ರೇಬಿಸ್ ರೋಗ ತಡೆಗಟ್ಟಲು ಸಂತಾನ ಶಕ್ತಿ ಹರಣ ಚಿಕಿತ್ಸೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಳೆಯಿಂದ ಬೀದಿ ನಾಯಿಗಳ ಸಮೀಕ್ಷೆ

ಬಿಬಿಎಂಪಿ ವತಿಯಿಂದ ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣ ಹಾಗೂ ರೇಬಿಸ್ ರೋಗ ತಡೆಗಟ್ಟಲು ಸಂತಾನ ಶಕ್ತಿ ಹರಣ ಚಿಕಿತ್ಸೆ ಮತ್ತು ಆಂಟಿರೇಬಿಸ್ ಲಸಿಕಾ ಕಾರ್ಯಕ್ರಮ ಕೂಡ ಕೈಗೊಳ್ಳಲಾಗಿದ್ದು, ಒಟ್ಟು 14 ದಿನಗಳ ಕಾಲ ಲಸಿಕಾ ಹಾಗೂ ಸರ್ವೇ ಕಾರ್ಯ ನಡೆಯಲಿದೆ.

ರೇಬಿಸ್ ರೋಗ ತಡೆಗಟ್ಟಲು ಸಂತಾನ ಶಕ್ತಿ ಹರಣ ಚಿಕಿತ್ಸೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಳೆಯಿಂದ ಬೀದಿ ನಾಯಿಗಳ ಸಮೀಕ್ಷೆ
ಬೀದಿ ನಾಯಿಗಳು
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Jul 10, 2023 | 8:06 PM

ಬೆಂಗಳೂರು: ಬಿಬಿಎಂಪಿ ವತಿಯಿಂದ ನಾಳೆಯಿಂದ ಬೀದಿ ನಾಯಿ (stray dogs) ಗಳ ಸಮೀಕ್ಷೆ ಕಾರ್ಯವನ್ನು ಪ್ರಾರಂಭಿಸುತ್ತಿದೆ. ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣ ಹಾಗೂ ರೇಬಿಸ್ ರೋಗ ತಡೆಗಟ್ಟಲು ಸಂತಾನ ಶಕ್ತಿ ಹರಣ ಚಿಕಿತ್ಸೆ ಮತ್ತು ಆಂಟಿರೇಬಿಸ್ ಲಸಿಕಾ ಕಾರ್ಯಕ್ರಮ ಕೂಡ ಕೈಗೊಳ್ಳಲಾಗಿದ್ದು, ಒಟ್ಟು 14 ದಿನಗಳ ಕಾಲ ಲಸಿಕಾ ಹಾಗೂ ಸರ್ವೇ ಕಾರ್ಯ ನಡೆಯಲಿದೆ. ಈ ಕುರಿಯಾಗಿ ಬಿಬಿಎಂಪಿ ಪತ್ರಿಕಾ ಪ್ರಕಟನೆ ಹೊರಡಿಸಿದೆ.

2019ರಲ್ಲಿ ಬೀದಿ ನಾಯಿಗಳ ಸಮೀಕ್ಷೆಯನ್ನು ಮಾಡಿದ್ದು, 3.10 ಲಕ್ಷ ಬೀದಿ ನಾಯಿಗಳು ಇರುವುದಾಗಿ ಅಂದಾಜಿಸಲಾಗಿದೆ. ಸದ್ಯ ಪಾಲಿಕೆಯ 08 ವಲಯಗಳಲ್ಲಿ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮತ್ತು ಆಂಟರೇಟೀಸ್ ಲಸಿಕಾ ಕಾರ್ಯಕ್ರಮ ನಡೆಯಲಿದೆ.

