Rabies: ನಾಯಿ ಕಚ್ಚಿದ ನಂತರ ರೇಬೀಸ್ ಇಂಜೆಕ್ಷನ್ ಪಡೆದರೂ ಸಾಯುವ ಸಾಧ್ಯತೆ ಉಂಟಾ?

ರೇಬೀಸ್ ಸೋಂಕಿತ ಪ್ರಾಣಿಗಳ ಲಾಲಾರಸದಿಂದ ಜನರಿಗೆ ಹರಡುವ ಮಾರಣಾಂತಿಕ ವೈರಸ್ ಆಗಿದೆ. ರೇಬೀಸ್ ವೈರಸ್ ಸಾಮಾನ್ಯವಾಗಿ ಸೋಂಕಿತ ಪ್ರಾಣಿಯ ಕಚ್ಚುವಿಕೆಯ ಮೂಲಕ ಹರಡುತ್ತದೆ. ಬಾವಲಿಗಳು, ನರಿಗಳು, ರಕೂನ್​ಗಳು ರೇಬಿಸ್ ಅನ್ನು ಹರಡುವ ಸಾಧ್ಯತೆ ಇರುವ ಪ್ರಾಣಿಗಳಾಗಿವೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಬೀದಿ ನಾಯಿಗಳು ಜನರಿಗೆ ರೇಬೀಸ್ ಅನ್ನು ಹರಡುವ ಸಾಧ್ಯತೆ ಹೆಚ್ಚಾಗಿದೆ.

Rabies: ನಾಯಿ ಕಚ್ಚಿದ ನಂತರ ರೇಬೀಸ್ ಇಂಜೆಕ್ಷನ್ ಪಡೆದರೂ ಸಾಯುವ ಸಾಧ್ಯತೆ ಉಂಟಾ?
ರೇಬೀಸ್
Follow us
ಸುಷ್ಮಾ ಚಕ್ರೆ
|

Updated on: Mar 16, 2024 | 1:35 PM

ಇತ್ತೀಚೆಗೆ ಬೀದಿನಾಯಿ ಕಚ್ಚಿದ್ದರಿಂದ 21 ವರ್ಷದ ಮಹಿಳೆ ರೇಬಿಸ್‌ಗೆ (Rabies) ಬಲಿಯಾಗಿದ್ದಾರೆ. ಅವರು ಮಹಾರಾಷ್ಟ್ರದ ಕೊಲ್ಹಾಪುರದವರಾಗಿದ್ದು, ಆ್ಯಂಟಿ ರೇಬಿಸ್ ಲಸಿಕೆ ಕೋರ್ಸ್ ಅನ್ನು ಪೂರ್ಣಗೊಳಿಸಿದ 3 ದಿನಗಳ ನಂತರ ನಿಧನರಾದರು. ಯುವತಿಯು ಕಚ್ಚಿದ ನಂತರ ಆಂಟಿ ರೇಬಿಸ್ ಲಸಿಕೆಯ ಎಲ್ಲಾ 5 ಡೋಸ್‌ಗಳನ್ನು ತೆಗೆದುಕೊಂಡಿದ್ದಳು. ಈ ಹಿನ್ನೆಲೆಯಲ್ಲಿ ರೇಬಿಸ್ ಲಸಿಕೆ ಪಡೆದ ನಂತರವೂ ರೇಬಿಸ್​ನಿಂದ ಸಾಯುವ ಅಪಾಯದ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ.

ರೇಬೀಸ್ ಎಂಬುದು ಹೆಚ್ಚು ಮಾರಣಾಂತಿಕ ವೈರಲ್ ಸೋಂಕಾಗಿದೆ. ಸೋಂಕಿತ ಪ್ರಾಣಿಯ ಲಾಲಾರಸದ ಮೂಲಕ ಹೆಚ್ಚಾಗಿ ಬೀದಿ ನಾಯಿ, ಬೆಕ್ಕು ಅಥವಾ ಬಾವಲಿಗಳು ಕಚ್ಚುವುದರಿಂದ ಹರಡುತ್ತದೆ. ರೇಬೀಸ್ ವೈರಸ್ ಸಸ್ತನಿಗಳ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಅಂತಿಮವಾಗಿ ಮೆದುಳಿನಲ್ಲಿ ರೋಗವನ್ನು ಉಂಟುಮಾಡುತ್ತದೆ ಮತ್ತು ಸಾವಿಗೆ ಕಾರಣವಾಗುತ್ತದೆ. ಜನರಲ್ಲಿ ರೇಬೀಸ್‌ನ ರೋಗಲಕ್ಷಣಗಳು ಉಂಟಾದಾಗ ಅದನ್ನು ನಿರ್ಲಕ್ಷ್ಯ ಮಾಡಬಾರದು. ಈ ಕಾರಣಕ್ಕಾಗಿ, ರೇಬೀಸ್ ಸೋಂಕಿಗೆ ಒಳಗಾಗುವ ಅಪಾಯವನ್ನು ಹೊಂದಿರುವ ಎಲ್ಲರೂ ರಕ್ಷಣೆಗಾಗಿ ರೇಬೀಸ್ ಲಸಿಕೆಗಳನ್ನು ಪಡೆಯಬೇಕು.

