News 9 Plus World Exclusive: 1993ರ ಮುಂಬೈ ಸರಣಿ ಸ್ಪೋಟದಲ್ಲಿ ಪಾಕ್ ಸೇನೆಯು ಸ್ಪಷ್ಟವಾಗಿ ಭಾಗಿಯಾಗಿತ್ತು- ಪ್ರೇಮ್ ಮಹಾದೇವನ್

ಪ್ರೇಮ್ ಮಹದೇವನ್ ಅವರ ಪ್ರಕಾರ ಅಂದು ಭಯೋತ್ಪಾದಕರು ನಿಜವಾಗಿಯೂ ಭಯೋತ್ಪಾದಕರಾಗಿರಲಿಲ್ಲ. ಅವರು ವಿದೇಶಿ ಶಕ್ತಿಯ ಕೈ ಗೊಂಬೆಯಾಗಿದ್ದರು

News 9 Plus World Exclusive: 1993ರ ಮುಂಬೈ ಸರಣಿ ಸ್ಪೋಟದಲ್ಲಿ ಪಾಕ್ ಸೇನೆಯು ಸ್ಪಷ್ಟವಾಗಿ ಭಾಗಿಯಾಗಿತ್ತು- ಪ್ರೇಮ್ ಮಹಾದೇವನ್
Prem MahadevanImage Credit source: News 9
Follow us
ನಯನಾ ಎಸ್​ಪಿ
|

Updated on: Mar 11, 2023 | 9:30 PM

ಭಾರತವು 1993 ಮುಂಬೈ ಸರಣಿ ಬಾಂಬ್ ಸ್ಪೋಟದ (1993 Mumbai Bomb Blast) ಭೀಕರತೆಗೆ ಸಾಕ್ಷಿಯಾಗಿದೆ. ಅಂದು ಬಲಿಯಾದವರ (Death) ಸಂಖ್ಯೆ 257 ಆದರೆ , ತಮ್ಮ ಕುಟುಂಬದವರನ್ನು ಕಳೆದುಕೊಂಡು ಕಣ್ಣೀರಿಟ್ಟವರು ಸಂಖ್ಯೆ ಸಾವಿರದಷ್ಟು. ಭಾರತ ಇಂದಿಗೂ ಮರೆಯಲಾಗದ 1993 ಮುಂಬೈ ಸರಣಿ ಬಾಂಬ್ ಸ್ಪೋಟದ ಕುರಿತು ನ್ಯೂಸ್ 9 ಜೊತೆ ಮಾತನಾಡಿದ ಇಟಿಎಚ್ ಜ್ಯೂರಿಚ್‌ನಲ್ಲಿರುವ ಸೆಂಟರ್ ಫಾರ್ ಸೆಕ್ಯುರಿಟಿ ಸ್ಟಡೀಸ್‌ನ ಹಿರಿಯ ಸಂಶೋಧಕರಾದ ಪ್ರೇಮ್ ಮಹದೇವನ್ (Prem Mahadevan) ಅವರ ಪ್ರಕಾರ ಅಂದು ಭಯೋತ್ಪಾದಕರು ನಿಜವಾಗಿಯೂ ಭಯೋತ್ಪಾದಕರಾಗಿರಲಿಲ್ಲ. ಅವರು ವಿದೇಶಿ ಶಕ್ತಿಯ ಕೈ ಗೊಂಬೆಯಾಗಿದ್ದರು.

ಭಯೋತ್ಪಾದಕರ ಪಾತ್ರ ಮತ್ತು ಉದ್ದೇಶವು ನಗರದಲ್ಲಿ ಭಯವನ್ನು ಹುಟ್ಟುಹಾಕುವುದು, ಆರ್ಥಿಕತೆಯನ್ನು ಧ್ವಂಸಗೊಳಿಸುವುದು ಮತ್ತು ದೇಶದ ಆಂತರಿಕ ಕೋಮು ಸಂಘರ್ಷವನ್ನು ಹೆಚಿಸುವುದು. ಇದನ್ನು ಸಾಧಿಸಲು, ಅವರು ಎರಡು ಹಂತಗಳ ಯೋಜನೆಯನ್ನು ಹೊಂದಿದ್ದರು. ಆದರೆ ಒಂದು ಹಂತವನ್ನು ಮಾತ್ರ ಪೂರ್ಣಗೊಳಿಸಲಾಯಿತು. ಇದರ ಪರಿಣಾಮವಾಗಿ, 257 ಭಾರತೀಯರು ಪ್ರಾಣ ಕಳೆದುಕೊಂಡರು.

