Fake medicines: ನೀವು ಖರೀದಿಸಿದ ಔಷಧಿ ನಕಲಿಯೋ? ಅಸಲಿಯೋ? ಹೀಗೆ ತಿಳಿದುಕೊಳ್ಳಿ

ನೀವು ಖರೀದಿಸುವ ಔಷಧವು ನಕಲಿಯಾಗಿರಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ನಕಲಿ ಔಷಧಿಗಳನ್ನು ಗುರುತಿಸುವುದು ಮುಖ್ಯವಾಗಿದೆ. ಈ ಬಗ್ಗೆ ಗಾಜಿಯಾಬಾದ್‌ನ ಜಿಲ್ಲಾ ಆಸ್ಪತ್ರೆಯ ಫಾರ್ಮಾ ವಿಭಾಗದ ಡಾ.ಜತೀಂದರ್ ಕುಮಾರ್ ನೀಡಿರುವ ಕೆಲವು ಸಲಹೆಗಳು ಇಲ್ಲಿವೆ.

Fake medicines: ನೀವು ಖರೀದಿಸಿದ ಔಷಧಿ ನಕಲಿಯೋ? ಅಸಲಿಯೋ? ಹೀಗೆ ತಿಳಿದುಕೊಳ್ಳಿ
Fake medicines
Follow us
ಅಕ್ಷತಾ ವರ್ಕಾಡಿ
|

Updated on:Mar 15, 2024 | 5:57 PM

ಇತ್ತೀಚಿನ ದಿನಗಳಲ್ಲಿ ಮೆಡಿಕಲ್ ಸ್ಟೋರ್‌ಗಳಲ್ಲಿ ಔಷಧಿಗಳನ್ನು ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ. ನೆಗಡಿ ಮತ್ತು ಕೆಮ್ಮು ಬಂದರೆ ವೈದ್ಯರನ್ನು ಸಂಪರ್ಕಿಸದೆ ನೇರವಾಗಿ ಮೆಡಿಕಲ್ ಸ್ಟೋರ್‌ನಿಂದ ಔಷಧಿ ತೆಗೆದುಕೊಳ್ಳುತ್ತಾರೆ. ಆದರೆ ಕೆಲವು ಸಂದರ್ಭಗಳಲ್ಲಿ ನೀವು ಖರೀದಿಸುವ ಔಷಧವು ನಕಲಿಯಾಗಿರಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಆದ್ದರಿಂದ ನಕಲಿ ಔಷಧಿಗಳನ್ನು ಹೇಗೆ ಗುರುತಿಸುವುದು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಈ ಬಗ್ಗೆ ಗಾಜಿಯಾಬಾದ್‌ನ ಜಿಲ್ಲಾ ಆಸ್ಪತ್ರೆಯ ಫಾರ್ಮಾ ವಿಭಾಗದ ಡಾ.ಜತೀಂದರ್ ಕುಮಾರ್ ನೀಡಿರುವ ಕೆಲವು ಸಲಹೆಗಳು ಇಲ್ಲಿವೆ.

ಕ್ಯೂಆರ್ ಕೋಡ್ ಪರಿಶೀಲಿಸಿ:

ನೀವು ಔಷಧಿಯನ್ನು ಖರೀದಿಸಿದಾಗ, ಅದರ ಕ್ಯೂಆರ್ ಕೋಡ್ ಅನ್ನು ಪರಿಶೀಲಿಸಿ. 100 ರೂ.ಗಿಂತ ಹೆಚ್ಚಿನ ಬೆಲೆಯ ಔಷಧಿಗಳು ಖಂಡಿತವಾಗಿಯೂ ಕ್ಯೂಆರ್ ಕೋಡ್ ಅನ್ನು ಹೊಂದಿರುತ್ತವೆ. ಕೋಡ್ ಇಲ್ಲದ ಔಷಧವನ್ನು ಖರೀದಿಸಬೇಡಿ. QR ಕೋಡ್ ಇಲ್ಲದ ಔಷಧಗಳು ನಕಲಿಯಾಗಿರಬಹುದು.

ಇದನ್ನೂ ಓದಿ: ಮಾತ್ರೆ ಪ್ಯಾಕೆಟ್​​ ಮೇಲೆ ಕೆಂಪು ಗೆರೆ ಏಕೆ ಇರುತ್ತದೆ? ಇದರ ಅರ್ಥವೇನು?

ಔಷಧದ ಹೆಸರು:

ನೀವು ಔಷಧವನ್ನು ಖರೀದಿಸಿದಾಗ, ಇಂಟರ್ನೆಟ್ನಲ್ಲಿ ಅದರ ಹೆಸರು ಸರ್ಚ್​​ ಮಾಡಿ. ಈಗ ನೀವು ಖರೀದಿಸುವ ಔಷಧಿಯ ಪ್ಯಾಕೇಜಿಂಗ್ ಮತ್ತು ಕಾಗುಣಿತದಲ್ಲಿ ಯಾವುದೇ ತಪ್ಪಿದೆಯೇ? ಎಂದು ಪರಿಶೀಲಿಸಿ. ನೀವು ಖರೀದಿಸುವ ಔಷಧವು ಮುಚ್ಚಿದ ಪ್ಯಾಕ್‌ನಲ್ಲಿ ಬರುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಸಹ ಪರಿಶೀಲಿಸಿ. ಸೀಲ್ ಮಾಡದ ಔಷಧಿಗಳೂ ನಕಲಿಯಾಗಿರಬಹುದು.

ಔಷಧದ ಗುಣಮಟ್ಟ:

ಉತ್ತಮ ಔಷಧಗಳು ಮತ್ತು ಬ್ರಾಂಡೆಡ್ ಔಷಧಗಳು ಯಾವಾಗಲೂ ಫ್ಯಾಕ್ಟರಿ ನಿರ್ಮಿತವಾಗಿ ಕಾಣುತ್ತವೆ ಮತ್ತು ಅವುಗಳ ಮೇಲೆ ಸರಿಯಾದ ಬ್ರಾಂಡ್ ಹೆಸರನ್ನು ಹೊಂದಿರುತ್ತದೆ ಆದರೆ ನಿಮ್ಮ ಮಾತ್ರೆಗಳು ಬಿರುಕು ಬಿಟ್ಟಿದ್ದರೆ, ಬಬಲ್ ಲೇಪನವನ್ನು ಹೊಂದಿದ್ದರೆ ಗಮನಿಸಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:56 pm, Fri, 15 March 24