ಮೈಸೂರಿನಲ್ಲಿ ಮುಂದುವರಿದ ಬೀದಿ ನಾಯಿಗಳ ಹಾವಳಿ: 9 ಆಡು ಮರಿಗಳ ಮೇಲೆ ದಾಳಿ

ಬೀದಿ ನಾಯಿಗಳ ಹಾವಳಿ ಮುಂದುವರೆದಿದ್ದು, ಇಂದು ಮುಂಜಾನೆ 9 ಆಡು ಮರಿಗಳ ಮೇಲೆ ದಾಳಿ ಮಾಡಿರುವಂತಹ ಘಟನೆ ನಗರದ ಬೋಗಾದಿ 2ನೇ ಹಂತದ ಆಯುಷ್ ಬಡಾವಣೆಯಲ್ಲಿ ನಡೆದಿದೆ.

ಮೈಸೂರಿನಲ್ಲಿ ಮುಂದುವರಿದ ಬೀದಿ ನಾಯಿಗಳ ಹಾವಳಿ: 9 ಆಡು ಮರಿಗಳ ಮೇಲೆ ದಾಳಿ
ಪ್ರಾತಿನಿಧಿಕ ಚಿತ್ರImage Credit source: deccanchronicle.com
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Feb 09, 2023 | 2:49 PM

ಮೈಸೂರು: ಜಿಲ್ಲೆಯಲ್ಲಿ ಬೀದಿ ನಾಯಿಗಳ (street dog) ಹಾವಳಿ ಮುಂದುವರೆದಿದ್ದು, ಇಂದು ಮುಂಜಾನೆ 9 ಆಡು ಮರಿಗಳ ಮೇಲೆ ದಾಳಿ ಮಾಡಿರುವಂತಹ ಘಟನೆ ನಗರದ ಬೋಗಾದಿ 2ನೇ ಹಂತದ ಆಯುಷ್ ಬಡಾವಣೆಯಲ್ಲಿ ನಡೆದಿದೆ. ಒಂದೇ ಕುಟುಂಬಕ್ಕೆ ಸೇರಿದ್ದ ಒಂಬತ್ತು ಆಡು ಮರಿಗಳ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. ಕತ್ತಿನ ಭಾಗದಲ್ಲಿ ನಾಯಿಗಳು ಕಚ್ಚಿ ತಿಂದಿವೆ. ಸ್ಥಳೀಯರಲ್ಲಿ ಚಿರತೆ ದಾಳಿ ಎಂದು ಆತಂಕ ಮೂಡಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಇದು ಬೀದಿ ನಾಯಿಗಳ ಹಾವಳಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.

ಕುಂದಾನಗರಿ ಜನರ ನಿದ್ದೆಗೆಡಿಸಿದೆ ಅದೊಂದು ಬೀದಿ ನಾಯಿ

ಬೆಳಗಾವಿ: ನಗರದಲ್ಲಿ ಬೀದಿ ನಾಯಿ ಉಪಟಳ ಹೆಚ್ಚಾಗಿದ್ದು, ಕುಂದಾನಗರಿ ಜನರ ನಿದ್ದೆಗೆಡಿಸಿದೆ ಅದೊಂದು ಬೀದಿ ನಾಯಿ. ಜಿಲ್ಲೆಯ ಮಾರುಕಟ್ಟೆ ಪ್ರದೇಶದಲ್ಲಿ ಬೀದಿನಾಯಿ ದಾಳಿಗೆ ಜನ ಹೈರಾಣಾಗಿದ್ದು, ಮೂರು ದಿನಗಳ ಅಂತರದಲ್ಲಿ ಬರೋಬ್ಬರಿ 19 ಜನರಿಗೆ ಕಚ್ಚಿದೆ. ಬಾಪಟ ಗಲ್ಲಿ ಕಾರ್ ಪಾರ್ಕಿಂಗ್ ಸ್ಥಳ, ಖಡೇ ಬಜಾರ್, ಗಣಪತ ಗಲ್ಲಿ, ಕಡೋಲ್ಕರ್ ಗಲ್ಲಿ, ಕಿರ್ಲೋಸ್ಕರ್ ರಸ್ತೆ ಸೇರಿ ಮಾರುಕಟ್ಟೆ ಪ್ರದೇಶದಲ್ಲಿ ಬೀದಿ ನಾಯಿ ಹಾವಳಿ ಹೆಚ್ಚಾಗಿದೆ. ದೂರು ನೀಡಿದರೂ ಕೂಡ ಜಿಲ್ಲಾಡಳಿತದ ಸೂಕ್ತ ಕ್ರಮಕೈಗೊಂಡಿಲ್ಲ. ಹಾಗಾಗಿ ಜಿಲ್ಲಾಡಳಿತದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ, ಬಳ್ಳಾರಿಯಲ್ಲಿ ಬೀದಿನಾಯಿ ದಾಳಿಗೆ ಒಟ್ಟು ಮೂವರು ಮಕ್ಕಳ ಸಾವು: ಮತ್ತೆ ಗರಿಗೆದರಿದ ನಾಯಿ ನಿರ್ವಹಣೆ ಚರ್ಚೆ