ಮೊದಲ ಹಂತದಲ್ಲಿ ಬಾಂಬ್ ಸ್ಫೋಟ ಮಾಡಿ ನಂತರ ಮುಂಬೈನ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಗುಂಡು ಹಾರಿಸಿ ಗಲಭೆ ಎಬ್ಬಿಸುವುದು. ಇದೆ ಉದ್ದೇಶಕ್ಕಾಗಿ ಅಂದು ಭಯೋತ್ಪಾದಕರು ಕಲಾಶ್ನಿಕೋವ್ ಆಕ್ರಮಣಕಾರಿ ರೈಫಲ್‌ಗಳನ್ನು ತಂದಿದ್ದರು. ದಾಳಿ ನಂತರ ಈ ಮಾಫಿಯಾ ಗುಂಪು ಬೆಚ್ಚಿಬಿದ್ದ ಕಾರಣ ಈ ಭಾಗವು ಕಾರ್ಯರೂಪಕ್ಕೆ ಬರಲಿಲ್ಲ.

ಮುಂಬೈನಲ್ಲಿ ನಡೆದಿರುವುದು ಬಾಬರಿ ಮಸೀದಿ ಧ್ವಂಸದ ನಂತರದ ಗಲಭೆಗೆ ಪ್ರತೀಕಾರವಾಗಿ ಭಾರತದಲ್ಲಿ ಬಾಂಬ್ ಸ್ಫೋಟ, ಗಲಭೆಗಳನ್ನು ಪ್ಲಾನ್ ಮಾಡಲಾಗುತ್ತಿದೆ ಎಂದು ಹೇಳುತ್ತಾರೆ. 15 ವರ್ಷಗಳಿಂದ 2008 ರ 26/11 ಮುಂಬೈ ಸ್ಪೋಟದ ತಯಾರಿ ನಡೆಸಿದ್ದರು ಎಂದು ಪ್ರೇಮ್ ಮಹಾದೇವನ್ ಹೇಳುತ್ತಾರೆ.

“ಈ ಸ್ಫೋಟ ಭಾರತದ ಮೇಲೆ ಯುದ್ಧ ಮಾಡುವ ಬೃಹತ್, ಸಂಘಟಿತ ಅಂತಾರಾಷ್ಟ್ರೀಯ ಪಿತೂರಿಯ ಭಾಗವಾಗಿತ್ತು. ಸಮಸ್ಯೆಯೆಂದರೆ ಮಾಧ್ಯಮ ಈ ಸ್ಫೋಟವನ್ನು ದೇಶಿಯ ಕೋನದಲ್ಲಿ ಪ್ರಸಾರ ಮಾಡಿತೇ ಹೊರತು ಇದು ಅಂತರಾಷ್ಟ್ರೀಯ ಮಟ್ಟದ್ದು ಎಂದು ತಿಳಿಸುವಲ್ಲಿ ವಿಫಲವಾಯಿತು. ನೇರವಾಗಿ ಹೇಳುವುದಾದರೆ, ವಿದೇಶಿ ಗುಪ್ತಚರ ಸಂಸ್ಥೆಯಾದ ಐಎಸ್‌ಐನ ಆಜ್ಞೆಯ ಮೇರೆಗೆ ದಾಳಿಗಳನ್ನು ನಡೆಸಲಾಯಿತು ಮತ್ತು ಕುಖ್ಯಾತ ಡಿ ಕಂಪನಿಯಾದ ದಾವೂದ್ ಇಬ್ರಾಹಿಂ ನೇತೃತ್ವದ ಗ್ಯಾಂಗ್ ಇದನ್ನು ಕಾರ್ಯ ರೂಪಕ್ಕೆ ತಂದಿತು.” ಎಂದು ಪ್ರೇಮ್ ಮಹಾದೇವನ್ ಹೇಳುತ್ತಾರೆ.

