ದೆಹಲಿಯಲ್ಲಿ ಕೆಸಿಆರ್ ಪುತ್ರಿ ಕವಿತಾ ವಿಚಾರಣೆ: ಹೈದರಾಬಾದ್‌ನಲ್ಲಿ ಪೋಸ್ಟರ್ಗಳ ಮೂಲಕ ಬಿಜೆಪಿಗೆ ಕುಟುಕಿದ ಬಿಆರ್‌ಎಸ್
ಮಾರ್ಚ್ 8 ರಂದು, ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ನಡೆಯುತ್ತಿರುವ ತನಿಖೆಗೆ ಸಂಬಂಧಿಸಿದಂತೆ ಇಡಿ ಕವಿತಾಗೆ ಸಮನ್ಸ್ ನೀಡಿದ ನಂತರ, ಕೇಂದ್ರ ತನಿಖಾ ಸಂಸ್ಥೆಗಳು ಬಿಜೆಪಿಯ ವಿಸ್ತೃತ ಅಂಗವಾಗಿ ಮಾರ್ಪಟ್ಟಿವೆ ಎಂದು ಬಿಆರ್‌ಎಸ್ ಕೇಂದ್ರದ ಮೇಲೆ ತೀವ್ರ ವಾಗ್ದಾಳಿ ನಡೆಸಿದೆ.
ಹೈದರಾಬಾದ್: ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ (K Chandrashekar Rao)ಅವರ ಪುತ್ರಿ ಕೆ.ಕವಿತಾ (K Kavitha) ಜಾರಿ ನಿರ್ದೇಶನಾಲಯದ (Enforcement Directorate) ಮುಂದೆ ಹಾಜರಾಗಲಿರುವ ಹಿನ್ನೆಲೆಯಲ್ಲಿ ವಿವಿಧ ಪಕ್ಷದ ನಾಯಕರು ಬಿಜೆಪಿಗೆ ಸೇರ್ಪಡೆಗೊಂಡಾಗ ಅವರ ವಿರುದ್ಧ ಯಾವುದೇ ತನಿಖೆ ಯಾಕೆ ನಡೆಯುತ್ತಿಲ್ಲ ಎಂಬ ಪ್ರಶ್ನೆಗಳಿರುವ ಹಲವಾರು ಪೋಸ್ಟರ್‌ಗಳು ಹೈದರಾಬಾದ್‌ನಲ್ಲಿ ಕಾಣಿಸಿಕೊಂಡಿದೆ. ಇತರ ಪಕ್ಷಗಳಿಂದ ಬಿಜೆಪಿಗೆ ಸೇರ್ಪಡೆಗೊಂಡ ನಾಯಕರ ಪೋಸ್ಟರ್ ಗಳು ಒಂದೆಡೆಯಾದರೆ ಮತ್ತೊಂದೆಡೆ ಬಿಆರ್‌ಎಸ್ ಎಂಎಲ್‌ಸಿ ಕೆ ಕವಿತಾ ಪೋಸ್ಟರ್‌ಗಳು ಹೈದರಾಬಾದ್‌ನಲ್ಲಿ ಕಂಡುಬಂದವು.
ಸಂಸತ್ತಿನ ಪ್ರಸಕ್ತ ಬಜೆಟ್ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಪರಿಚಯಿಸುವಂತೆ ಒತ್ತಾಯಿಸಿ ಶುಕ್ರವಾರದಂದು, ದೆಹಲಿಯ ಜಂತರ್ ಮಂತರ್‌ನಲ್ಲಿ ಕವಿತಾ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಶುಕ್ರವಾರ ದೆಹಲಿಯಲ್ಲಿ ತನ್ನ ಉಪವಾಸ ಸತ್ಯಾಗ್ರಹವನ್ನು ಉಲ್ಲೇಖಿಸಿದ ಕವಿತಾ, ತನ್ನ ವಿಚಾರಣೆಯನ್ನು ಶನಿವಾರದವರೆಗೆ ಮುಂದೂಡುವಂತೆ ತನಿಖಾ ಸಂಸ್ಥೆಗೆ ಮನವಿ ಮಾಡಿದ್ದರು. ಇದೇ ಪ್ರಕರಣದಲ್ಲಿ ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಇಡಿ ಬಂಧಿಸಿದೆ.
Telangana | Posters, featuring leaders who joined BJP from others parties and BRS MLC K Kavitha on the other hand, seen in Hyderabad. She is scheduled to appear before ED today in Delhi, in connection with the liquor policy case. pic.twitter.com/bgu7oOL6R1
— ANI (@ANI) March 11, 2023
ಇಡಿ ವಿಚಾರಣೆಗೆ ಸಮನ್ಸ್ ನೀಡಿದ ಗಂಟೆಗಳ ನಂತರ ಮಾರ್ಚ್ 8 ರಂದು ಕವಿತಾ ದೆಹಲಿಗೆ ಬಂದಿದ್ದರು.ಬಿಆರ್‌ಎಸ್ ನಾಯಕ ಕೆಟಿ ರಾಮರಾವ್ ಅವರು ಶುಕ್ರವಾರ ದೆಹಲಿಯಲ್ಲಿರುವ ತಮ್ಮ ತಂದೆಯ ನಿವಾಸಕ್ಕೆ ಆಗಮಿಸಿದ್ದಾರೆ.
ಮೂಲಗಳ ಪ್ರಕಾರ, ಸೋಮವಾರ ರಾತ್ರಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಹೈದರಾಬಾದ್ ಮೂಲದ ಉದ್ಯಮಿ ಅರುಣ್ ರಾಮಚಂದ್ರ ಪಿಳ್ಳೈ ಅವರೊಂದಿಗೆ ಕವಿತಾ ಅವರನ್ನು ಮುಖಾಮುಖಿಯಾಗುವಂತೆ ಮಾಡಲಾಗುತ್ತದೆ. ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಮತ್ತು ಬಿಆರ್‌ಎಸ್ ವಿರುದ್ಧ ಕೇಂದ್ರದ “ಬೆದರಿಕೆಯ ತಂತ್ರ” ಇದು ಎಂದು ಕವಿತಾ ಹೇಳಿದ್ದು, ನಾವು ಹೋರಾಟವನ್ನು ಮುಂದುವರಿಸುತ್ತೇವೆ. ನಾವು ಕೇಂದ್ರದ ವೈಫಲ್ಯಗಳನ್ನು ಬಹಿರಂಗಪಡಿಸುತ್ತೇವೆ, ಭಾರತದ ಉಜ್ವಲ ಮತ್ತು ಉತ್ತಮ ಭವಿಷ್ಯಕ್ಕಾಗಿ ಧ್ವನಿ ಎತ್ತುತ್ತೇವೆ ಎಂದಿದ್ದಾರೆ.
ನಮ್ಮ ನಾಯಕ, ಸಿಎಂ ಕೆಸಿಆರ್ ಅವರ ಹೋರಾಟ ಮತ್ತು ಧ್ವನಿಯ ವಿರುದ್ಧ ಮತ್ತು ಇಡೀ ಬಿಆರ್‌ಎಸ್ ಪಕ್ಷದ ವಿರುದ್ಧದ ಬೆದರಿಕೆಯ ಈ ತಂತ್ರಗಳು ನಮ್ಮನ್ನು ತಡೆಯುವುದಿಲ್ಲ ಎಂದು ಕೇಂದ್ರದ ಆಡಳಿತ ಪಕ್ಷ ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ. ಕೆಸಿಆರ್ ಗಾರು ಅವರ ನಾಯಕತ್ವದಲ್ಲಿ, ನಿಮ್ಮ ವೈಫಲ್ಯಗಳನ್ನು ಬಹಿರಂಗಪಡಿಸಲು ಮತ್ತು ಭಾರತಕ್ಕೆ ಉಜ್ವಲ ಮತ್ತು ಉತ್ತಮ ಭವಿಷ್ಯಕ್ಕಾಗಿ ಧ್ವನಿ ಎತ್ತಲು ನಾವು ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಕವಿತಾ ಟ್ವೀಟ್ ಮಾಡಿದ್ದಾರೆ.
ಮಾರ್ಚ್ 8 ರಂದು, ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ನಡೆಯುತ್ತಿರುವ ತನಿಖೆಗೆ ಸಂಬಂಧಿಸಿದಂತೆ ಇಡಿ ಕವಿತಾಗೆ ಸಮನ್ಸ್ ನೀಡಿದ ನಂತರ, ಕೇಂದ್ರ ತನಿಖಾ ಸಂಸ್ಥೆಗಳು ಬಿಜೆಪಿಯ ವಿಸ್ತೃತ ಅಂಗವಾಗಿ ಮಾರ್ಪಟ್ಟಿವೆ ಎಂದು ಬಿಆರ್‌ಎಸ್ ಕೇಂದ್ರದ ಮೇಲೆ ತೀವ್ರ ವಾಗ್ದಾಳಿ ನಡೆಸಿದೆ.
ತನ್ನ ತನಿಖೆಯಲ್ಲಿ, ಬೃಹತ್ ಕಿಕ್‌ಬ್ಯಾಕ್‌ಗಳ ಪಾವತಿ ಮತ್ತು ಸೌತ್ ಗ್ರೂಪ್‌ನ ಅತಿದೊಡ್ಡ ಕಾರ್ಟೆಲ್ ರಚನೆಯನ್ನು ಒಳಗೊಂಡಿರುವ ಸಂಪೂರ್ಣ ಹಗರಣದಲ್ಲಿ ಪಿಳ್ಳೈ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು ಎಂದು ಇಡಿ ಹೇಳಿದೆ. ಸೌತ್ ಗ್ರೂಪ್‌ನಲ್ಲಿ ತೆಲಂಗಾಣ ಎಂಎಲ್‌ಸಿ ಕವಿತಾ, ಶರತ್ ರೆಡ್ಡಿ (ಅರಬಿಂದೋ ಗ್ರೂಪ್‌ನ ಪ್ರವರ್ತಕರು), ಮಾಗುಂಟ ಶ್ರೀನಿವಾಸುಲು ರೆಡ್ಡಿ (ಎಂಪಿ, ಓಂಗೋಲ್), ಅವರ ಮಗ ರಾಘವ್ ಮಾಗುಂಟಾ ಮತ್ತು ಇತರರು ಇದ್ದಾರೆ. ಸೌತ್ ಗ್ರೂಪ್ ಅನ್ನು ಪಿಳ್ಳೈ, ಅಭಿಷೇಕ್ ಬೋಯಿನ್‌ಪಲ್ಲಿ ಮತ್ತು ಬುಚ್ಚಿ ಬಾಬು ಪ್ರತಿನಿಧಿಸುತ್ತಿದ್ದರು ಎಂದು ಫೆಡರಲ್ ಏಜೆನ್ಸಿ ತನಿಖೆಯಿಂದ ತಿಳಿದುಬಂದಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:51 pm, Sat, 11 March 23