ವಿಧಾನಸಭೆಯಲ್ಲಿ ‘ಗ್ಯಾರಂಟಿ’ ಜಟಾಪಟಿ; ಕೆಜೆ ಜಾರ್ಜ್ ಮಾತಿಗೆ ಕೆರಳಿದ ಯತ್ನಾಳ್​ರಿಂದ ಏಕವಚನದಲ್ಲೇ ಪ್ರಹಾರ

ವಿಧಾನಸಭೆ ಅಧಿವೇಶನದಲ್ಲಿ ಇಂದು ಬಸವರಾಜ ಬೊಮ್ಮಾಯಿ ಅವರು ವಿದ್ಯುತ್ ದರ ಏರಿಕೆ ಬಗ್ಗೆ ಪ್ರಸ್ತಾಪ ಮಾಡಿದರು. ಇದು ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಕೆಜೆ ಜಾರ್ಜ್ ನಡುವೆ ಮಾತಿನ ಪ್ರಹಾರಕ್ಕೆ ಕಾರಣವಾಯಿತು.

ವಿಧಾನಸಭೆಯಲ್ಲಿ 'ಗ್ಯಾರಂಟಿ' ಜಟಾಪಟಿ; ಕೆಜೆ ಜಾರ್ಜ್ ಮಾತಿಗೆ ಕೆರಳಿದ ಯತ್ನಾಳ್​ರಿಂದ ಏಕವಚನದಲ್ಲೇ ಪ್ರಹಾರ
ಬಸನಗೌಡ ಪಾಟೀಲ್ ಮತ್ತು ಕೆಜೆ ಜಾರ್ಜ್
Follow us
ಕಿರಣ್​ ಹನಿಯಡ್ಕ
| Updated By: Rakesh Nayak Manchi

Updated on: Jul 10, 2023 | 5:31 PM

ವಿಧಾನಸಭೆ: ಅಧಿವೇಶನದಲ್ಲಿ ಇಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರು ವಿದ್ಯುತ್ ದರ ಏರಿಕೆ ಬಗ್ಗೆ ಪ್ರಸ್ತಾಪ ಮಾಡಿದರು. ಇದಕ್ಕೆ ಇಂಧನ ಸಚಿವ ಕೆಜೆ ಜಾರ್ಜ್ (KJ George) ಆಕ್ಷೇಪ ವ್ಯಕ್ತಪಡಿಸಿದಾಗ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಮಧ್ಯಪ್ರವೇಶಿಸಿ ಮಾತಿಗಿಳಿದರು. ಈ ವೇಳೆ ತನ್ನನ್ನು ಸುಮ್ಮನಾಗಿಸಲು ಬಂದ ಕೆಜೆ ಜಾರ್ಜ್ ವಿರುದ್ಧ ಯತ್ನಾಳ್ ಏಕವಚನದಲ್ಲೇ ಪ್ರಹಾರ ನಡೆಸಿದರು.

ವಿದ್ಯುತ್​ ದರ ಹೆಚ್ಚಳ ಕುರಿತು ಸದನದಲ್ಲಿ ಬೊಮ್ಮಾಯಿ ಪ್ರಸ್ತಾಪ ಮಾಡಿದಾಗ ಆಕ್ಷೇಪ ವ್ಯಕ್ತಪಡಿಸಿದ ಇಂಧನ ಸಚಿವ ಕೆಜೆ ಜಾರ್ಜ್, ನಿಮ್ಮ ಅವಧಿಯಲ್ಲಿ ವಿದ್ಯುತ್​ ದರ ಏರಿಕೆ ಆಗಿದ್ದು ಅಂತ ತಿರುಗೇಟು ನೀಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಬಸನಗೌಡ ಪಾಟೀಲ್​ ಯತ್ನಾಳ್​ಗೆ ನಿಮಗೆ ಗೊತ್ತಿಲ್ಲ ಕುಳಿತುಕೊಳ್ಳಿ ಎಂದು ಕೆ.ಜೆ.ಜಾರ್ಜ್ ಹೇಳಿದರು.

ಕೆ.ಜೆ.ಜಾರ್ಜ್ ಮಾತಿಗೆ ಕೆರಳಿದ ಯತ್ನಾಳ್ ಏಕವಚನದಲ್ಲೇ ಆಕ್ರೋಶ ಹೊರಹಾಕಿದರು. ನೀನೇನು ಸರ್ವಜ್ಞನಾ, ಕುಳಿತುಕೊಳ್ಳಲು ಹೇಳಲು ನೀನ್ಯಾರು? ಮಂತ್ರಿ ‌ಮಾಡು ಅಂತಾ ನಾನೇನು ನಿಮ್ಮ ಮನೆಗೆ ಬಂದಿದ್ದೇನ ಎಂದು ಹರಿಹಾಯ್ದರು.

ಇದನ್ನೂ ಓದಿ: ಜೈನಮುನಿ ಹತ್ಯೆ ಪ್ರಕರಣದಲ್ಲಿ ಒಂದು ನಿರ್ದಿಷ್ಟ ಕೋಮಿನ ಆರೋಪಿಯನ್ನು ಕಾಂಗ್ರೆಸ್ ಸರ್ಕಾರ ಸಂರಕ್ಷಿಸುವ ಪ್ರಯತ್ನ ಮಾಡುತ್ತಿದೆ: ಬಸನಗೌಡ ಯತ್ನಾಳ್

ಸದನದಲ್ಲಿ ಗ್ಯಾರಂಟಿ ಜಟಾಪಟಿ, ಮಾತಿನಲ್ಲೇ ಯತ್ನಾಳ್ ಕಾಲೆಳೆದ ಜಾರ್ಜ್

ಸದನದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ಸರ್ಕಾರದ ಐದು ಗ್ಯಾರಂಟಿ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಜಟಾಪಟಿ ನಡೆಯಿತು. ಕೊಟ್ಟ ಮಾತು ಈಡೇರಿಸಿಲ್ಲ ಎಂದು ಬಿಜೆಪಿ ಸದಸ್ಯರು ಆರೋಪಿಸಿದರು. ಈ ವೇಳೆಯೂ ಯತ್ನಾಳ್ ಮತ್ತು ಜಾರ್ಜ್ ನಡುವೆ ಮಾತಿನ ಚಕಮಕಿ ನಡೆಯಿತು.

ವಿರೋಧ ಪಕ್ಷದ ನಾಯಕನಾಗಲು ಶಾಸಕ ಯತ್ನಾಳ್​ಗೆ ಆಸೆ ಇದೆ. ಹಾಗಾಗಿ ಪದೇಪದೆ ಎದ್ದು ಯತ್ನಾಳ್​ ಮಾತನಾಡುತ್ತಿದ್ದಾರೆ. ಎಷ್ಟೇ ಬಾಯಿ ಬಡಿದುಕೊಂಡರೂ ವಿಪಕ್ಷ ನಾಯಕರನ್ನಾಗಿ ಮಾಡಲ್ಲ ಎಂದು ಹೇಳುವ ಮೂಲಕ ಮಾತಿನಲ್ಲೇ ಯತ್ನಾಳ್​ ಅವರ ಕಾಲೆಳೆದರು. ಇದಕ್ಕೆ ಪ್ರತ್ಯುತ್ತರ ನೀಡಿದ ಯತ್ನಾಳ್, ನಾನು ಯಾವ ಹುದ್ದೆಗೂ ಆಸೆ ಪಡಲ್ಲ, ಆಸೆ ಪಟ್ಟಿದ್ದರೆ ಮುಖ್ಯಮಂತ್ರಿ ಆಗುತ್ತಿದ್ದೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