“ಅಂದು ಅತ್ಯಂತ ಶಕ್ತಿಶಾಲಿ ಮಿಲಿಟರಿ ದರ್ಜೆಯ ಸ್ಫೋಟಕವಾದ ಏಳು ಟನ್ ಆರ್‌ಡಿಎಕ್ಸ್, ಜೊತೆಗೆ ಸುಮಾರು 300 ಕಲಾಶ್ನಿಕೋವ್ ರೈಫಲ್‌ಗಳನ್ನು ರವಾನಿಸಲು ಐಎಸ್‌ಐ ವ್ಯವಸ್ಥೆ ಮಾಡಿತ್ತು. ಜನರು 26/11 ರ ಬಗ್ಗೆ ಯುದ್ಧಕ್ಕೆ ಆಹ್ವಾನಿಸುತ್ತಿದ್ದಾರೆ ಎಂದು ಮಾತನಾಡಿದ್ದಾರೆ. ಆದರೆ ಇದು ಮಾರ್ಚ್ 12, 1993 ರಂದು ಪ್ರಾರಂಭವಾಯಿತು ಎಂದು ಒಬ್ಬರು ವಾದಿಸಬಹುದು.ಇದು ಮೂಲಭೂತವಾಗಿ ಭಾರತವನ್ನು ಅಸ್ಥಿರಗೊಳಿಸುವ ದೀರ್ಘಾವಧಿಯ ರಹಸ್ಯ ಕಾರ್ಯಾಚರಣೆಯ ಭಾಗವಾಗಿದೆ. ಆದರೆ ಮಾರ್ಚ್ 12 ರಂದು ನಡೆದದ್ದು ಊಹಿಸಲಾಗದ್ದು. ಅಂದು ಪಾಕಿಸ್ತಾನದ ಐಎಸ್‌ಐ ಭಾರತಕ್ಕೆ ವಿನಾಶದ ವಿಷಯದಲ್ಲಿ ಒಂದು ಮಿತಿಯನ್ನು ದಾಟಿತ್ತು” ಎಂದು ಪ್ರೇಮ್ ಮಹಾದೇವನ್ ಹೇಳಿದರು.

ಪ್ರೇಮ್ ಮಹಾದೇವನ್ ಗುಪ್ತಚರ ಮತ್ತು ಅಂತರಾಷ್ಟ್ರೀಯ ಭಯೋತ್ಪಾದನೆಯ ಅಧ್ಯಯನದಲ್ಲಿ ಪರಿಣತಿ ಹೊಂದಿದ್ದಾರೆ. ಇವರು ಈ ಸ್ಪೋಟದ ಕುರಿತು ಕೆಲವು ಮುಖ್ಯ ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ.

1993 ಮುಂಬೈ ಸರಣಿ ಸ್ಪೋಟದಲ್ಲಿ ಪಾಕಿಸ್ತಾನದ ಕೈವಾಡವಿದೆ ಎನ್ನುವುದಕ್ಕೆ ಸಾಕ್ಷಿ:

ಮೊದಲನೆಯದಾಗಿ, ದುಷ್ಕರ್ಮಿಗಳಿದ್ದ ಟೈಗರ್ ಮೆಮನ್‌ನ ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆಸಿದಾಗ ಬಳಸಿದ ಹಾರ್ಡ್‌ವೇರ್ ಅನ್ನು ನೀವು ನೋಡಿದರೆ ಪಾಕಿಸ್ತಾನದ ಮಿಲಿಟರಿ ಆರ್ಡನೆನ್ಸ್ ಗುರುತುಗಳ ರಟ್ಟಿನ ಪೆಟ್ಟಿಗೆಗಳು ಕಾಣುತ್ತವೆ.

