ದಾವಣಗೆರೆ: ಬೀದಿ ನಾಯಿಗಳ ದಾಳಿ, 15 ಕುರಿಗಳ ಸಾವು; 20ಕ್ಕೂ ಹೆಚ್ಚು ಕುರಿಗಳಿಗೆ ಗಾಯ
ರಾಜ್ಯದಲ್ಲಿ ಬೀದಿ ನಾಯಿಗಳ ಕಾಟ ಮತ್ತೆ ಹೆಚ್ಚಾಗಿದೆ. ಹೌದು ಬಸವಾಪಟ್ಟಣದ ಬಳಿ ಕಂಸಾಗರ ಗ್ರಾಮದಲ್ಲಿ ಬೀದಿ ನಾಯಿಗಳು ದಾಳಿ ಮಾಡಿ 15 ಕುರಿಗಳ ಸಾವನ್ನಪ್ಪಿದೆ.
ದಾವಣಗೆರೆ: ರಾಜ್ಯದಲ್ಲಿ ಬೀದಿ ನಾಯಿ(Stray Dog)ಗಳ ಕಾಟ ಮತ್ತೆ ಹೆಚ್ಚಾಗಿದೆ. ಹೌದು ಬಸವಾಪಟ್ಟಣದ ಬಳಿ ಕಂಸಾಗರ ಗ್ರಾಮದಲ್ಲಿ ಬೀದಿ ನಾಯಿಗಳು ದಾಳಿ ಮಾಡಿ 15 ಕುರಿಗಳ ಸಾವನ್ನಪ್ಪಿದೆ. ಜೊತೆಗೆ 20 ಕ್ಕೂ ಹೆಚ್ಚು ಕುರಿಗಳು ಗಂಭೀರವಾಗಿ ಗಾಯಗೊಂಡಿದೆ. ಕೂಡಲೇ ಪಶು ವೈದ್ಯರು ಸ್ಥಳಕ್ಕಾಗಮಿಸಿ ಗಾಯಗೊಂಡ ಕುರಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇನ್ನು ಈ ಕುರಿಗಳು ರೈತ ತಿಮ್ಮಣ್ಣ ಎಂಬುವರಿಗೆ ಸೇರಿದ್ದು, ಕುರಿ ದೊಡ್ಡಿಯಲ್ಲಿ ಒಂದು ನೂರಕ್ಕೂ ಹೆಚ್ಚು ಕುರಿಗಳಿದ್ದವು. ಇದ್ದಕ್ಕಿದ್ದಂತೆ ಮೂರರಿಂದ ನಾಲ್ಕು ಬೀದಿ ನಾಯಿಗಳು ದಾಳಿ ಮಾಡಿ, ಬಹುತೇಕ ಕುರಿಗಳ ಕುತ್ತಿಗೆ ಕಚ್ಚಿ ಕೊಂದು ಹಾಕಿವೆ. ಈ ಹಿನ್ನಲೆ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಬಂದು ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರ ಆಗ್ರಹಿಸಿದ್ದಾರೆ.
ದೆಹಲಿಯಲ್ಲಿ ಇತ್ತೀಚೆಗಷ್ಟೇ ಬೀದಿ ನಾಯಿಗಳ ದಾಳಿಯಿಂದ ಇಬ್ಬರು ಬಾಲಕರು ಮೃತಪಟ್ಟಿದ್ದ ಜಾಗದಲ್ಲೇ ಮತ್ತೋರ್ವ ಬಾಲಕನ ಮೇಲೆ ನಾಯಿಗಳ ದಾಳಿ
ಮಾರ್ಚ್ ತಿಂಗಳಿನಲ್ಲಿ ಇಬ್ಬರು ಸಹೋದರರು ಬೀದಿ ನಾಯಿಗಳ ದಾಳಿಯಿಂದ ಮೃತಪಟ್ಟಿದ್ದರು, ಮತ್ತೆ ಅದೇ ಜಾಗದಲ್ಲಿ ಮತ್ತೋರ್ವ ಬಾಲಕನ ಮೇಲೆ ನಾಯಿಗಳು ದಾಳಿ ನಡೆಸಿತ್ತು. ದಕ್ಷಿಣ ದೆಹಲಿಯ ವಸಂತ್ ಕುಂಜ್ ಬಳಿಯ ಅದೇ ಪ್ರದೇಶದಲ್ಲಿ ಬಾಲಕನ ಮೇಲೆ ನಾಯಿಗಳು ದಾಳಿ ನಡೆಸಿತ್ತು. ಬಾಲಕ ವಸಂತ ಕುಂಜ್‌ನ ರಂಗಪುರಿ ಬೆಟ್ಟದ ಬಳಿಯ ತಮ್ಮ ಮನೆಯ ಸಮೀಪವಿರುವ ಅಂಗಡಿಯೊಂದಕ್ಕೆ ಹೋಗುತ್ತಿದ್ದಾಗ ಕನಿಷ್ಠ 14 ನಾಯಿಗಳ ಗುಂಪು ಸುತ್ತುವರೆದಿತ್ತು ಎಂದು ಪೊಲೀಸರು ತಿಳಿಸಿದ್ದರು.
