ಮೆಟ್ರೋ ಪಿಲ್ಲರ್​ ಬಿದ್ದು ತಾಯಿ ಮಗು ಸಾವು ಪ್ರಕರಣ: ಸರ್ಕಾರದ ಪರಿಹಾರ ತಿರಸ್ಕರಿಸಿದ ಕುಟುಂಬಸ್ಥರು

ಮೆಟ್ರೋ ಪಿಲ್ಲರ್ ಕುಸಿದು ತಾಯಿ‌ ಮಗು ಸಾವನ್ನಪ್ಪಿದ್ದು, ಈ ಕೃತ್ಯಕ್ಕೆ ಕಾರಣರಾದ ಕಂಟ್ರಾಕ್ಟರ್ ಮೇಲೇ ಇನ್ನು ಸೂಕ್ತ ಕ್ರಮ ಕೈಗೊಳ್ಳದ ಹಿನ್ನಲೆ ಪರಿಹಾರವನ್ನ ನಿರಾಕರಿಸಿದ್ದೇವೆ ಎಂದು ಮೃತರ ಪತಿ ಲೋಹಿತ್​ ಹೇಳಿದ್ದಾರೆ.

ಮೆಟ್ರೋ ಪಿಲ್ಲರ್​ ಬಿದ್ದು ತಾಯಿ ಮಗು ಸಾವು ಪ್ರಕರಣ: ಸರ್ಕಾರದ ಪರಿಹಾರ ತಿರಸ್ಕರಿಸಿದ ಕುಟುಂಬಸ್ಥರು
ಮೆಟ್ರೋ ಪಿಲ್ಲರ್​ ಕುಸಿದಿರುವುದು (ಎಡಚಿತ್ರ). ಮೃತ ತಾಯಿ ಮತ್ತು ಮಗು
Follow us
TV9 Web
| Updated By: Digi Tech Desk

Updated on:Feb 08, 2023 | 3:43 PM

ಬೆಂಗಳೂರು: ಮೆಟ್ರೋ ಪಿಲ್ಲರ್ ಕುಸಿದು ತಾಯಿ‌ ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ದುರಂತ ನಡೆದು ಒಂದು ತಿಂಗಳಾಗುತ್ತಾ ಬಂದರೂ ಇನ್ನು ಕಂಟ್ರಾಕ್ಟರ್ ಮೇಲೇ ಸೂಕ್ತ ಕ್ರಮ ಕೈಗೊಂಡಿಲ್ಲ. ಇನ್ನೊಂದು ಕಡೆ ಸಿಎಂ ಕಡೆಯಿಂದ ಘೋಷಣೆಯಾದ 10 ಲಕ್ಷ ಪರಿಹಾರ ಕೂಡ ಕುಟುಂಬಸ್ಥರಿಗೆ ದಕ್ಕಿಲ್ಲ. ಇನ್ನು ಬಿಎಂಆರ್​ಸಿಎಲ್ 20 ಲಕ್ಷ ಪರಿಹಾರವನ್ನು ನೀಡುತ್ತಿದ್ದು ಅದನ್ನು ತಿರಸ್ಕರಿಸಿರುವ ಕುಟುಂಬಸ್ಥರು, ಮೊದಲು ಕಂಟ್ರಾಕ್ಟರ್ ಲೈಸೆನ್ಸ್ ರದ್ದು‌ಮಾಡಿ, ಇದುವರೆಗೆ ಕಂಟ್ರಾಕ್ಟರ್ ಹಾಗೂ ಬಿಎಂಆರ್​ಸಿಎಲ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಆಗಿಲ್ಲ. ನಮ್ಮ ಕುಟುಂಬದ ದುರಂತಕ್ಕೆ ಹೊಣೆಯಾದವರ ವಿರುದ್ಧ ಕ್ರಮ ಕೈಗೊಳ್ಳದೇ ಇದ್ರೆ ಪರಿಹಾರ ಬೇಕಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇನ್ನೊಂದು ಕಡೆಯಲ್ಲಿ ಸಿಎಂ ಪರಿಹಾರದ ಬಗ್ಗೆ ನಮಗೆ ಗೊತ್ತಾಗಿದ್ದು, ಇದುವರೆಗೆ ಸಿಎಂ ಕಚೇರಿಯಿಂದ ನಮ್ಗೆ ಯಾರು ಕರೆ ಮಾಡಿಲ್ಲ. ಎಂದು ಲೋಹಿತ್ ಟಿವಿ9 ಗೆ ಮಾಹಿತಿ ನೀಡಿದ್ದಾರೆ.