ಸ್ಪೋಟದ ಸ್ಥಳದಿಂದ ಡಿಟೋನೇಟರ್ ವಶಪಡಿಸಿಕೊಳ್ಳಲಾಗಿದೆ. ಆ ಡಿಟೋನೇಟರ್ ಅನ್ನು ಅಫ್ಘಾನ್ ಯುದ್ಧದ ದಾಸ್ತಾನುಗಳ ಭಾಗವಾಗಿ ಯುಎಸ್ ಸರ್ಕಾರವು ಪಾಕಿಸ್ತಾನಕ್ಕೆ ಸರಬರಾಜು ಮಾಡಿದ ಡಿಟೋನೇಟರ್ ಅಂತೆಯೇ ಇದೆ. ಇದು ಅಮೆರಿಕದಿಂದ ಪಾಕಿಸ್ತಾನಕ್ಕೆ ಕಳುಹಿಸಲಾದ ಸ್ಟಾಕ್‌ನ ಭಾಗವಾಗಿದೆ ಎಂದು ದೃಡೀಕರಿಸಲಾಗಿದೆ. ನಾವು ಇಲ್ಲಿ ಕಾಣುವುದು ಅಂತಾರಾಷ್ಟ್ರೀಯ ಅಪರಾಧ, ಭಯೋತ್ಪಾದನೆ ಮತ್ತು ISI ಯ ರಹಸ್ಯ ಕಾರ್ಯಾಚರಣೆಗಳ ನಡುವಿನ ಸಂಪರ್ಕವನ್ನು.

ಈ ದಾಳಿಯ ಮಾಸ್ಟರ್ ಮೈಂಡ್ ನಾಸಿರ್ ಬಗ್ಗೆ ಹೇಳುವುದಾದರೆ 1993 ರಲ್ಲಿ ISI ಮುಖ್ಯಸ್ಥ, ಲೆಫ್ಟಿನೆಂಟ್ ಜನರಲ್ ಜಾವಿದ್ ನಾಸಿರ್ ಅವರನ್ನು ಪಾಕಿಸ್ತಾನಿ ಮಾಧ್ಯಮವು ಹಾದಿ ಹೊಗಳಿತ್ತು. ಅಂದು ನಾಸಿರ್ ಕಾರ್ಪ್ಸ್ ಆಫ್ ಇಂಜಿನಿಯರ್ಸ್‌ನ ಅಧಿಕಾರಿಯಾಗಿದ್ದರು.  ನಾಸಿರ್  ಡಿಸೆಂಬರ್ 1983 ರಲ್ಲಿ ಮೇಜರ್ ಜನರಲ್ ಆಗಿ ಬಡ್ತಿ ಪಡೆದರು. ಆ ಸಮಯದಲ್ಲಿ ಅವರ ತಾಯಿ ನಿಧನರಾದ ಕಾರಣ ಇದು ಅವರ ಮೇಲೆ ಬಹಳ ಪ್ರಭಾವ ಬೀರಿತ್ತು. ಈ ಘಟನೆಯ ನಂತರ ನಾಸಿರ್ ಇಸ್ಲಾಮಿಕ್ ಮೂಲಭೂತವಾದಿಯಾದರು.

