ಒಡಿಶಾದ ಜಾಜ್‌ಪುರ್ ಜಿಲ್ಲೆಯಲ್ಲಿ ಅಪೌಷ್ಟಿಕತೆಯಿಂದ ಮಗು ಸಾವು; ಅನ್ನ, ಉಪ್ಪು ಮತ್ತು ನೀರು ಸೇವಿಸಿಯೇ ಬದುಕುತ್ತಿದೆ ಕುಟುಂಬ
ಅಸಹಾಯಕ ಕುಟುಂಬ ನೆರವಿಗಾಗಿ ಮನೆ ಮನೆಗೆ ಅಲೆದಾಡುತ್ತಿದ್ದರೂ ಪ್ರಯೋಜನವಾಗಿಲ್ಲ. ದಿನಗೂಲಿ ಕಾರ್ಮಿಕ ಬಂಕು ಪಡಿತರ ಚೀಟಿ ಹೊಂದಿದ್ದರೂ ಪಡಿತರದಿಂದ ವಂಚಿತರಾಗಿದ್ದಾರೆ.
ಅಪೌಷ್ಟಿಕತೆಯಿಂದ (Malnutrition) ಮಗು ಸಾವಿಗೀಡಾಗಿರುವ ಪ್ರಕರಣ ಒಡಿಶಾದ (Odisha) ಜಾಜ್‌ಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಇದೇ ಕುಟುಂಬದಲ್ಲಿಮಗುವಿನ ಸಹೋದರಿ ಕೂಡ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ ಎಂದು ಮಗುವಿನ ಅಮ್ಮ ಹೇಳಿದ್ದಾಳೆ.ಈ ಬಾಲಕಿಗೆ ಸ್ವಂತವಾಗಿ ನಡೆಯಲು ಮತ್ತು ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ಜಾಜ್‌ಪುರ ಜಿಲ್ಲೆಯ ದನಗಡಿ ಬ್ಲಾಕ್‌ನ ರಣಗುಂಡಿ ಪಂಚಾಯತ್‌ನ ಘಾಟಿಶಾಹಿ ಗ್ರಾಮದಲ್ಲಿ ಈ ಘಟನೆ ವರದಿ ಆಗಿದೆ. ಅಪೌಷ್ಟಿಕತೆಯಿಂದ ಮೃತಪಟ್ಟ ಮಗುವಿನ ತಾಯಿ ಹೇಳುವಂತೆ, ಮಗಳ ಸ್ಥಿತಿಯೂ ಹದಗೆಟ್ಟಿದೆ. ಸ್ವಂತವಾಗಿ ನಡೆಯಲು ಮತ್ತು ಕುಳಿತುಕೊಳ್ಳಲು ಸಾಧ್ಯವಾಗದೆ ಆಕೆ ಹಾಸಿಗೆ ಹಿಡಿದಿದ್ದಾಳೆ. ಮೂಲಗಳ ಪ್ರಕಾರ, ಬಂಕು ಹೆಂಬ್ರಾಮ್ ತನ್ನ ಪತ್ನಿ ತುಳಸಿ ಹೆಂಬ್ರಾಮ್ ಒಂಬತ್ತು ಮಕ್ಕಳೊಂದಿಗೆ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಇವರ ಇಬ್ಬರು ಪುತ್ರರಲ್ಲಿ ಒಬ್ಬ ಅಪೌಷ್ಟಿಕತೆಯಿಂದ ಕೆಲವು ದಿನಗಳ ಹಿಂದೆ ಸಾವಿಗೀಡಾಗಿದ್ದ. ಇದೀಗ ಅವರ ಮಗಳ ಸ್ಥಿತಿ ಗಂಭೀರವಾಗಿದೆ ಎಂದು ಜಾಗರಣ್ ಡಾಟ್ ಕಾಮ್ ವರದಿ ಮಾಡಿದೆ.
ಇದಲ್ಲದೇ ಬಂಕುವಿನ ಇತರ ಮಕ್ಕಳಲ್ಲಿಯೂ ಅಪೌಷ್ಟಿಕತೆ ಕಾಡುತ್ತಿದೆ. ಅಸಹಾಯಕ ಕುಟುಂಬ ನೆರವಿಗಾಗಿ ಮನೆ ಮನೆಗೆ ಅಲೆದಾಡುತ್ತಿದ್ದರೂ ಪ್ರಯೋಜನವಾಗಿಲ್ಲ. ದಿನಗೂಲಿ ಕಾರ್ಮಿಕ ಬಂಕು ಪಡಿತರ ಚೀಟಿ ಹೊಂದಿದ್ದರೂ ಪಡಿತರದಿಂದ ವಂಚಿತರಾಗಿದ್ದಾರೆ. ನೀರು, ಅನ್ನ, ಉಪ್ಪನ್ನು ತಿಂದು ಕುಟುಂಬ ಬದುಕುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
VIDEO | Heart-wrenching scene of Malnutrition affected kids, including death reports, surface in Odisha’s mines-rich Jajpur District. A family’s abject poverty led to a child’s death due to malnutrition. One of the daughters in the family is bedridden because of malnutrition. pic.twitter.com/mopt4LBeV5
— Press Trust of India (@PTI_News) March 24, 2023
ಮಾಧ್ಯಮಗಳಿಂದ ಈ ಸುದ್ದಿಯ ಬಗ್ಗೆ ಮಾಹಿತಿ ಪಡೆದ ನಂತರ, ಡಿಸಿಪಿಒ ತಮ್ಮ ತಂಡದೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿರುವರನ್ನು ಸುಕಿಂದಾಗೆ ಸ್ಥಳಾಂತರಿಸಲಾಗಿದೆ.
ಇಲ್ಲಿ ಪೌಷ್ಟಿಕಾಂಶ ಪುನರ್ವಸತಿ ಕೇಂದ್ರವನ್ನು (ಎನ್‌ಆರ್‌ಸಿ) ಇದೆ ಅಂತಾರೆ ಜಾಜ್‌ಪುರದ ಮುಖ್ಯ ಜಿಲ್ಲಾ ವೈದ್ಯಾಧಿಕಾರಿ (ಸಿಡಿಎಂಒ), ಶಿವಶಿಶ್ ಮಹಾರಾಣಾ. ಅಲ್ಲಿ ಕೌನ್ಸಿಲರ್, ವೈದ್ಯರು, ಮಕ್ಕಳ ವೈದ್ಯರು ಇದ್ದಾರೆ. ಅವರು ಈಗ ಮಗುವನ್ನು ನೋಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಕ್ಷಯರೋಗ ಸೋಲುತ್ತದೆ, ಭಾರತ ಮತ್ತು ಜಗತ್ತು ಗೆಲ್ಲುತ್ತದೆ: ವಿಶ್ವ ಟಿಬಿ ಶೃಂಗಸಭೆಯಲ್ಲಿ ನರೇಂದ್ರ ಮೋದಿ
ಮತ್ತೊಂದು ಮಗುವನ್ನು ಈ ಹಿಂದೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಸಮಸ್ಯೆಯೆಂದರೆ ಜನರು ಅಪೌಷ್ಟಿಕತೆಯ ಬಗ್ಗೆ ತಿಳಿದಿರುವುದಿಲ್ಲ ಮತ್ತು ಆಸ್ಪತ್ರೆಗೆ ಬರಲು ಬಯಸುವುದಿಲ್ಲ. ಆದ್ದರಿಂದ ಶೀಘ್ರದಲ್ಲಿಯೇ ಜನಜಾಗೃತಿ ಕಾರ್ಯಕ್ರಮದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