ಇದನ್ನೂ ಓದಿ: ಮಾರಣಾಂತಿಕ ರೇಬಿಸ್ ರೋಗದ ಬಗ್ಗೆ ಈ ಸಂಗತಿಗಳು ತಿಳಿದಿರಲಿ

ಸೋಂಕಿತ ಬೀದಿ ನಾಯಿ ಅಥವಾ ಬೆಕ್ಕು ಕಚ್ಚಿದ ನಂತರ, ರೋಗಲಕ್ಷಣಗಳನ್ನು ಉಂಟುಮಾಡುವ ಮೊದಲು ರೇಬೀಸ್ ವೈರಸ್ ಮೆದುಳಿಗೆ ಪ್ರಯಾಣಿಸಬೇಕಾಗುತ್ತದೆ. ಅದರ ಕಾಲಾವಧಿಯು ವಾರಗಳಿಂದ ತಿಂಗಳುಗಳವರೆಗೆ ಇರುತ್ತದೆ. ಆದರೂ ಕ್ಲಿನಿಕಲ್ ಲಕ್ಷಣಗಳು ಕಾಣಿಸಿಕೊಂಡ ನಂತರ, ರೋಗವು ಬಹಳ ಮಾರಣಾಂತಿಕವಾಗುತ್ತದೆ.

ರೇಬೀಸ್ ಚಿಕಿತ್ಸೆಯು ವಿಫಲವಾಗಬಹುದೇ?:

“ವೈದ್ಯಕೀಯ ಸಂಶೋಧನೆಯಲ್ಲಿ ಕೆಲವು ಸಂದರ್ಭದಲ್ಲಿ ರೇಬಿಸ್ ಚಿಕಿತ್ಸೆಯು ವಿಫಲವಾಗಬಹುದು. ಅಂತಹ ಒಂದು ನಿದರ್ಶನದಲ್ಲಿ, 21 ವರ್ಷ ವಯಸ್ಸಿನ ಮಹಿಳೆ ರೇಬೀಸ್ ಚಿಕಿತ್ಸೆಗೆ ಸರಿಯಾಗಿ ಪ್ರತಿಕ್ರಿಯಿಸಲಿಲ್ಲ. ಅವರು ನಾಯಿ ಕಚ್ಚಿದ ತಕ್ಷಣ PEP ಪಡೆದಿದ್ದರೂ ಸಹ, ರೇಬಿಸ್​​ನಿಂದ ಬಚಾವಾಗಲು ಸಾಧ್ಯವಾಗಲಿಲ್ಲ. ಈ ಘಟನೆಗಳು ರೇಬೀಸ್ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯ ಬಗ್ಗೆ ನಿರಂತರ ಅಧ್ಯಯನ ಮತ್ತು ಶಿಕ್ಷಣದ ಮೌಲ್ಯವನ್ನು ಪ್ರದರ್ಶಿಸುತ್ತವೆ”ಎಂದು ಗುರುಗ್ರಾಮ್‌ನ ಮಾರೆಂಗೊ ಏಷ್ಯಾ ಆಸ್ಪತ್ರೆಯ ಆಂತರಿಕ ಔಷಧದ ಹಿರಿಯ ಸಲಹೆಗಾರ ಡಾ. ಮೋಹನ್ ಕುಮಾರ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ವೈರಲ್ ಸೋಂಕು ನಿಯಂತ್ರಿಸಲು ಬೆಳಗ್ಗೆ ಈ 5 ಪಾನೀಯ ಸೇವಿಸಿ

ರೇಬೀಸ್ ಲಕ್ಷಣಗಳು:

ರೇಬೀಸ್ ಹೆಚ್ಚಾಗುವ ಅವಧಿಯು ವಾರಗಳು ಅಥವಾ ತಿಂಗಳುಗಳವರೆಗೆ ಇರುತ್ತದೆ. ಆರಂಭಿಕ ರೋಗಲಕ್ಷಣಗಳು ಸೌಮ್ಯವಾಗಿರುತ್ತವೆ ಮತ್ತು ಸಾಮಾನ್ಯ ರೀತಿಯ ವೈರಲ್ ಸೋಂಕನ್ನು ಹೋಲುತ್ತವೆ. ಶೀಘ್ರದಲ್ಲೇ ಈ ರೋಗವು ಮೆದುಳಿಗೆ ಹರಡುತ್ತದೆ. ಇದು ಆತಂಕ, ಗೊಂದಲ, ಭ್ರಮೆ, ಹೈಡ್ರೋಫೋಬಿಯಾ (ನೀರಿನ ಭಯ) ಮತ್ತು ನಿದ್ರಾಹೀನತೆಗಳಂತಹ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್