ಪ್ರೇಮ್ ಮಹಾದೇವನ್ ಹೇಳುವ ಪ್ರಕಾರ, ಐಎಸ್‌ಐ ಕರಾಚಿ ಮತ್ತು ಮಧ್ಯಪ್ರಾಚ್ಯದಲ್ಲಿ ನೆಲೆಸಿರುವ ಇಬ್ಬರು ಪಾಕಿಸ್ತಾನಿ ಸ್ಮಗ್ಲರ್‌ಗಳನ್ನು ಅರಬ್ಬಿ ಸಮುದ್ರದಲ್ಲಿ ಬಂಧಿಸಿದರು. ಜೊತೆಗೆ ದಾವೂದ್ ಇಬ್ರಾಹಿಂನ ಕಳ್ಳಸಾಗಣೆ ಹಡಗನ್ನು ವಶಪಡಿಸಿಕೊಳ್ಳಲಾಗಿತ್ತು. ಅಂದು ISI ದಾವೂದ್ ಇಬ್ರಾಹಿಂಗೆ ಒಂದು ಪ್ರಸ್ತಾಪವನ್ನು ನೀಡಿತು: “ನೀವು ಕಳ್ಳ ಸಾಗಾಣಿಕೆಯನ್ನು ನಿಲ್ಲಿಸಬೇಕು ಅಥವಾ, ನೀವು ಭಾರತದ ವಿರುದ್ಧ ನಮ್ಮ ಚಟುವಟಿಕೆಗಳನ್ನು ಬೆಂಬಲಿಸಬೇಕು. ನೀವು ನಮಗೆ ಬೆಂಬಲಿಸಿದರೆ ಅರಬ್ಬಿ ಸಮುದ್ರದಲ್ಲಿ ನಿಮ್ಮ ಕಳ್ಳಸಾಗಣೆ ಕಾರ್ಯಾಚರಣೆಗಳಿಗೆ ನಾವು ರಕ್ಷಣೆ ನೀಡುತ್ತೇವೆ” ಎಂದು ISI ಹೇಳಿದ್ದರಂತೆ.

 ಜಿಹಾದಿ ಜನರಲ್

ಬಾಂಬ್ ಸ್ಫೋಟಗಳು ನಡೆದಾಗ, ಪಾಕಿಸ್ತಾನ ಭಯೋತ್ಪಾದನೆಗೆ ಪ್ರೋತ್ಸಾಹಿಸುವ ರಾಷ್ಟ್ರ ಎಂಬ ಪಟ್ಟಿಗೆ ಸೇರಿತ್ತು. ಜನರಲ್ ಜಾವೇದ್ಅಂ ನಾಸಿರ್ ಅಮೆರಿಕಾಕ್ಕೆ ತಲೆನೋವಾಗಿದ್ದರು, ಅಮೆರಿಕನ್ನರು ಈ ದಾಳಿಯನ್ನು ಪಾಕಿಸ್ತಾನವನ್ನು ಬ್ಲ್ಯಾಕ್‌ಮೇಲ್ ಮಾಡಲು ಬಳಸಿಕೊಂಡರು. ಆ ಜನರಲ್ ಜಾವಿದ್ ನಾಸಿರ್, ಪ್ರಪಂಚದಾದ್ಯಂತ ಇಸ್ಲಾಮಿಸ್ಟ್ ಗುಂಪುಗಳನ್ನು ಬೆಂಬಲಿಸುತ್ತಿದ್ದಾನೆ, ತಮಿಳು ಟೈಗರ್ಸ್, ಶ್ರೀಲಂಕಾದಲ್ಲಿ ಎಲ್‌ಟಿಟಿಇಯನ್ನು ಕೂಡ ಈತ ಬೆಂಬಲಿಸುತ್ತಾನೆ ಎಂದು ಹೇಳಿ ಪಾಕಿಸ್ತಾನವನ್ನು ಬ್ಲಾಕ್ ಮೇಲ್ ಮಾಡಿದರು.

1993 ರ ಬಾಂಬ್ ಸ್ಫೋಟ ಸಂಭವಿಸಿದಾಗ, ಭಾರತ ತನ್ನ ಗಡಿ ಪ್ರದೇಶವಾದ ಪಂಜಾಬ್ ಮತ್ತು ಕಾಶ್ಮೀರದಲ್ಲಿ ಒತ್ತಡಕ್ಕೆ ಒಳಗಾಗಿತ್ತು. ಇದು ಕೂಡ ಜನರಲ್ ನಾಸಿರ್ ಅವರ ಯೋಜನೆಯ ಒಂದು ಭಾಗ ಎಂದರೇ ತಪ್ಪಾಗಲಾರದು. ಈ ಸ್ಫೋಟ ಕಾಶ್ಮೀರ, ಪಂಜಾಬ್, ಭಾರತೀಯ ನಗರ ಕೇಂದ್ರಗಳಿಗಾಗಿ ಪಾಕಿಸ್ತಾನಿಗಳು ಪ್ರಾರಂಭಿಸಿದ ದೊಡ್ಡ ಆಕ್ರಮಣದ ಭಾಗವಾಗಿತ್ತು.

