ತೇಜಸ್ವಿ ಯಾದವ್ ಮತ್ತು ಸಹೋದರಿಯರ ಮನೆಯಿಂದ ₹70 ಲಕ್ಷ ನಗದು, 1.5 ಕೆಜಿ ಚಿನ್ನಾಭರಣ ವಶಪಡಿಸಿದ ಇಡಿ

ತೇಜಸ್ವಿ ಇದ್ದ ದೆಹಲಿಯ ನ್ಯೂ ಫ್ರೆಂಡ್ಸ್ ಕಾಲೋನಿಯಲ್ಲಿರುವ ನಿವಾಸದ ಮೇಲೆ ಶುಕ್ರವಾರ ದಾಳಿ ನಡೆಸಲಾಗಿದ್ದು, ಪ್ರಕರಣದ ಆರೋಪಿ ಕಂಪನಿಯಾದ ಎಕೆ ಇನ್ಫೋಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ಇಡಿ ತನಿಖೆಯ ಬಗ್ಗೆ ಅರಿವು ಇರುವ ಜನರು ಹೇಳಿದ್ದಾರೆ.

ತೇಜಸ್ವಿ ಯಾದವ್ ಮತ್ತು ಸಹೋದರಿಯರ ಮನೆಯಿಂದ ₹70 ಲಕ್ಷ ನಗದು, 1.5 ಕೆಜಿ ಚಿನ್ನಾಭರಣ ವಶಪಡಿಸಿದ ಇಡಿ
ತೇಜಸ್ವಿ ಯಾದವ್
Follow us
ರಶ್ಮಿ ಕಲ್ಲಕಟ್ಟ
|

Updated on:Mar 11, 2023 | 1:04 PM

ಲಾಲು ಪ್ರಸಾದ್ ಯಾದವ್ (Lalu Prasad Yadav) ಅವರ ಪುತ್ರಿಯರು ಮತ್ತು ಪುತ್ರ ತೇಜಸ್ವಿ ಯಾದವ್ (Tejashwi Yadav) ಅವರ ಮನೆಗಳಿಂದ ₹70 ಲಕ್ಷ ನಗದು, 1.5 ಕೆಜಿ ಚಿನ್ನಾಭರಣ, 540 ಗ್ರಾಂ ಚಿನ್ನಾಭರಣ ಮತ್ತು 900 ಅಮೆರಿಕನ್ ಡಾಲರ್ ಸೇರಿದಂತೆ ವಿದೇಶಿ ಕರೆನ್ಸಿಗಳನ್ನು ಜಾರಿ ನಿರ್ದೇಶನಾಲಯ (ED) ವಶಪಡಿಸಿಕೊಂಡಿದೆ. ಕೆಲಸಕ್ಕಾಗಿ ಭೂಮಿ ಹಗರಣ ಆರೋಪದಲ್ಲಿ ಇಡಿ ಶುಕ್ರವಾರ ತೇಜಸ್ವಿ ಯಾದವ್ ಮನೆ ಮೇಲೆ ದಾಳಿ ನಡೆಸಿತ್ತು. ದೆಹಲಿಯಲ್ಲಿರುವ ಬಿಹಾರ ಉಪಮುಖ್ಯಮಂತ್ರಿ ನಿವಾಸ ಸೇರಿದಂತೆ ರಾಷ್ಟ್ರ ರಾಜಧಾನಿ ಪ್ರದೇಶ (ಎನ್‌ಸಿಆರ್), ಪಾಟ್ನಾ, ರಾಂಚಿ ಮತ್ತು ಮುಂಬೈನ 24 ಸ್ಥಳಗಳ ಮೇಲೆ ಇಡಿ ದಾಳಿ ನಡೆಸಿತ್ತು. ಲಾಲು ಅವರ ಮೂವರು ಪುತ್ರಿಯರಾದ ರಾಗಿಣಿ, ಚಂದಾ ಮತ್ತು ಹೇಮಾ ಯಾದವ್ ಮತ್ತು ಲಾಲು ಅವರ ನಿಕಟವರ್ತಿ ಎಂದು ಪರಿಗಣಿಸಲಾದ ಆರ್‌ಜೆಡಿ ಮಾಜಿ ಶಾಸಕ ಅಬು ದೋಜಾನಾ ಅವರ ಮನೆಗಳ ಮೇಲೆ ಶುಕ್ರವಾರ ದಾಳಿ ನಡೆದಿದೆ. ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಜಿತೇಂದ್ರ ಯಾದವ್ ಅವರ ಗಾಜಿಯಾಬಾದ್‌ನಲ್ಲಿರುವ ನಿವಾಸವನ್ನೂ ಕೇಂದ್ರ ಸಂಸ್ಥೆ ಶೋಧಿಸಿದೆ. ಜಿತೇಂದ್ರ ಯಾದವ್ ರಾಗಿಣಿ ಅವರ ಪತಿ.

