Red stripe on medicines: ಮಾತ್ರೆ ಪ್ಯಾಕೆಟ್​​ ಮೇಲೆ ಕೆಂಪು ಗೆರೆ ಏಕೆ ಇರುತ್ತದೆ? ಇದರ ಅರ್ಥವೇನು?

ಸಾಮಾನ್ಯವಾಗಿ ಮಾತ್ರೆಗಳನ್ನು ಖರೀದಿಸುವಾಗ ಅದರ ಹಿಂಭಾಗದಲ್ಲಿ ಕೆಂಪು ಬಣ್ಣದ ದಪ್ಪಗಿನ ಗೆರೆಯನ್ನು ನೀವು ನೋಡಿರುತ್ತೀರಿ. ಆದರೆ ಈ ರೀತಿ ಕೆಂಪು ಗೆರೆ ಏಕೆ ಇರುತ್ತದೆ? ಇದರ ಅರ್ಥವೇನು? ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

Red stripe on medicines: ಮಾತ್ರೆ ಪ್ಯಾಕೆಟ್​​ ಮೇಲೆ ಕೆಂಪು ಗೆರೆ ಏಕೆ ಇರುತ್ತದೆ? ಇದರ ಅರ್ಥವೇನು?
Red stripe on medicines
Follow us
ಅಕ್ಷತಾ ವರ್ಕಾಡಿ
|

Updated on:Mar 12, 2024 | 11:09 AM

ಸಾಮಾನ್ಯವಾಗಿ ಸಾಕಷ್ಟು ಜನರು ಅನಾರೋಗ್ಯಕ್ಕೆ ಒಳಗಾದಾಗ ವೈದ್ಯರ ಬಳಿ ಹೋಗದೆ ನೇರವಾಗಿ ಮೆಡಿಕಲ್ ಸ್ಟೋರ್‌ಗೆ ಹೋಗಿ ಮಾತ್ರೆಗಳನ್ನು ಖರೀದಿಸುತ್ತಾರೆ. ಕೆಲವೊಮ್ಮೆ ಈ ಮಾತ್ರೆಗಳು ನಿಮ್ಮ ಸಮಸ್ಯೆಯನ್ನು ಗುಣಪಡಿಸಿದರೂ ಸಹ, ಕೆಲವೊಮ್ಮೆ ಇದರಿಂದ ಗಂಭೀರ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ. ತಕ್ಷಣಕ್ಕೆ ನೋವಿನಿಂದ ಪರಿಹಾರ ನೀಡಬಲ್ಲ ಪೈನ್​​ ಕಿಲ್ಲರ್​, ಆ್ಯಂಟಿ ಬಯೋಟಿಕ್​​​ಗಳಂತಹ ಮಾತ್ರೆಗಳನ್ನು ಖರೀದಿಸುವಾಗ ಮಾತ್ರೆಗಳ ಪ್ಯಾಕೆಟ್​​ ಮೇಲೆ ಕೆಂಪು ಬಣ್ಣದ ದಪ್ಪ ಗೆರೆಗಳನ್ನು ನೀವು ಗಮನಿಸಿರುತ್ತೀರಿ. ಆದರೆ ಈ ಗೆರೆಯ ಅರ್ಥವೇನು ಎಂದು ನಿಮಗೆ ತಿಳಿದಿದೆಯೇ?

ಮಾತ್ರೆಗಳ ಪ್ಯಾಕೆಟ್​​ ಮೇಲಿನ ಕೆಂಪು ಗೆರೆಯ ಅರ್ಥ?

ವಾಸ್ತವವಾಗಿ, ಮಾತ್ರೆಗಳ ಪ್ಯಾಕೆಟ್​​ ಮೇಲಿನ ಕೆಂಪು ಗೆರೆ ಅರ್ಥವೆನೇಂದರೆ ‘ಮಾತ್ರೆಯನ್ನು ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಮಾರಾಟ ಮಾಡಲಾಗುವುದಿಲ್ಲ ಅಥವಾ ವೈದ್ಯರ ಸಲಹೆಯಿಲ್ಲದೆ ಬಳಸಲಾಗುವುದಿಲ್ಲ’ ಎಂಬ ಅರ್ಥವನ್ನು ನೀಡುತ್ತದೆ. ಆದ್ದರಿಂದ ಪ್ರತಿಜೀವಕಗಳ ದುರುಪಯೋಗವನ್ನು ತಡೆಗಟ್ಟಲು, ಔಷಧಿಗಳ ಮೇಲೆ ಕೆಂಪು ಗೆರೆಯನ್ನು ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯವು ತನ್ನ ಟ್ವಿಟರ್​​ ಖಾತೆಯಲ್ಲಿ ಪೋಸ್ಟ್​ ಒಂದನ್ನು ಹಂಚಿಕೊಂಡಿದೆ.

ಆರೋಗ್ಯ ಸಚಿವಾಲಯ ಹಂಚಿಕೊಂಡ ಟ್ವಿಟರ್​ ಪೋಸ್ಟ್​​ ಇಲ್ಲಿದೆ ನೋಡಿ:

ಇದನ್ನೂ ಓದಿ: ಮಾತ್ರೆಗಳನ್ನು ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಏಕೆ ಪ್ಯಾಕ್​​ ಮಾಡಲಾಗುತ್ತದೆ ಎಂದು ತಿಳಿದಿದೆಯೇ?