ಈ ಮಧ್ಯೆ ಮೃತರ ಕುಟುಂಬಕ್ಕೆ 20 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದೆವು. ಈ ಬಗ್ಗೆ ಮೃತರ ಪತಿ ಲೋಹಿತ್ ಅವರಿಗೆ 10 ದಿನದ ಹಿಂದೆಯೇ ಪತ್ರ ಕಳುಹಿಸಿ ಯಾರಿಗೆ ಹಣ ನೀಡಬೇಕು ಎಂದುದ್ಳಿದೇವೆ. ಆದರೆ ಅವರು ಇಲ್ಲಿ ತನಕ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರ ಪ್ರತಿಕ್ರಿಯೆ ಬಳಿಕ ಮುಂದಿನ ಪ್ರೋಷಿಜರ್​ಗಳನ್ನ ಕೈಗೊಳ್ಳುತ್ತೇವೆ. ಜೊತೆಗೆ ತಪ್ಪಾಗಿರುವ ಬಗ್ಗೆ ಕಾಂಟ್ರಾಕ್ಟರ್ ಮೇಲೆ ಕೈಗೊಳ್ಳಬೇಕಾದ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಎಂದು ಬಿಎಂಆರ್​ಸಿಎಲ್(BMRCL) ಎಂಡಿ ಅಂಜುಂ ಪರ್ವೇಜ್ ಹೇಳಿದ್ದಾರೆ.

ಲೋಹಿತ್ ಕೂಡ ಎಫ್ ಐ ಆರ್ ಹಾಕಿದ್ದಾರೆ. ಅದರಲ್ಲಿ ಎನ್ಸಿಸಿ ಮತ್ತು ಬಿಎಂಆರ್​ಸಿಎಲ್ ಇಬ್ಬರ ಮೇಲೂ ದೂರು ನೀಡಲಾಗಿದೆ. ಈ ಬಗ್ಗೆ ಕ್ರಿಮಿನಲ್ ಇನ್ವೆಸ್ಟಿಗೇಷನ್ ನಡೆಯುತ್ತಿದೆ. ನಾನು ಸ್ಟೇಟ್ಮೆಂಟ್ ಕೊಟ್ಟು ಬಂದಿದ್ದೀನಿ, ಎಲ್ಲವನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತಾರೆ. ಆಗ ನ್ಯಾಯಲಯ ಏನು ತೀರ್ಮಾನ ಮಾಡಲಿದೆ ಅದರಂತೆ ಕ್ರಮಗಳು ಆಗಲಿದೆ ಎಂದಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:11 pm, Wed, 8 February 23

ನಿಜಕ್ಕೂ ಎಲಿಮಿನೇಟ್ ಆದ್ರಾ ತ್ರಿವಿಕ್ರಂ?; ಅಭಿಮಾನಿಗಳಿಗೆ ಬಿಗ್ ಶಾಕ್
ನಿಜಕ್ಕೂ ಎಲಿಮಿನೇಟ್ ಆದ್ರಾ ತ್ರಿವಿಕ್ರಂ?; ಅಭಿಮಾನಿಗಳಿಗೆ ಬಿಗ್ ಶಾಕ್
ಅಯ್ಯಪ್ಪ ಮಾಲೆ ಧರಿಸಿದ ಬಳಿಕ ಈ ತಪ್ಪುಗಳನ್ನು ಮಾಡಲೇಬಾರದು
ಅಯ್ಯಪ್ಪ ಮಾಲೆ ಧರಿಸಿದ ಬಳಿಕ ಈ ತಪ್ಪುಗಳನ್ನು ಮಾಡಲೇಬಾರದು
Daily horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ
ನೆಲಮಂಗಲ ಅಪಘಾತ: ದುರಂತಕ್ಕೂ ಮುನ್ನ ಚಂದ್ರಮ್ ಕೊನೆಯ ದೃಶ್ಯ ಇಲ್ಲಿದೆ ನೋಡಿ
ನೆಲಮಂಗಲ ಅಪಘಾತ: ದುರಂತಕ್ಕೂ ಮುನ್ನ ಚಂದ್ರಮ್ ಕೊನೆಯ ದೃಶ್ಯ ಇಲ್ಲಿದೆ ನೋಡಿ
ತಮ್ಮ ರಾಜಕೀಯ ವೈರಿ ಚಲುವರಾಯಸ್ವಾಮಿ ಕೆಲಸವನ್ನು ಶ್ಲಾಘಿಸಿದ ಕುಮಾರಣ್ಣ..!
ತಮ್ಮ ರಾಜಕೀಯ ವೈರಿ ಚಲುವರಾಯಸ್ವಾಮಿ ಕೆಲಸವನ್ನು ಶ್ಲಾಘಿಸಿದ ಕುಮಾರಣ್ಣ..!
ಚಿತ್ರದುರ್ಗದಲ್ಲಿ ಮ್ಯಾಕ್ಸ್ ಟ್ರೇಲರ್ ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಚಿತ್ರದುರ್ಗದಲ್ಲಿ ಮ್ಯಾಕ್ಸ್ ಟ್ರೇಲರ್ ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು
ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು
ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?
ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?