1993 ದಾಳಿಯ ನಂತರ, ಭಾರತ ಏಕಾಂಗಿಯಾಯಿತು. ದಾವೂದ್ ಇಬ್ರಾಹಿಂ ಮೇಲೆ ಭಾರತೀಯ ಭದ್ರತಾ ಏಜೆನ್ಸಿಗಳು ದಾಳಿ ಮಾಡಿದ್ದು ಐಎಸ್‌ಐನ ಯೋಜನೆಯ ಪ್ರಕಾರ ನಡೆಯದ ಏಕೈಕ ವಿಷಯ. ದಾವೂದ್ ಮತ್ತು ಗ್ಯಾಂಗ್ ಪಾಕಿಸ್ತಾನದ ಸಂಪರ್ಕವನ್ನು ಬಹಿರಂಗಪಡಿಸುವಲ್ಲಿ ಯಶಸ್ವಿಯಾದರು.

ಮುಂಬೈ 1993 ದಾಳಿಯನ್ನು ನಾಸಿರ್, ದಾವೂದ್ ಇಬ್ರಾಹಿಂ ಅಥವಾ ಯಾವುದೊ ಒಬ್ಬ ವ್ಯಕ್ತಿಯಿಂದ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇದು ವ್ಯವಸ್ಥಿತ ದಾಳಿಯ ಭಾಗವಾಗಿದೆ.

ಸೈದ್ಧಾಂತಿಕ ಒಲವಿನ ದೃಷ್ಟಿಯಿಂದ ಜನರಲ್ ನಾಸಿರ್ ಅವರನ್ನು ಕ್ರಿಯಾಶೀಲ ಜನರಲ್ ಎಂದು ಪರಿಗಣಿಸಲಾಗಿದೆ. ಮಧ್ಯ ಏಷ್ಯಾದಲ್ಲಿ ಜಿಹಾದಿಸಂನ ಬೆಂಬಲಕ್ಕೆ ಸಂಬಂಧಿಸಿದಂತೆ ನಾಸಿರ್ ಹೆಸರು ಕೇಳಿ ಬಂದಿತ್ತು. ಈತ LTTE ಜತೆ ನಂಟು ಹೊಂದಿದ್ದ. ಮ್ಯಾನ್ಮಾರ್‌ನಲ್ಲಿನ ದಂಗೆಗೂ ಈತನ ಸಂಬಂಧವಿತ್ತು. ಒಬ್ಬ ಗುಪ್ತಚರ ಮುಖ್ಯಸ್ಥನಿಗೆ ಮೇಲಿಂದ ಆದೇಶ ಬದಿಲ್ಲವಾದರೆ ಇಂತಹ ದಾಳಿಯನ್ನು ಪ್ಲಾನ್ ಮಾಡುವುದು ಕಷ್ಟ.

