ಚಿತ್ರದುರ್ಗ: ಚಾಕೊಲೇಟ್ ಎಂದು ಮಾತ್ರೆ ಸೇವಿಸಿ ನಾಲ್ಕು ವರ್ಷದ ಮಗು ಸಾವು
ಚಿತ್ರದುರ್ಗ (Chitradurga) ತಾಲೂಕಿನ ಕಡಬನಕಟ್ಟೆ ಗ್ರಾಮದಲ್ಲಿ ಚಾಕೊಲೇಟ್ ಎಂದು ಮಾತ್ರೆ ಸೇವಿಸಿ ನಾಲ್ಕು ವರ್ಷದ ಮಗು ಸಾವನ್ನಪ್ಪಿದ ಘಟನೆ ನಡೆದಿದೆ. ತಾಯಿಯ ಆಕ್ರಂದನ ಮುಗಿಲು ಮುಟ್ಟಿದ್ದು, ಈ ಕುರಿತು ತುರುವನೂರು ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಚಿತ್ರದುರ್ಗ, ಮಾ.07: ಚಾಕೊಲೇಟ್ ಎಂದು ಮಾತ್ರೆ ಸೇವಿಸಿ ನಾಲ್ಕು ವರ್ಷದ ಮಗು ಸಾವನ್ನಪ್ಪಿದ ಘಟನೆ ಚಿತ್ರದುರ್ಗ (Chitradurga) ತಾಲೂಕಿನ ಕಡಬನಕಟ್ಟೆ ಗ್ರಾಮದಲ್ಲಿ ನಡೆದಿದೆ. ಹೃತ್ವಿಕ್(4) ಮೃತ ರ್ದುದೈವಿ. ಕಳೆದ 4 ದಿನಗಳ ಹಿಂದೆ ಮನೆಯಲ್ಲಿದ್ದ ಮಾತ್ರೆ ಸೇವಿಸಿದ್ದ ಮಗುವನ್ನು ಕೂಡಲೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು(ಮಾ.07) ಚಿಕಿತ್ಸೆ ಫಲಿಸದೆ ಬಾಲಕ ಕೊನೆಯುಸಿರೆಳೆದಿದ್ದಾನೆ.
ಮುಗಿಲು ಮುಟ್ಟಿದ ತಾಯಿಯ ಆಕ್ರಂದನ
ಇತ್ತೀಚೆಗೆ ಮೃತ ಮಗುವಿನ ತಾಯಿ ಪವಿತ್ರಾ ಎಂಬುವವರಿಗೆ ಶಸ್ತ್ರಚಿಕಿತ್ಸೆ ಆಗಿತ್ತು. ಈ ಹಿನ್ನಲೆ ವೈದ್ಯರು ನೀಡಿದ್ದ ಮಾತ್ರೆಗಳನ್ನು ಮನೆಯಲ್ಲಿಟ್ಟಿದ್ದರು. ಚಾಕೊಲೇಟ್ ಎಂದು ಭಾವಿಸಿ ಮಾತ್ರೆಗಳನ್ನು ಸೇವಿಸಿದ್ದ ಮಗು ಅಸ್ವಸ್ಥಗೊಂಡಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಶಿಫ್ಟ್ ಮಾಡಿದ್ದರು. ಆದರೀಗ ಮಗು ಸಾವನ್ನಪ್ಪಿದೆ. ಮೊದಲೇ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ತುರುವನೂರು ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಟಿಪ್ಪರ್;ಇಬ್ಬರು ಯುವಕರ ದುರ್ಮರಣ
ಕೋಲಾರ: ಜಲ್ಲಿ ತುಂಬಿದ ಟಿಪ್ಪರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಇಬ್ಬರು ಯುವಕರು ಸಾವನ್ನಪ್ಪಿದ ಘಟನೆ ನಡೆದಿದ್ದು, ಈ ವೇಳೆ ರೊಚ್ಚಿಗೆದ್ದ ಸಂಬಂಧಿಕರು, ಮಿಟಿಗಾನಹಳ್ಳಿ ಗ್ರಾಮದಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಿದ್ದಾರೆ. ಆದರೆ, ಇದು ಪ್ರಯೋಜನವಾಗದೇ ಇದ್ದಾಗ, ಮಿಟಿಗಾನಹಳ್ಳಿ ಗ್ರಾಮದಿಂದ ಟೇಕಲ್‌ವರೆಗೂ ಶವಗಳನ್ನು ಸಂಬಂದಿಕರು ಹೊತ್ತು ಬಂದಿದ್ದಾರೆ. ಸ್ಥಳಕ್ಕೆ ಸಂಸದ ಮುನಿಸ್ವಾಮಿ ಮತ್ತು ಶಾಸಕ ನಂಜೇಗೌಡ ಬರಬೇಕು ಎಂದು ಪಟ್ಟುಹಿಡಿದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