Sign In

By signing in or creating an account, you agree with Associated Broadcasting Company's Terms & Conditions and Privacy Policy.

Bhubaneswar: ಒಡಿಶಾದಲ್ಲಿ 6 ಬೀದಿ ನಾಯಿಗಳಿಗೆ ವಿಷ ಹಾಕಿ ಕೊಂದ ವ್ಯಕ್ತಿ

6 ಬೀದಿ ನಾಯಿಗಳಿಗೆ ವಿಷ ಹಾಕಿ ಕೊಂದಿರುವ ಘಟನೆ ಒಡಿಶಾ ರಾಜಧಾನಿಯ ಚಂದ್ರಶೇಖರ್‌ಪುರ ಪ್ರದೇಶದ ಕೊಳೆಗೇರಿಯಲ್ಲಿ ನಡೆದಿದೆ.

Bhubaneswar: ಒಡಿಶಾದಲ್ಲಿ 6 ಬೀದಿ ನಾಯಿಗಳಿಗೆ ವಿಷ ಹಾಕಿ ಕೊಂದ ವ್ಯಕ್ತಿ
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on:Apr 04, 2023 | 11:21 AM

ಭುವನೇಶ್ವರ: 6 ಬೀದಿ ನಾಯಿಗಳಿಗೆ ವಿಷ ಹಾಕಿ ಕೊಂದಿರುವ ಘಟನೆ ಒಡಿಶಾ ರಾಜಧಾನಿಯ ಚಂದ್ರಶೇಖರ್‌ಪುರ ಪ್ರದೇಶದ ಕೊಳೆಗೇರಿಯಲ್ಲಿ ನಡೆದಿದೆ. ಆರು ಬೀದಿ ನಾಯಿಗಳಿಗೆ ಅಪರಿಚಿತ ವ್ಯಕ್ತಿಗಳು ವಿಷ ನೀಡಿ ಕೊಂದಿದ್ದಾರೆ ಎಂದು ಹೇಳಲಾಗಿದೆ. ಆಹಾರದಲ್ಲಿ ವಿಷವನ್ನು ಹಾಕಿ ನಾಯಿಗಳಿಗೆ ತಿನ್ನಲು ನೀಡಿದ್ದಾರೆ. ಇದರಿಂದ ಪ್ರಾಣಿಗಳು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಇದರ ಜತೆಗೆ ಇತರ ನಾಯಿಗಳು ಈ ಆಹಾರವನ್ನು ಸೇವಿಸಿದ್ದು, ಇದೀಗ ಅವುಗಳ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

ಈ ಸಂಬಂಧ ‘ಪೀಪಲ್ ಫಾರ್ ಅನಿಮಲ್ಸ್’ ಸಂಘಟನೆ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

2022 ರ ಜನವರಿಯಲ್ಲಿ, ಒಡಿಶಾದ ಲಕ್ಷ್ಮೀಸಾಗರ್ ಪೊಲೀಸ್ ವ್ಯಾಪ್ತಿಯ ಬುಧೇಶ್ವರಿ ದೇವಸ್ಥಾನದ ಬಳಿ ಮಹಿಳೆಯೊಬ್ಬರು ಜೀವಂತ ನಾಯಿಯನ್ನು ಸುಟ್ಟು ಹಾಕಿರುವ ಘಟನೆ ನಡೆದಿದೆ.

ಇದನ್ನೂ ಓದಿ: Video: ಸ್ಕೂಟಿಯನ್ನು ಅಟ್ಟಿಸಿಕೊಂಡು ಬಂದ ನಾಯಿಗಳು, ಭಯದಲ್ಲಿ ಕಾರಿಗೆ ಡಿಕ್ಕಿ ಹೊಡೆದು ನೆಲಕ್ಕೆ ಬಿದ್ದ ಮಹಿಳೆಯರು

ಅದೇ ತಿಂಗಳಿನಲ್ಲಿ, ನಗರದ ಜಗಮಾರಾ ಪ್ರದೇಶದಲ್ಲಿ ಎರಡು ನಾಯಿಗಳು ತನ್ನ ಕೆಕೋಳಿಗಳನ್ನು ಕೊಂದಿದೆ ಎಂದು ಸೇಡು ತೀರಿಸಿಕೊಳ್ಳಲು ವ್ಯಕ್ತಿಯೊಬ್ಬ ಬೀದಿ ನಾಯಿಯನ್ನು ಗುಂಡಿಕ್ಕಿ ಕೊಂದಿದ್ದಾನೆ.

Published On - 11:21 am, Tue, 4 April 23