ಇದನ್ನೂ ಓದಿ:ಬೀದಿ ನಾಯಿ ಉಪಟಳಕ್ಕೆ ಹೈರಾಣಾದ ಬೆಳಗಾವಿ ಜನರು: ಕಚ್ಚೋ ನಾಯಿ ಬದಲು ಬೇರೆ ನಾಯಿ ಹಿಡಿದುಕೊಂಡು ಹೋದ ಜಿಲ್ಲಾಡಳಿತ
ಬಾಲಕ ಸ್ಥಳದಿಂದ ಓಡಿ ಹೋಗಲು ಪ್ರಯತ್ನ ನಡೆಸಿದ್ದ ಆದರೆ ನಾಯಿಗಳು ಆತನ ಮೇಲೆ ದಾಳಿ ನಡೆಸಿ ಕೈಗಳು, ಭುಜಗಳು, ಕುತ್ತಿಗೆ ಮತ್ತು ಹೊಟ್ಟೆಯ ಭಾಗಕ್ಕೆ ಕಚ್ಚಿದ್ದವು. ಸಹಾಯಕ್ಕಾಗಿ ಕೂಗಿಕೊಂಡಿದ್ದು ಕೇಳಿ ಕೆಲವರು ಧಾವಿಸಿ ನಾಯಿಗಳನ್ನು ಓಡಿಸಿದ್ದರು. ಆದರೆ ಅಷ್ಟರಲ್ಲಾಗಲೇ ಬಾಲಕ ತೀವ್ರವಾಗಿ ಗಾಯಗೊಂಡಿದ್ದ ಎಂದು ಪೊಲೀಸರು ತಿಳಿಸಿದ್ದರು. ಕುಟುಂಬದವರು ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದರು, ಆತನ ದೇಹದಲ್ಲಿ 12ಕ್ಕಿಂತಲೂ ಹೆಚ್ಚು ಕಡೆ ಗಾಯಗಳಾಗಿರುವುದು ತಿಳಿದುಬಂದಿತ್ತು. ಚಿಕಿತ್ಸೆ ಬಳಿಕ ಬಾಲಕನನ್ನು ಮನೆಗೆ ಕರೆದೊಯ್ಯಲಾಗಿತ್ತು. ಈ ಪ್ರದೇಶದಲ್ಲಿ ಬೀದಿ ನಾಯಿಗಳ ಕಾಟ ಆತಂಕಕಾರಿಯಾಗಿದೆ ಎಂದು ಕುಟುಂಬದವರು ತಿಳಿಸಿದ್ದರು.
ಮೂಡಿಗೆರೆ ತಾಲೂಕಿನ ಬಾಳೂರು ಗ್ರಾಮದಲ್ಲಿ ಹುಲಿ ಹೆಜ್ಜೆ ಪತ್ತೆ; ಆತಂಕದಲ್ಲಿ ಗ್ರಾಮಸ್ಥರು
ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನಲ್ಲಿ ಹುಲಿಗಳ ಕಾಟ ಮುಂದುವರೆದಿದ್ದು. ನಿರಂತರವಾಗಿ ಜಾನುವಾರುಗಳ ಮೇಲೆ ಹುಲಿ ದಾಳಿ ಮಾಡುತ್ತಿದ್ದು, ಇದೀಗ ಬಾಳೂರು ಗ್ರಾಮದ ಕಾಫಿ ತೋಟದಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆಯಾಗಿದೆ. ಇದರಿಂದ ಗ್ರಾಮಸ್ಥರು, ಕಾರ್ಮಿಕರಲ್ಲಿ ಆತಂಕ ಮೂಡಿದ್ದು, ಕಾಫಿ ತೋಟಕ್ಕೆ ಕೆಲಸಕ್ಕೆ ಬರಲು ಕಾರ್ಮಿಕರ ಹಿಂದೆಟು ಹಾಕುತ್ತಿದ್ದಾರೆ. ನಿರಂತರ ಹುಲಿ ದಾಳಿ ಮಾಡುತ್ತಿದ್ರು ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ವಿರುದ್ದ ಮೂಡಿಗೆರೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