ಕೆಂಪು ಗೆರೆಯ ಹೊರತಾಗಿ, ಔಷಧದ ಮೇಲೆ ಬರೆಯಲಾದ ಅನೇಕ ಉಪಯುಕ್ತ ವಿಷಯಗಳಿವೆ, ಅದರ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಕೆಲವು ಔಷಧಿಗಳ ಪ್ಯಾಕೇಟ್​ ಮೇಲೆ Rx ಎಂದು ಬರೆಯಲಾಗಿದೆ, ಅಂದರೆ ಔಷಧಿಯನ್ನು ವೈದ್ಯರ ಸಲಹೆಯ ಮೇರೆಗೆ ತೆಗೆದುಕೊಳ್ಳಬೇಕು. ಇದಲ್ಲದೆ ಕೆಲವು ಔಷಧಿಗಳ ಪ್ಯಾಕೆಟ್​ ಮೇಲೆ XRx ಎಂದು ಬರೆಯಲಾಗಿದೆ ಮತ್ತು ಇದರರ್ಥ ಔಷಧಿಯನ್ನು ವೈದ್ಯರಿಂದ ಮಾತ್ರ ತೆಗೆದುಕೊಳ್ಳಬಹುದು. ವೈದ್ಯರು ಈ ಔಷಧಿಯನ್ನು ನೇರವಾಗಿ ರೋಗಿಗೆ ನೀಡಬಹುದು. ವೈದ್ಯರು ಬರೆದ ಪ್ರಿಸ್ಕ್ರಿಪ್ಷನ್ ಇದ್ದರೂ ರೋಗಿಯು ಅದನ್ನು ಯಾವುದೇ ಮೆಡಿಕಲ್ ಸ್ಟೋರ್‌ನಿಂದ ಖರೀದಿಸಲು ಸಾಧ್ಯವಿಲ್ಲ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:09 am, Tue, 12 March 24

ನೆಲಮಂಗಲ ಅಪಘಾತ: ದುರಂತಕ್ಕೂ ಮುನ್ನ ಚಂದ್ರಮ್ ಕೊನೆಯ ದೃಶ್ಯ ಇಲ್ಲಿದೆ ನೋಡಿ
ನೆಲಮಂಗಲ ಅಪಘಾತ: ದುರಂತಕ್ಕೂ ಮುನ್ನ ಚಂದ್ರಮ್ ಕೊನೆಯ ದೃಶ್ಯ ಇಲ್ಲಿದೆ ನೋಡಿ
ತಮ್ಮ ರಾಜಕೀಯ ವೈರಿ ಚಲುವರಾಯಸ್ವಾಮಿ ಕೆಲಸವನ್ನು ಶ್ಲಾಘಿಸಿದ ಕುಮಾರಣ್ಣ..!
ತಮ್ಮ ರಾಜಕೀಯ ವೈರಿ ಚಲುವರಾಯಸ್ವಾಮಿ ಕೆಲಸವನ್ನು ಶ್ಲಾಘಿಸಿದ ಕುಮಾರಣ್ಣ..!
ಚಿತ್ರದುರ್ಗದಲ್ಲಿ ಮ್ಯಾಕ್ಸ್ ಟ್ರೇಲರ್ ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಚಿತ್ರದುರ್ಗದಲ್ಲಿ ಮ್ಯಾಕ್ಸ್ ಟ್ರೇಲರ್ ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಕುವೈತ್‌ನ ಬಯಾನ್ ಅರಮನೆಯಲ್ಲಿ ಪ್ರಧಾನಿ ಮೋದಿಗೆ ಗಾರ್ಡ್ ಆಫ್ ಆನರ್ ಪ್ರದಾನ
ಕುವೈತ್‌ನ ಬಯಾನ್ ಅರಮನೆಯಲ್ಲಿ ಪ್ರಧಾನಿ ಮೋದಿಗೆ ಗಾರ್ಡ್ ಆಫ್ ಆನರ್ ಪ್ರದಾನ
ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ
ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ
‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು
‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು
ಬಿಗ್​ಬಾಸ್ ಮನೆಯಲ್ಲಿ ಕಸದ ಬುಟ್ಟಿ: ಚೈತ್ರಾ ಕಸಕ್ಕೆ ಸಮಾನವೆ?
ಬಿಗ್​ಬಾಸ್ ಮನೆಯಲ್ಲಿ ಕಸದ ಬುಟ್ಟಿ: ಚೈತ್ರಾ ಕಸಕ್ಕೆ ಸಮಾನವೆ?
ಮಂಡ್ಯ: ಸಾಹಿತ್ಯ ಸಮ್ಮೇಳನದಲ್ಲಿ ಚಲುವರಾಯಸ್ವಾಮಿ ಭರ್ಜರಿ ಡ್ಯಾನ್ಸ್​
ಮಂಡ್ಯ: ಸಾಹಿತ್ಯ ಸಮ್ಮೇಳನದಲ್ಲಿ ಚಲುವರಾಯಸ್ವಾಮಿ ಭರ್ಜರಿ ಡ್ಯಾನ್ಸ್​