂಪಿಗೆ ಮನವಿ ಮಾಡಿದ್ದಾರೆ. ​

ನಾಯಿಗಳ ದಾಳಿ: ಕರ್ನಾಟಕದಲ್ಲಿ ಈವರೆಗೂ 12ಕ್ಕೂ ಹೆಚ್ಚು ಜನರು ರೇಬಿಸ್​ಗೆ ಬಲಿ!
ನಾಯಿಗಳು
Follow us
Vinay Kashappanavar
| Updated By: ವಿವೇಕ ಬಿರಾದಾರ

Updated on:Sep 01, 2024 | 12:41 PM

ಬೆಂಗಳೂರು, ಸೆಪ್ಟೆಂಬರ್​ 01: ಕರ್ನಾಟಕದಲ್ಲಿ (Karnataka) ರೇಬಿಸ್​ ರೋಗ (Rabies disease) ಜೋರಾಗಿದೆ. ಬೆಂಗಳೂರು (Bengaluru) ಸೇರಿದ್ದಂತೆ ರಾಜ್ಯದಲ್ಲಿ ಪ್ರತಿ ವರ್ಷ ರೇಬೀಸ್ ರೋಗಕ್ಕೆ 25ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಈ ವರ್ಷ ಈಗಾಗಲೇ ರಾಜ್ಯದಲ್ಲಿ 12ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. 2022ರಲ್ಲಿ 32 ಜನರು ರೇಬಿಸ್​ ರೋಗಕ್ಕೆ ಬಲಿಯಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರೇಬಿಸ್​ ಪ್ರಕರಣಗಳು ಕೊಂಚ ಏರಿಕೆಯಾಗಿದೆ. ಹೀಗಾಗಿ ರೇಬಿಸ್​ ಇಂಜೆಕ್ಷನ್​ಗೆ ಬೇಡಿಕೆಗೆ ಹೆಚ್ಚಿದೆ.

ರೇಬೀಸ್ ರೋಗ ನಾಯಿ, ಬೆಕ್ಕು, ಮಂಗಗಳು, ಬಾವಲಿ, ದನ, ಮೇಕೆ ಕಡಿತದಿಂದ ಹರಡಬಹುದು. ಸಾಕು ನಾಯಿಯೇ ಇರಲಿ ಅಥವಾ ಬೀದಿ ನಾಯಿಯೇ ಇರಲಿ ಪ್ರಾಣಿಗಳು ಕಚ್ಚಿದರೆ ಕಡೆಗಣಿಸದೆ ತಕ್ಷಣ ಚಿಕಿತ್ಸೆ ಪಡೆಯುವುವಂತೆ ವೈದ್ಯರು ಹೇಳಿದ್ದಾರೆ.

ಎಲ್ಲ ನಾಯಿಗಳ ಕಡಿತದಿಂದ ರೇಬಿಸ್​ ರೋಗ ಕಂಡು ಬರುವುದಿಲ್ಲ. ರೇಬಿಸ್​ ಸೋಂಕಿತ ಅಥವಾ ಹುಚ್ಚು ನಾಯಿ ಕಡಿತದಿಂದ ಈ ರೋಗ ಬರುತ್ತದೆ. ಕಾಯಿಲೆ ಇರುವು ನಾಯಿ, ಬೆಕ್ಕು ಮತ್ತು ಮಂಗಗಳ ಕಡಿತದಿಂದ ಈ ಖಾಯಿಲೆ ಬರುತ್ತದೆ. ಕೊಂಚ ನಿರ್ಲಕ್ಷ್ಯ ವಹಿಸಿದರೆ ಜೀವಹಾನಿ ಕೂಡ ಆಗುವ ಸಾಧ್ಯತೆ ಇದೆ ಎಂದು ಹೇಳಿದರು.

ಇದನ್ನೂ ಓದಿ: Rabies: ನಾಯಿ ಕಚ್ಚಿದ ನಂತರ ರೇಬೀಸ್ ಇಂಜೆಕ್ಷನ್ ಪಡೆದರೂ ಸಾಯುವ ಸಾಧ್ಯತೆ ಉಂಟಾ?

ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ

ಬೆಂಗಳೂರಿನ ಕುರಬರಹಳ್ಳಿ, ಲಗ್ಗೇರೆ, ರಾಜಾಜಿನಗರ, ಬಸವೇಶ್ವರನಗರ ಹಾಗೂ ರಾಜಗೋಪಾಲನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದೆ. ಪ್ರತಿ ಏರಿಯಾಗಳಲ್ಲಿ 8 ರಿಂದ 10 ಬೀದಿನಾಯಿಗಳಿವೆ. ಈ ಬೀದಿ ನಾಯಿಗಳು ರಾತ್ರಿ ವೇಳೆ ಬೈಕ್ ಸವಾರರಿಗೆ ಕಾಟ ಕೊಡುತ್ತಿವೆ. ಬೀದಿ ನಾಯಿಗಳ ಕಾಟದಿಂದ ಪೋಷಕರು ಮಕ್ಕಳನ್ನು ಮನೆಯಿಂದ ಹೊರಗಡೆ ಕಳಿಸಲು ಭಯ ಪಡುತ್ತಿದ್ದಾರೆ. ಬೀದಿ ನಾಯಿಗಳು ಗುಂಪು ಗುಂಪಾಗಿ ಬಂದು ಜನರಿಗೆ ತೊಂದರೆ ಕೊಡುತ್ತಿವೆ. ಹೀಗಾಗಿ, ಬೀದಿನಾಯಿಗಳ ನಿಯಂತ್ರಣಕ್ಕೆ ಬಿಬಿಎಂಪಿಗೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಕಳೆದ ಎಂಟು ತಿಂಗಳಲ್ಲಿ 16,888 ನಾಯಿ ದಾಳಿಯ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಶೇ 40 ರಷ್ಟು ಸಾಕು ನಾಯಿಗಳು ದಾಳಿ ಮಾಡಿವೆ ಎಂದು ಬಿಬಿಎಂಪಿ ವರದಿಯಲ್ಲಿ ಬಹಿರಂಗವಾಗಿದೆ. ಬಿಬಿಎಂಪಿ ಪೂರ್ವ-ಪಶ್ಚಿಮ ವಲಯದಲ್ಲಿ ನಾಯಿಗಳ ಕಾಟ ಹೆಚ್ಚಾಗಿದೆ. ಜನವರಿಯಿಂದ ಜುಲೈವರೆಗಿನ ನಾಯಿಗಳ ದಾಳಿ ವಿವರ ಇಲ್ಲಿದೆ.

ಬೀದಿ ನಾಯಿಗಳ ದಾಳಿ

ಬೊಮ್ಮನಹಳ್ಳಿ: 782, ದಾಸರಹಳ್ಳಿ: 475, ಪೂರ್ವ: 2107, ಮಹದೇವಪುರ: 1359, ಆರ್.ಆರ್.ನಗರ: 1328, ದಕ್ಷಿಣ ವಲಯ: 1258, ಪಶ್ಚಿಮ ವಲಯ: 3479, ಯಲಹಂಕ ವಲಯ: 660, ಒಟ್ಟು: 11448 ಬೀದಿ ನಾಯಿಗಳು ದಾಳಿ ಮಾಡಿವೆ.

ಸಾಕು ನಾಯಿಗಳ ದಾಳಿ

ದಾಸರಹಳ್ಳಿ ವಲಯ: 271, ಪೂರ್ವ ವಲಯ: 975, ಮಹದೇವಪುರ ವಲಯ: 683, ಆರ್.ಆರ್.ನಗರ: 778, ದಕ್ಷಿಣ ವಲಯ: 489, ಪಶ್ಚಿಮ ವಲಯ: 1505, ಯಲಹಂಕ ವಲಯ: 392, ಒಟ್ಟು: 5440 ಸಾಕು ನಾಯಿಗಳು ದಾಳಿ ಮಾಡಿವೆ.

ರೇಬಿಸ್​ ರೋಗದ ಲಕ್ಷಣಗಳು

ತೀವ್ರ ನೋವು, ಸುಸ್ತಾಗುವುದು ತಲೆನೋವು, ತೀವ್ರ ಜ್ವರ, ಸ್ನಾಯುಗಳ ಬಿಗಿತ ಮತ್ತು ನೋವು, ಪಾರ್ಶ್ವವಾಯು, ಲಾಲಾರಸ ಅಥವಾ ಕಣ್ಣೀರು ಹೆಚ್ಚು ಉತ್ಪತ್ತಿಯಾಗಲು ಪ್ರಾರಂಭಿಸುವುದು. ದೊಡ್ಡ ಶಬ್ದಗಳಿಂದ ಕಿರಿಕಿರಿ ಹಾಗೂ ಮಾತನಾಡಲು ತೊಂದರೆಯಾಗುವುದು ಇತಂಹ ಲಕ್ಷಣ ಕಂಡು ಬಂದರೇ ನಿರ್ಲಕ್ಷ್ಯ ಮಾಡದೆ ಕೂಡಲೆ ಚಿಕಿತ್ಸೆ ಪಡೆಯಿರಿ ಎಂದು ವೈದ್ಯರು ಸೂಚಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:32 pm, Sun, 1 September 24