ಇದನ್ನೂ ಓದಿ: ದಾವಣಗೆರೆ: ಬೀದಿ ನಾಯಿಗಳ ದಾಳಿ, 15 ಕುರಿಗಳ ಸಾವು; 20ಕ್ಕೂ ಹೆಚ್ಚು ಕುರಿಗಳಿಗೆ ಗಾಯ

ಬೀದಿ ನಾಯಿಗಳ ಸಮೀಕ್ಷೆಯು ಪ್ರಧಾನ ವಿಜ್ಞಾನಿ ಡಾ. ಕೆ.ಪಿ.ಸುರೇಶ್​, WWS ಸಂಸ್ಥೆ ಮತ್ತು ಪಶುಪಾಲನಾ ಹಾಗೂ ಪಶುವೈದ್ಯ ಸೇವಾ ಇಲಾಖೆಯ ಮ್ಯಾನೇಜರ್​​ ಡಾ. ಬಾಲಾಜಿ ಚಂದ್ರಶೇಖರ್, ಜಿಲ್ಲೆಯ ಅರೆತಾಂತ್ರಿಕ ಸಿಬ್ಬಂದಿಯ ಸಹಯೋಗದೊಂದಿಗೆ ನಡೆಯಲ್ಲಿದೆ.

840 ಚ.ಕಿ.ಮೀ ವ್ಯಾಪ್ತಿಯುಳ್ಳ ಬಿಬಿಎಂಪಿಯ (ವಸತಿ ಪ್ರದೇಶ, ಕೂಳಚೆ ಪ್ರದೇಶ, ವಾಣಿಜ್ಯ ಪ್ರದೇಶ ಹಾಗೂ ಕೆರೆಗಳು) 0.5 ಚ.ಕಿ.ಮೀ ವ್ಯಾಪ್ತಿಯ 6,850 ಮೈಕ್ರೋ ಜೋನ್​ಗಳನ್ನಾಗಿ ವಿಂಗಡಿಸಲಾಗಿದ್ದು, ಅದರಲ್ಲಿ ಶೇ. 20ರಷ್ಟು ರ‍್ಯಾಂಡಂ ಸ್ಯಾಂಪಲ್‌ಗಳನ್ನು ಅಂದರೆ 1,360 ಮೈಕ್ರೋ ಜೋನ್​ಗಳಲ್ಲಿ ಸಮೀಕ್ಷೆ ಮಾಡಲು ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ: ಮೈಸೂರಿನಲ್ಲಿ ಮುಂದುವರಿದ ಬೀದಿ ನಾಯಿಗಳ ಹಾವಳಿ: 9 ಆಡು ಮರಿಗಳ ಮೇಲೆ ದಾಳಿ

ಅದರಂತೆ, ಬೆಂಗಳೂರು ನಗರ ಜಿಲ್ಲೆಯ ಪಶುಪಾಲನಾ ಹಾಗೂ ಪಶುವೈದ್ಯ ಸೇವಾ ಇಲಾಖೆಯ 70 ಅರೆತಾಂತ್ರಿಕ ಸಿಬ್ಬಂದಿ ಹಾಗೂ ಪಾಲಿಕೆಯ ಪಶುಪಾಲನಾ ವಿಭಾಗದ 30 ಸಿಬ್ಬಂದಿ ಸೇರಿದಂತೆ 100 ಮಂದಿಯ ಮೂಲಕ ಈ ಸಮೀಕ್ಷೆಯನ್ನು ಮಾಡಲಾಗುತ್ತಿದೆ.

ಬೀದಿ ನಾಯಿ ಸಮೀಕ್ಷೆಯನ್ನು ಕ್ರಮಬದ್ಧವಾಗಿ ವ್ಯವಸ್ಥಿತವಾಗಿ ವಾರ್ಡ್‌ವಾರು ನಿರ್ವಹಿಸಲು 1 ತಂಡದಲ್ಲಿ ಇಬ್ಬರು ಸಮೀಕ್ಷಾದಾರರಂತೆ ಒಟ್ಟು 50 ತಂಡಗಳನ್ನು ರಚಿಸಲಾಗಿದ್ದು, ಇದರ ಮೇಲ್ವಿಚಾರಣೆಗಾಗಿ 15 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 7:49 pm, Mon, 10 July 23