ತೇಜಸ್ವಿ ಇದ್ದ ದೆಹಲಿಯ ನ್ಯೂ ಫ್ರೆಂಡ್ಸ್ ಕಾಲೋನಿಯಲ್ಲಿರುವ ನಿವಾಸದ ಮೇಲೆ ಶುಕ್ರವಾರ ದಾಳಿ ನಡೆಸಲಾಗಿದ್ದು, ಪ್ರಕರಣದ ಆರೋಪಿ ಕಂಪನಿಯಾದ ಎಕೆ ಇನ್ಫೋಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ಇಡಿ ತನಿಖೆಯ ಬಗ್ಗೆ ಅರಿವು ಇರುವ ಜನರು ಹೇಳಿದ್ದಾರೆ. ಲಂಚ ರೀತಿಯಲ್ಲಿ ಭೂಮಿ ನೀಡಿದ್ದ ವ್ಯಕ್ತಿಗೆ ರೈಲ್ವೆಯಲ್ಲಿ ಕೆಲಸ ಸಿಕ್ಕಿತ್ತು. ಈ ಕೆಲಸ ಕೊಡಿಸಿದ್ದು ಎಕೆ ಇನ್ಫೋ ಸಿಸ್ಟಮ್ಸ್ ಎಂಬ ಆರೋಪವಿದೆ.

“ಇದರರ್ಥ ತೇಜಸ್ವಿ ಯಾದವ್ ಅಥವಾ ಲಾಲು ಯಾದವ್ ಅವರ ಕುಟುಂಬವು ಆರೋಪಿ ಕಂಪನಿಯ ಹೆಸರಿನಲ್ಲಿ ನೋಂದಾಯಿಸಲಾದ ನಿವಾಸವನ್ನು ಬಳಸುತ್ತಿದೆ” ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದರು.

ಆರ್‌ಜೆಡಿ ಮಾಜಿ ಶಾಸಕ ಅಬು ದೋಜಾನಾ ಒಡೆತನದ ಮೆರಿಡಿಯನ್ ಕನ್‌ಸ್ಟ್ರಕ್ಷನ್‌ಗೆ ನಾಲ್ಕು ಲ್ಯಾಂಡ್ ಪಾರ್ಸೆಲ್‌ಗಳನ್ನು ಮಾರಾಟ ಮಾಡಿರುವುದು ಇಡಿ ತನಿಖೆಯಿಂದ ತಿಳಿದುಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸೋಮವಾರ ಪಾಟ್ನಾದಲ್ಲಿ ಲಾಲು ಅವರ ಪತ್ನಿ ರಾಬ್ರಿ ದೇವಿ ಅವರ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ದೆಹಲಿಯಲ್ಲಿ ಮಾಜಿ ಕೇಂದ್ರ ಸಚಿವ ಲಾಲು ಅವರನ್ನು ಪ್ರಶ್ನಿಸಿದ ನಂತರ ಇಡಿ ದಾಳಿ ನಡೆದಿವೆ. ಶನಿವಾರ ಸಿಬಿಐ ತೇಜಸ್ವಿ ಅವರಿಗೆ ಭೂ-ಉದ್ಯೋಗ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ. ಈ ಹಿಂದೆ ಮಾರ್ಚ್ 4 ರಂದು ಯಾದವ್ ಅವರನ್ನು ವಿಚಾರಣೆಗೆ ಕರೆಯಲಾಗಿತ್ತು ಆದರೆ ಅವರು ಸಿಬಿಐ ಅಧಿಕಾರಿಗಳ ಮುಂದೆ ಹಾಜರಾಗಿರಲಿಲ್ಲ, ನಂತರ ಶನಿವಾರದಂದು ಹೊಸ ದಿನಾಂಕವನ್ನು ನೀಡಲಾಯಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:03 pm, Sat, 11 March 23

‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು