Pulwama widows protest: ಜೈಪುರ: ಪುಲ್ವಾಮಾ ಹುತಾತ್ಮ ಯೋಧರ ವಿಧವೆಯರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಕಲ್ಲು ತೂರಾಟ; ಲಾಠಿ ಪ್ರಹಾರ
ಮೀನಾ ಅವರು ವಿಧವೆಯರನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ. ಅದೇ ವೇಳೆ ಪೊಲೀಸರು ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ ಎಂದು ಮೀನಾ ಆರೋಪಿಸಿದ್ದಾರೆ
ಜೈಪುರ: ಬಿಜೆಪಿ (BJP) ಮುಖಂಡ ಕಿರೋಡಿ ಲಾಲ್ ಮೀನಾ ಅವರನ್ನು ರಾಜಸ್ಥಾನ ಪೊಲೀಸರು ಬಂಧಿಸಿದ ಒಂದು ದಿನದ ನಂತರ, ಪಕ್ಷದ ಕಾರ್ಯಕರ್ತರು ಇಂದು ಜೈಪುರದಲ್ಲಿ (jaipur) ಮತ್ತೊಂದು ಪ್ರತಿಭಟನೆ ನಡೆಸಿದ್ದಾರೆ. ಎರಡು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಗಳು ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ವಿಧವೆಯರ ನೇತೃತ್ವದಲ್ಲಿ ನಡೆಯುತ್ತಿದ್ದು ಹುತಾತ್ಮ ಯೋಧರ ಕುಟುಂಬಗಳಿಗೆ ಉದ್ಯೋಗ ಮತ್ತು ಇತರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿವೆ.
ಮೀನಾ ಅವರು ವಿಧವೆಯರನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ. ಅದೇ ವೇಳೆ ಪೊಲೀಸರು ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ ಎಂದು ಮೀನಾ ಆರೋಪಿಸಿದ್ದಾರೆ. ಇಂದು ಪ್ರತಿಭಟನಾಕಾರರು ಗೆಹ್ಲೋಟ್ ಅವರ ನಿವಾಸದ ಕಡೆಗೆ ಮೆರವಣಿಗೆ ನಡೆಸುತ್ತಿದ್ದಂತೆ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದವು. ಪ್ರತಿಭಟನಾಕಾರರು ಕಲ್ಲು ಎಸೆದು ಪೊಲೀಸ್ ಬ್ಯಾರಿಕೇಡ್‌ಗಳನ್ನು ಒಡೆದಾಗ ಪೊಲೀಸರು ಲಾಠಿ ಚಾರ್ಜ್ ನಡೆಸಿದರು.
Rajasthan Deputy LoP Rajendra Rathore along with some other BJP workers and leaders detained by Police in Jaipur.
BJP workers &leaders protesting over the matter of protest by widows of jawans who lost their lives in the 2019 Pulwama terror attack. pic.twitter.com/WcbM8Dy8XO
— ANI (@ANI) March 11, 2023
2019 ರ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರ ವಿಧವೆಯರ ಪ್ರತಿಭಟನೆಯ ವಿಷಯವಾಗಿ ಬಿಜೆಪಿ ಜೈಪುರದಲ್ಲಿ ಬೃಹತ್ ಪ್ರತಿಭಟನೆಯನ್ನು ಪ್ರಾರಂಭಿಸಿದ್ದರಿಂದ ವಿಪಕ್ಷ ನಾಯಕ ರಾಜೇಂದ್ರ ರಾಥೋಡ್ ಸೇರಿದಂತೆ ಹಲವಾರು ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ. ಅವರ ಬಂಧನದ ನಂತರ, ರಾಥೋಡ್ ರಾಜ್ಯದ ಎಲ್ಲಾ ಮೂಲೆಗಳಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ಮತ್ತಷ್ಟು ನಡೆಸುವುದಾಗಿ ಎಚ್ಚರಿಕೆ ನೀಡಿದರು.
“ನಾವು ಇಂದು ಪ್ರತಿಭಟನೆಯನ್ನು ಪ್ರಾರಂಭಿಸಿದ್ದೇವೆ ಮತ್ತು ನಾವು ಅದನ್ನು ಮುಂದುವರಿಸುತ್ತೇವೆ. ರಾಜ್ಯ ಸರ್ಕಾರದ ವರ್ತನೆಯು ಪ್ರಜಾಪ್ರಭುತ್ವಕ್ಕೆ ಅವಮಾನವಾಗಿದೆ, ನಾವು ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ರಾಜ್ಯದ ಮೂಲೆ ಮೂಲೆಗಳಲ್ಲಿ ಕೊಂಡೊಯ್ಯುತ್ತೇವೆ” ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ:ತೇಜಸ್ವಿ ಯಾದವ್ ಮತ್ತು ಸಹೋದರಿಯರ ಮನೆಯಿಂದ ₹70 ಲಕ್ಷ ನಗದು, 1.5 ಕೆಜಿ ಚಿನ್ನಾಭರಣ ವಶಪಡಿಸಿದ ಇಡಿ
ಶುಕ್ರವಾರ ಬಿಜೆಪಿ ನಾಯಕ ಕಿರೋರಿ ಲಾಲ್ ಮೀನಾ ಅವರನ್ನು ಜೈಪುರದ ಸವಾಯಿ ಮಾನ್ ಸಿಂಗ್ (ಎಸ್‌ಎಂಎಸ್) ಆಸ್ಪತ್ರೆಗೆ ಸಾಗಿಸಲಾಯಿತು, ಶುಕ್ರವಾರ ಪೊಲೀಸರೊಂದಿಗೆ ಘರ್ಷಣೆಯ ಸಂದರ್ಭದಲ್ಲಿ ‘ಗಾಯ’ಗೊಂಡಿದ್ದಾರೆ ಎಂದು ವರದಿಯಾಗಿದೆ. ಮೀನಾ ಮತ್ತು ಪಕ್ಷದ ಕಾರ್ಯಕರ್ತರನ್ನು ಜೈಪುರಕ್ಕೆ ತೆರಳುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ. ಅವರು ಪುಲ್ವಾಮಾ ದಾಳಿಯ ಯೋಧರ ವಿಧವೆಯರನ್ನು ತಮ್ಮ ಬೇಡಿಕೆಗಳ ಪರವಾಗಿ ಬೆಂಬಲಿಸುತ್ತಿದ್ದಾರೆ.
#WATCH | Police detain Rajasthan BJP workers and leaders in Jaipur.
The party was taking out a huge protest rally over the matter of protest by widows of the jawans who lost their lives in the 2019 Pulwama terror attack. pic.twitter.com/Y6BIa0bXdB
— ANI (@ANI) March 11, 2023
ಇದೇ ವೇಳೆ, ಕಾಂಗ್ರೆಸ್ ಯಾವಾಗಲೂ ದೇಶದ ವೀರ ಮತ್ತು ಧೈರ್ಯಶಾಲಿ ಯೋಧರು ಹಾಗೂ ಅವರ ಕುಟುಂಬಗಳನ್ನು ಅವಮಾನಿಸುತ್ತದೆ ಎಂದು ಬಿಜೆಪಿ ಆರೋಪಿಸಿದೆ. ವಿಧವೆಯರು ಫೆಬ್ರವರಿ 28 ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆರು ದಿನಗಳ ಹಿಂದೆ ಕಾಂಗ್ರೆಸ್ ನಾಯಕ ಮತ್ತು ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರ ಮನೆಯ ಹೊರಗೆ ಇವರು ಅನಿರ್ದಿಷ್ಟ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದರು.
ಪುಲ್ವಾಮಾ ವಿಧವೆಯರ ಬೇಡಿಕೆಗಳು ಏನು?
ಮಕ್ಕಳಿಗಷ್ಟೇ ಅಲ್ಲ ತಮ್ಮ ಸಂಬಂಧಿಕರಿಗೂ ಸಹಾನುಭೂತಿಯ ಆಧಾರದ ಮೇಲೆ ಸರ್ಕಾರಿ ಉದ್ಯೋಗ ಸಿಗುವಂತೆ ನಿಯಮಗಳಲ್ಲಿ ಬದಲಾವಣೆ ತರಬೇಕು ಎಂದು ಇವರು ಒತ್ತಾಯಿಸಿದ್ದಾರೆ. ಅವರ ಇತರ ಬೇಡಿಕೆಗಳಲ್ಲಿ ರಸ್ತೆಗಳ ನಿರ್ಮಾಣ ಮತ್ತು ತಮ್ಮ ಹಳ್ಳಿಗಳಲ್ಲಿ ಯೋಧರ ಪ್ರತಿಮೆಗಳನ್ನು ಸ್ಥಾಪಿಸುವುದು ಸೇರಿದೆ. ಇವರು ಬುಧವಾರ ಸಚಿನ್ ಪೈಲಟ್ ನಿವಾಸದ ಮುಂದೆ ಪ್ರತಿಭಟನೆ ನಡೆಸಿ ಶನಿವಾರ ಮುಖ್ಯಮಂತ್ರಿಗಳ ನಿವಾಸದ ಕಡೆಗೆ ಮೆರವಣಿಗೆ ನಡೆಸಿದರು ಅಲ್ಲಿ ಅವರನ್ನು ಪೊಲೀಸರು ತಡೆದರು. ಪೊಲೀಸ್ ಸಿಬ್ಬಂದಿ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ವಿಧವೆಯರು ಈ ಹಿಂದೆ ಆರೋಪಿಸಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:36 pm, Sat, 11 March 23