AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

News 9 Plus World Exclusive: 1993ರ ಮುಂಬೈ ಸರಣಿ ಸ್ಪೋಟದ ಹಿಂದಿರುವ ಭಯಾನಕ ಮುಖ; ಇಲ್ಲಿದೆ ಒಂದು ಎಕ್ಸ್​ಕ್ಲೂಸಿವ್​​ ರಿಪೋರ್ಟ್!

ಮೂವತ್ತು ವರ್ಷಗಳ ಹಿಂದೆ, ಮಾರ್ಚ್ 12, 1993 ರಂದು, ಮುಂಬೈ ಹಿಂದೆಂದೂ ಕಾಣದಂತ ಭಯಾನಕ ಸರಣಿ ಬಾಂಬ್ ಸ್ಪೋಟಕ್ಕೆ ಗುರಿಯಾಗಿತ್ತು. ನ್ಯೂಸ್ 9 ಪ್ಲಸ್ ಮುಂಬೈ 1993 ರ ದಾಳಿಯ ಹಿಂದಿನ ಮುಖವನ್ನು ಮೊದಲ ಬಾರಿಗೆ ಬಹಿರಂಗಪಡಿಸಿದೆ.

News 9 Plus World Exclusive: 1993ರ ಮುಂಬೈ ಸರಣಿ ಸ್ಪೋಟದ ಹಿಂದಿರುವ ಭಯಾನಕ ಮುಖ; ಇಲ್ಲಿದೆ ಒಂದು ಎಕ್ಸ್​ಕ್ಲೂಸಿವ್​​ ರಿಪೋರ್ಟ್!
General Javed NasirImage Credit source: News 9
Follow us
ನಯನಾ ಎಸ್​ಪಿ
|

Updated on:Mar 11, 2023 | 6:51 PM

ಭಾರತವು 1993 ರಲ್ಲಿ ಹಿಂದೆದೂ ನೋಡಿರದ ಭೀಕರ ಸರಣಿ ಬಾಂಬ್ ಸ್ಫೋಟವನ್ನು ಮುಂಬೈ ಅಲ್ಲಿ ಕಂಡಿತು. ಆದರೆ ಇದರ ಹಿಂದಿನ ನಿಜವಾದ ಮಾಸ್ಟರ್ ಮೈಂಡ್ ಬಗ್ಗೆ ಯಾರಿಗೂ ಹೆಚ್ಚಿನ ಮಾಹಿತಿ ಇರಲಿಲ್ಲ. ನ್ಯೂಸ್9 ಪ್ಲಸ್ 1993 ರ ಸ್ಫೋಟಗಳ (1993 Mumbai Blast) ಹಿಂದಿನ ಸಂಪೂರ್ಣ ಮಾಹಿತಿ ಪಡೆಯಲು ತಜ್ಞರ ಬಳಿ ಮಾತನಾಡಿದ್ದಾರೆ. ಮಾಜಿ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗದ ಮುಖ್ಯಸ್ಥ (R&AW) ವಿಕ್ರಮ್ ಸೂದ್, ಮಾಜಿ US ಡಿಫೆನ್ಸ್ ಇಂಟೆಲಿಜೆನ್ಸ್ ಏಜೆನ್ಸಿ ಅಧಿಕಾರಿ ಮತ್ತು ISI ಪುಸ್ತಕ ಲೇಖಕ ಪ್ರೊಫೆಸರ್ ಓವನ್ ಎಲ್ ಸರ್ಸ್; ಮಾಜಿ ಮುಂಬೈ ಪೊಲೀಸ್ ಕಮಿಷನರ್ ಎಂಎನ್ ಸಿಂಗ್, ಸೇರಿ ಇನ್ನು ಹಲವು ಅಧಿಕಾರಿಗಳು ಈ ಕುರಿತು ಮಾತನಾಡಿದ್ದಾರೆ.

ಮೂವತ್ತು ವರ್ಷಗಳ ಹಿಂದೆ, ಮಾರ್ಚ್ 12, 1993 ರಂದು, ಮುಂಬೈ ಹಿಂದೆಂದೂ ಕಾಣದಂತ ಭಯಾನಕ ಸರಣಿ ಬಾಂಬ್ ಸ್ಪೋಟಕ್ಕೆ ಗುರಿಯಾಗಿತ್ತು. ಈ ಸ್ಫೋಟಗಳಲ್ಲಿ 257 ಮುಂಬೈಕರ್‌ಗಳು ಸಾವನ್ನಪ್ಪಿದರು, 1,400 ಕ್ಕೂ ಹೆಚ್ಚು ಜನರು ಗಾಯಗೊಂಡರು. ದಾಳಿಗಳನ್ನು ದಾವೂದ್ ಇಬ್ರಾಹಿಂ ಮತ್ತು ಗ್ಯಾಂಗ್ ನಡೆಸಿತ್ತು. ಆದರೆ ಈ ದಾಳಿಯ ಮುಖ್ಯ ರೂವಾರಿ ಬೇರೊಬ್ಬ ಇದ್ದಾನೆ. ಆತ ಇಂದಿನವರೆಗೂ ತಲೆ ಮರೆಸಿಕೊಂಡು ತಿರುಗುತ್ತಿದ್ದಾನೆ.

ಬಾಂಬ್ ದಾಳಿಯ ನಂತರ, ಈ ದಾಳಿಯನ್ನು ಪ್ಲಾನ್ ಮಾಡಿದ ಮೇಲಧಿಕಾರಿಗಳು ಓಡಿಹೋದರು. ಪೊಲೀಸರು ಸೆರೆ ಹಿಡಿದ್ದು ಮಾಸ್ಟರ್ ಮೈಂಡ್ ಅನ್ನಲ್ಲ ಬರೀ ಅವರ ದಾಳವನ್ನು. ಪ್ರತಿ ಚಾರ್ಜ್ ಶೀಟ್‌ನಲ್ಲಿ ಪಾಕಿಸ್ತಾನದ ISI ಹೆಸರನ್ನು ಬರೆಯಲಾಗಿದೆ. ಆದರೂ ಕೇಂದ್ರ ಸರ್ಕಾರವು ದಾಳಿಯಲ್ಲಿ ಐಎಸ್‌ಐನ ಘೋರ ಅಪರಾಧದ ಬಗ್ಗೆ ತನಿಖೆ ನಡೆಸಲಿಲ್ಲ ಅಥವಾ ಅದರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ.

“1993 ರ ಮುಂಬೈ ಬಾಂಬ್ ದಾಳಿಯನ್ನು ದಾವೂದ್ ಇಬ್ರಾಹಿಂ ಗ್ಯಾಂಗ್ ಮೂಲಕ ಲೆಫ್ಟಿನೆಂಟ್ ಜನರಲ್ ಜಾವೇದ್ ನಾಸಿರ್ ಆದೇಶಿಸಿದ್ದಾರೆ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ” ಎಂದು ಯುಎಸ್ಎಯ ಮೊಂಟಾನಾ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ, ಮಾಜಿ ರಕ್ಷಣಾ ಗುಪ್ತಚರ ಸಂಸ್ಥೆಯ ಅಧಿಕಾರಿ ಓವನ್ ಎಲ್. ಸರ್ಸ್ ಹೇಳುತ್ತಾರೆ. 

ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ ಮಾಜಿ ಮುಖ್ಯಸ್ಥ ವಿಕ್ರಮ್ ಸೂದ್, “1993 ರ ಮುಂಬೈ ಸರಣಿ ಸ್ಫೋಟಗಳುಭಾರತ ಕಂಡ ಮೊದಲ ಭಯೋತ್ಪಾದನೆಯ ದುರಂತ. ಅಂದು ಇದು ಎಲ್ಲರನ್ನು ಬೆಚ್ಚಿಬೀಳಿಸಿತ್ತು. ಈ ದುರಂತ ಏನನ್ನೋ ಸಾಬೀತುಪಡಿಸಲು ನಡೆಸಿದ ಷಡ್ಯಂತ್ರವಾಗಿತ್ತು. ಸ್ಪಷ್ಟ ಪಾಕಿಸ್ತಾನಿ ಫಿಂಗರ್‌ಪ್ರಿಂಟ್ ಅಲ್ಲಿ ಕಂಡರೂ, ಅದನ್ನು ನಂಬಲು ಯಾರು ಸಿದ್ಧವಿರಲಿಲ್ಲ. ಇದು ಪ್ರಾಮಾಣಿಕ ಸತ್ಯ.” ಎಂದು ಆ ಭಯಾನಕ ಘಟನೆಯನ್ನು ಮೆಲುಕು ಹಾಕುತ್ತ ಮಾತನಾಡಿದರು.

ಮುಂಬೈನ ಮಾಜಿ ಪೊಲೀಸ್ ಆಯುಕ್ತ ಎಂಎನ್ ಸಿಂಗ್ ಬ್ಲಾಸ್ಟ್​ನಲ್ಲಿ ಪಾಕಿಸ್ತಾನದ ಕೈವಾಡದ ಕುರಿತು ಮಾತನಾಡುತ್ತಾ, “ನಾವು ಬಂಧಿಸಿದ ಜನರಿಂದ ಅವರು ಪಾಕಿಸ್ತಾನದಲ್ಲಿ ತರಬೇತಿ ಪಡೆದಿದ್ದಾರೆ ಎಂಬುದು ತಿಳಿಯಿತು. ಬಂಧಿತರು ಮುಂಬೈನಿಂದ ದುಬೈಗೆ ಹೋಗಿ ಅಲ್ಲಿಂದ ಇಸ್ಲಾಮಾಬಾದ್ ಹೋಗಲು ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್ಲೈನ್ಸ್ ಅನ್ನು ತೆಗೆದುಕೊಂಡರು. ಅವರಿಗೆ ಪಾಕಿಸ್ತಾನ

ಸೇನೆ ತರಬೇತಿ, ಆಶ್ರಯ, ಬೇಕಾದ ಶಸ್ತ್ರಗಳನ್ನೂ ನೀಡಿತು. ನಂತರ ಇವರು ಇಸ್ಲಾಮಾಬಾದ್‌ಗೆ ಬಂದಿಳಿದಾಗ ಯಾರು ಇವರನ್ನು ಪರಿಶೀಲಿಸಲಿಲ್ಲ. ISI ಜೊತೆ ನಂಟು ಇದ್ದವರಿಗೆ ಯಾವುದೇ ಪಾಸ್‌ಪೋರ್ಟ್ ಅಗತ್ಯವಿರುವುದಿಲ್ಲ” ಎಂದು ಅಂದು ನಡೆದ ಭಯಾನಕ ಘಟನೆಯನ್ನು ವಿವರಿಸಿದರು.

ಸ್ವಿಟ್ಜರ್ಲೆಂಡ್‌ನ ಜ್ಯೂರಿಚ್‌ನಲ್ಲಿರುವ ಸೆಂಟರ್ ಫಾರ್ ಸೆಕ್ಯುರಿಟಿ ಸ್ಟಡೀಸ್‌ನ ಹಿರಿಯ ಸಂಶೋಧಕ ಡಾ.ಪ್ರೇಮ್ ಮಹದೇವನ್ ಜನರಲ್ ನಾಸಿರ್ ಕುರಿತು ಮಾತನಾಡುತ್ತಾ,” ಮಧ್ಯ ಏಷ್ಯಾದಲ್ಲಿ ಜಿಹಾದಿಸಂನ ಬೆಂಬಲಕ್ಕೆ ಸಂಬಂಧಿಸಿದಂತೆ ಜನರಲ್ ನಾಸಿರ್ ಹೆಸರು ಬಂದಿತ್ತು. ಈತ LTTE ಜತೆ ನಂಟು ಹೊಂದಿದ್ದ. ಮ್ಯಾನ್ಮಾರ್‌ನಲ್ಲಿನ ದಂಗೆ ಜೊತೆಯೂ ಈತನ ಸಂಬಂಧವಿತ್ತು. ಮೇಲಿನಿಂದ ಆದೇಶವಿಲ್ಲದೆ ಒಬ್ಬ ಗುಪ್ತಚರ ಇಲಾಖೆಯ ಮುಖ್ಯಸ್ಥ ಇಂತಹ ಕೆಲಸ ಮಾಡಲು ಸಾಧ್ಯವಿಲ್ಲ.” ಎಂದು ಗಂಭೀರವಾಗಿ ಆರೋಪಿಸಿದರು.

ನಾಸಿರ್ ಅವರ ನಡವಳಿಕೆಯಿಂದ ವಾಷಿಂಗ್ಟನ್ 1992 ರಲ್ಲಿ ದಕ್ಷಿಣ ಏಷ್ಯಾದ ಸಹಾಯಕ ಕಾರ್ಯದರ್ಶಿ ಕ್ರಿಸ್ಟಿನಾ ಬಿ. ರೊಕ್ಕಾ, ಪಾಕಿಸ್ತಾನವನ್ನು ‘ಭಯೋತ್ಪಾದನೆಗೆ ಅನುಧಾನ ನೀಡುತ್ತಿರುವ ಶಂಕಿತ ರಾಷ್ಟ್ರಗಳು’ ಪಟ್ಟಿಗೆ ಸೇರಿಸಬೇಕೆಂದು ಶಿಫಾರಸು ಮಾಡಿದರು.

ಅಂತಿಮವಾಗಿ ಮೇ 1993 ರಲ್ಲಿ ನಾಸಿರ್ ಅವರನ್ನು ವಜಾಗೊಳಿಸಲಾಯಿತು ಆದರೆ ದಾಳಿಯ ಮೂರು ದಶಕಗಳ ನಂತರ ಈತ ಇನ್ನೂ ತಲೆಮರೆಸಿಕೊಂಡಿದ್ದಾನೆ. 1990 ರ ದಶಕದ ಆರಂಭದಲ್ಲೇ ನಾಸಿರ್ ಬೋಸ್ನಿಯನ್ ಮುಸ್ಲಿಮರಿಗೆ ಆಕ್ರಮಣಕಾರಿ ರೈಫಲ್‌ಗಳು ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದರು. ಈಗ 87 ರ ಹರೆಯದ ನಾಸಿರ್, ತಬ್ಲಿಘಿ ಜಮಾತ್‌ನ ಪ್ರಚಾರಕರಾಗಿದ್ದಾರೆ. ಇವರು ತಬ್ಲಿಘಿ ಜಮಾತ್‌ ಜೊತೆ 1986 ಇಂದಲೇ ಸಂಬಂಧ ಹೊಂದಿದ್ದಾರೆ. 

ತಜ್ಞರು ಹೇಳುವುದನ್ನು ಕೇಳಿದ ಮೇಲೆ 1993 ಸರಣಿ ಬಾಂಬ್ ಸ್ಪೋಟದ ಬಗ್ಗೆ ಸರಿಯಾದ ತನಿಖೆ ನಡೆದಿಲ್ಲ ಎಂಬುದು ತಿಳಿದುಬರುತ್ತದೆ. ಸ್ಪೋಟದ ಪ್ಲಾನ್ ಮಾಡಿದವರು ಇಂದಿಗೂ ಸ್ವತಂತ್ರವಾಗಿ ಓಡಾಡುತ್ತಿದ್ದಾರೆ. ಅಂದು ಈ ಮಾಸ್ಟರ್ ಮೈಂಡ್​ಗಳನ್ನು ಬಂಧಿಸಿ ಕಾನೂನು ಪ್ರಕಾರ ಕಠಿಣ ಶಿಕ್ಷೆ ವಿಧಿಸಿದ್ದರೆ ಅನೇಕ ಭಯೋತ್ಪಾದಕರಿಗೆ ಅದು ಪಾಠವಾಗುತ್ತಿತ್ತು. ಭಾರತದಲ್ಲಿ ಬಾಂಬ್ ಬ್ಲಾಸ್ಟ್ ಇರಲಿ, ಅಕ್ರಮವಾಗಿ ಪ್ರವೇಶಿಸಲು ಹೆದರುತ್ತಿದ್ದರು.

Published On - 6:00 pm, Sat, 11 March 23

ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಕನ್ನಡಿಗರು ಸಹನಶೀಲರು ಆದರೆ ಕಣಕಿದರೆ ಸುಮ್ಮನಿರಲ್ಲ: ನಾರಾಯಣಗೌಡ, ಕರವೇ
ಕನ್ನಡಿಗರು ಸಹನಶೀಲರು ಆದರೆ ಕಣಕಿದರೆ ಸುಮ್ಮನಿರಲ್ಲ: ನಾರಾಯಣಗೌಡ, ಕರವೇ
ನಟ ಕಮಲ್​ ಹಾಸನ್​ಗೆ ಕನ್ನಡದ ಇತಿಹಾಸ ಗೊತ್ತಿಲ್ಲ: ವ್ಯಂಗ್ಯವಾಡಿದ ಸಿಎಂ
ನಟ ಕಮಲ್​ ಹಾಸನ್​ಗೆ ಕನ್ನಡದ ಇತಿಹಾಸ ಗೊತ್ತಿಲ್ಲ: ವ್ಯಂಗ್ಯವಾಡಿದ ಸಿಎಂ
ಆರ್ಮಿ ಜಾಕೆಟ್ ತೊಟ್ಟು ಬೀಗಿದ ಸಿದ್ದರಾಮಯ್ಯ ಮತ್ತು ಶಿವಕುಮಾರ್
ಆರ್ಮಿ ಜಾಕೆಟ್ ತೊಟ್ಟು ಬೀಗಿದ ಸಿದ್ದರಾಮಯ್ಯ ಮತ್ತು ಶಿವಕುಮಾರ್