Land For Employment Case: ತೇಜಸ್ವಿ ಯಾದವ್ ಇಂದು ಸಿಬಿಐ ಮುಂದೆ ವಿಚಾರಣೆಗೆ ಹಾಜರು
ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಇಂದು ಸಿಬಿಐ (Central Bureau of Investigation) ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ.
ದೆಹಲಿ: ಉದ್ಯೋಗಕ್ಕಾಗಿ ಭೂಮಿ ಪ್ರಕರಣಕ್ಕೆ (Land For Employment Case) ಸಂಬಂಧಿಸಿದಂತೆ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ (Tejaswi Yadav) ಅವರು ಇಂದು ಸಿಬಿಐ (Central Bureau of Investigation) ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ. ತೇಜಸ್ವಿ ಅವರ ಜೊತೆಗೆ ಆರ್‌ಜೆಡಿ ಸಂಸದೆ ಮಿಸಾ ಭಾರ್ತಿ ಕೂಡ ಇಂದು ಇಡಿ ತನಿಖೆಗೆ ಹಾಜರಾಗಲಿದ್ದಾರೆ. ತೇಜಸ್ವಿ ಯಾದವ್ ಅವರು ಈ ಹಿಂದಿನ ವಿಚಾರಣೆ ಬರುವಂತೆ ಮೂರು ದಿನಾಂಕಗಳನ್ನು ನೀಡಿತ್ತು, ಆದರೆ ಈ ಯಾವ ನೋಟಿಸ್ಗೂ ಉತ್ತರ ನೀಡಿರಲಿಲ್ಲ. ಇದೀಗ ದೆಹಲಿಯಲ್ಲಿ ಕೇಂದ್ರೀಯ ತನಿಖಾ ದಳದ (ಸಿಬಿಐ) ಮುಂದೆ ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಳಗ್ಗೆ 10:30ರ ಸುಮಾರಿಗೆ ಸಿಬಿಐ ಪ್ರಧಾನ ಕಛೇರಿಗೆ ಆಗಮಿಸಿದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕನನ್ನು ಅಗತ್ಯ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ ತನಿಖಾ ತಂಡಕ್ಕೆ ಕರೆದೊಯ್ಯಲಾಯಿತು. ಈ ತಿಂಗಳು ಯಾದವ್ ಅವರನ್ನು ಬಂಧಿಸುವುದಿಲ್ಲ ಎಂದು ಸಿಬಿಐ ಕಳೆದ ವಾರ ದೆಹಲಿ ಹೈಕೋರ್ಟ್‌ಗೆ ಭರವಸೆ ನೀಡಿತ್ತು.
#WATCH | Delhi: Bihar Deputy CM Tejashwi Yadav leaves for CBI office.
Tejashwi Yadav will appear before CBI for questioning in connection with the land for Job scam case. pic.twitter.com/XFhIbDYHfQ
— ANI (@ANI) March 25, 2023
ಆರ್‌ಜೆಡಿ ನಾಯಕನ ವಕೀಲ ಮಣಿಂದರ್ ಸಿಂಗ್ ಪ್ರಕಾರ, ನಡೆಯುತ್ತಿರುವ ಬಿಹಾರ ಅಸೆಂಬ್ಲಿ ಅಧಿವೇಶನವು ಏಪ್ರಿಲ್ 5 ರಂದು ಮುಕ್ತಾಯಗೊಳ್ಳಲಿರುವುದರಿಂದ ಯಾದವ್ ಫೆಡರಲ್ ಏಜೆನ್ಸಿಗೆ ಹಾಜರಾಗಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ತಿಳಿಸಿದ್ದರು.
ಇದನ್ನೂ ಓದಿ: Land For Job Case: ಲಾಲು ಪ್ರಸಾದ್ ಯಾದವ್, ರಾಬ್ರಿ ದೇವಿಗೆ ಜಾಮೀನು
ಮಾರ್ಚ್ 25 ರಂದು ಬೆಳಿಗ್ಗೆ 10:30 ಕ್ಕೆ ದೆಹಲಿಯ ಸಿಬಿಐ ಪ್ರಧಾನ ಕಚೇರಿಯಲ್ಲಿ ತನಿಖಾಧಿಕಾರಿಯ ಮುಂದೆ ಯಾದವ್ ಹಾಜರಾಗಲಿದ್ದಾರೆ ಎಂದು ಸಿಂಗ್ ನ್ಯಾಯಾಲಯಕ್ಕೆ ತಿಳಿಸಿದ್ದರು. ಯಾದವ್ ಅವರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಮಾರ್ಚ್‌ನಲ್ಲಿ ಯಾವುದೇ ಶನಿವಾರದಂದು ಸಿಬಿಐ ಮುಂದೆ ಹಾಜರಾಗಬಹುದು ಎಂದು ಸಿಬಿಐ ಪರ ವಕೀಲ ಡಿಪಿ ಸಿಂಗ್ ನ್ಯಾಯಾಲಯಕ್ಕೆ ತಿಳಿಸಿದ್ದರು. ಆರ್‌ಜೆಡಿ ನಾಯಕ ತನ್ನ ವಿರುದ್ಧ ಫೆಬ್ರವರಿ 28, ಮಾರ್ಚ್ 4 ಮತ್ತು ಮಾರ್ಚ್ 11 ರಂದು ನೀಡಲಾದ ಸಮನ್ಸ್‌ಗಳನ್ನು ರದ್ದುಗೊಳಿಸುವಂತೆ ಕೋರಿದ್ದರು.
Published On - 11:12 am, Sat, 25 March 23