ಕಾಟಾಚಾರಕ್ಕೆ ಬಂದು ಕಚ್ಚಿದ ನಾಯಿ ಬಿಟ್ಟು ಬೇರೆ ನಾಯಿಗಳನ್ನು ಸೆರೆಹಿಡಿದು ತಗೆದುಕೊಂಡು ಹೋಗಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. 19 ಜನರಿಗೆ ಕಚ್ಚಿದ ನಾಯಿ ಬಿಂದಾಸ್ ಆಗಿ ಓಡಾಡುತ್ತಿದ್ದು, ಸ್ಥಳೀಯ ನಿವಾಸಿ ವಿಡಿಯೋ ಮಾಡಿದ್ದಾರೆ. ಮಾರುಕಟ್ಟೆಗೆ ದಿನಂಪ್ರತಿ ಸಾವಿರಾರು ಜನ ಬರುತ್ತಾರೆ. ಚಿಕ್ಕ ಚಿಕ್ಕ ಮಕ್ಕಳ ಕರೆದುಕೊಂಡು ಬಂದಾಗ ನಾಯಿ ದಾಳಿ ಮಾಡಿದ್ರೆ ಯಾರು ಹೊಣೆ. ತಕ್ಷಣ ಬೀದಿ ನಾಯಿ ಸೆರೆ ಹಿಡಿಯುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

ಬೆಂಗಳೂರಿಗೂ ತಪ್ಪಲ್ಲ ಬೀದಿ ನಾಯಿ ಹಾವಳಿ

ಬೆಂಗಳೂರು: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಒಂದು ತಿಂಗಳಲ್ಲಿ ಸುಮಾರು 2 ಸಾವಿರ ಜನರು ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಅವರಲ್ಲಿ ಕೆಲವರಿಗೆ ರೇಬಿಸ್ ಲಕ್ಷಣಗಳು ಕೂಡ ಕಂಡುಬಂದಿವೆ. ಹೀಗಾಗಿ, ಬೀದಿ ನಾಯಿಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕೆಂದು ಬೆಂಗಳೂರಿನ ಜನರು ಒತ್ತಾಯಿಸಿದ್ದರು. ಆದರೆ, ಬೀದಿ ನಾಯಿಗಳನ್ನು ಹಿಡಿದು ಬೆಂಗಳೂರಿನ ಆಶ್ರಯ ಮನೆಗಳಿಗೆ ಸ್ಥಳಾಂತರಿಸಲು ಕರ್ನಾಟಕ ಪಶುಸಂಗೋಪನಾ ಇಲಾಖೆ ನಿರಾಕರಿಸಿದೆ. ಇದಕ್ಕೆ ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಬೀದಿ ನಾಯಿ ಉಪಟಳಕ್ಕೆ ಹೈರಾಣಾದ ಬೆಳಗಾವಿ ಜನರು: ಕಚ್ಚೋ ನಾಯಿ ಬದಲು ಬೇರೆ ನಾಯಿ ಹಿಡಿದುಕೊಂಡು ಹೋದ ಜಿಲ್ಲಾಡಳಿತ

ಪಶುಸಂಗೋಪನಾ ಇಲಾಖೆ ತನ್ನ ಹಿಂದಿನ ಆದೇಶವನ್ನು ಪುನರುಚ್ಛರಿಸಿದ್ದು, ಬೆಂಗಳೂರಿನ ಬೀದಿ ನಾಯಿಗಳು ಬೀದಿಯಲ್ಲಿಯೇ ಉಳಿಯುತ್ತವೆ ಎಂದು ಹೇಳಿದೆ. ಬೆಂಗಳೂರಿನಿಂದ ನಾಯಿಗಳನ್ನು ಸ್ಥಳಾಂತರಿಸದಿರಲು ಬಿಬಿಎಂಪಿ, ಪಶುಸಂಗೋಪನಾ ಇಲಾಖೆ ನಿರ್ಧರಿಸಿದೆ. ಬೀದಿ ನಾಯಿಗಳನ್ನು ಬೇರೆಡೆ ಶಿಫ್ಟ್​ ಮಾಡಲು ಬೆಂಗಳೂರಿನ ನಿವಾಸಿಗಳು ಸಾಕಷ್ಟು ದೂರು ನೀಡಿದ್ದರು. ಆದರೂ ಅದಕ್ಕೆ ಬಿಬಿಎಂಪಿ ಒಪ್ಪಿಗೆ ನೀಡಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.