ಇದರರ್ಥ ಅಂದಿನ ರಾಜಕೀಯ ನಾಯಕ ನವಾಜ್ ಷರೀಫ್ ಇದರ ಹಿಂದಿನ ಮಾಸ್ಟರ್ ಮೈಂಡ್. ಶರೀಫ್ ರಾಜಕೀಯ ಸಂಕಷ್ಟಕ್ಕೆ ಸಿಲುಕುವವರೆಗೂ ಈ ಭಾರತದ ಪರಿಸ್ಥಿತಿ ಸುಧಾರಿಸಲಿಲ್ಲ. ತದನಂತರ, 1993 ರ ಬೇಸಿಗೆಯಲ್ಲಿ, ಅಮೆರಿಕನ್ನರು ನಾಸಿರ್‌ನನ್ನು ತೊಡೆದುಹಾಕದಿದ್ದರೆ, ಪಾಕಿಸ್ತಾನವನ್ನು ಭಯೋತ್ಪಾದನೆಯನ್ನು ಬೆಂಬಲಿಸುವ ರಾಷ್ಟ್ರಗಳ ಪಟ್ಟಿಯಿಂದ ತೆಗೆದುಹಾಕಲಾಗುವುದು ಪಾಕಿಸ್ತಾನಕ್ಕೆ ಹೇಳಲು ಪ್ರಾರಂಭಿಸಿದರು.

ಉದಾಹರಣೆಗೆ, 26/11 ರ ಸಂದರ್ಭದಲ್ಲಿ, ಪಾಕಿಸ್ತಾನವು ಈ ದಾಳಿಗು ನಮಗೂ ಸಂಬಂಧವಿಲ್ಲ ಎಂದು ವಾದಿಸಿದ್ದರು. ಅಲ್ಲದೆ ಐಎಸ್‌ಐನ ದಾಳಿಯಲ್ಲಿ ಭಾರತೀಯರು ಭಾಗಿಯಾಗಿರುವ ಬಗ್ಗೆ ಎಲ್ಲಾ ರೀತಿಯ ಸುಳ್ಳು ಸುದ್ದಿಗಳನ್ನು ಹೊರಹಾಕಿದೆ.

ನಂತರ ಆಗಸ್ಟ್ 3, 2015 ರಂದು, ಪಾಕಿಸ್ತಾನದ ಮಾಜಿ ಡಿಜಿ ಫೆಡರಲ್ ಇನ್ವೆಸ್ಟಿಗೇಶನ್ ಏಜೆನ್ಸಿಯಾದ ತಾರಿಕ್ ಕ್ವೋಸಾ ಅವರು ಪಾಕಿಸ್ತಾನದ ಪ್ರಮುಖ ಇಂಗ್ಲಿಷ್ ಭಾಷೆಯ ಪತ್ರಿಕೆಯಾದ ಡಾನ್‌ನಲ್ಲಿ ಆಪ್-ಎಡ್ ಬರೆದರು, 26/11 ದಾಳಿಯು ಪಾಕಿಸ್ತಾನದ ನೆಲದಲ್ಲಿ ಹುಟ್ಟಿಕೊಂಡಿದೆ ಮತ್ತು ಎಲ್ಲಾ ಹತ್ತು ದಾಳಿಕೋರರು ಪಾಕಿಸ್ತಾನಿ ಪ್ರಜೆಗಳು ಎಂದು ಹೇಳಿದರು.

ನ್ಯೂಸ್ 9 ಜೊತೆ ಮಾತನಾಡಿದ ಪ್ರೇಮ್ ಮಹಾದೇವನ್ ಭಾರತದಲ್ಲಿನ ದಾಳಿಗೂ, ಅಂತಾರಾಷ್ಟ್ರೀಯ ದೇಶಗಳಿಗೂ ಯಾವ ರೀತಿಯ ಸಂಬಂಧವಿದೆ ಎಂಬುದನ್ನು ಸ್ಪಷ್ಟಪಡಿಸಿದರು. ಭಾರತದಲ್ಲಿನ ದಾಳಿ ಯಾರು ಮಾಡಿಸಿದ್ದು ಎಂದು ಭಾರತೀಯರಿಗೆ, ವಿದೇಶಿಯರಿಗೆ, ಸ್ವತಃ ಪಾಕಿಸ್ತಾನಕ್ಕೂ ತಿಳಿದಿದೆ. ಆದರೆ ಇದನ್ನು ಸಾಬೀತು ಪಡಿಸಲು ಸಾಕ್ಷಾಧಾರ ಕೊರೆತೆಯಿಂದ ಭಾರತ ಬಳಲುತ್ತಿದೆ.

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್