BJP Symbol: ಕೇಸರಿ ಬಣ್ಣದಿಂದ ಕಡು ಗುಲಾಬಿ ಬಣ್ಣಕ್ಕೆ ತಿರುಗಿದ ಬಿಜೆಪಿ ಲಾಂಛನ; ಅದೃಷ್ಟ ಪರೀಕ್ಷೆಗೆ ಮುಂದಾಯ್ತಾ ಕಮಲ ಪಡೆ?
ಯಲಹಂಕ ವಿಧಾನಭಾ ಕ್ಷೇತ್ರದ ದಾಸನಪುರ ಹೋಬಳಿ ಕಚೇರಿ ಉಧ್ಘಾಟನೆ ಕಾರ್ಯಕ್ರಮದ ಪ್ಲೆಕ್ಸ್‌ಗಳಲ್ಲಿ ಕಮಲದ ಬಣ್ಣ ಕೇಸರಿ ಬದಲು, ಕಡು ಗುಲಾಬಿ ಬಣ್ಣವನ್ನ ಬಳಸಿದೆ.
ನೆಲಮಂಗಲ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ತಮ್ಮ ಅದೃಷ್ಟದ ಕಾರಣಕ್ಕೆ ಪ್ರಜಾಧ್ವನಿ ಯಾತ್ರೆಯಲ್ಲಿ(praja dhwani yatra) ಬಳಸಿರುವ ಕಾಂಗ್ರೆಸ್ನ ಹಸ್ತದಲ್ಲಿ ಗುರುತಿನಲ್ಲಿ ಮೂರು ಗೆರೆಯ ಜೊತೆಗೆ ಮಧ್ಯದಲ್ಲಿ ಒಂದು ಗೆರೆ ಎಳೆದಿದ್ದು ಸಾಕಷ್ಟು ಸುದ್ದಿಯಾಗಿದೆ. ಕಾಂಗ್ರೆಸ್ (Congress) ನಂತರ ಬಿಜೆಪಿ (BJP) ಕೂಡ ಪಕ್ಷ ಚಿಹ್ನೆಯಲ್ಲಿ ಬದಲಾವಣೆ ಮೂಲಕ ಅದೃಷ್ಟ ಪರಿಕ್ಷೆಗೆ ಮುಂದಾಗಿದೆಯಾ ಎಂಬ ರಾಜಕೀಯ ವಲಯದಲ್ಲಿ ಶುರುವಾಗಿದೆ. ಹೌದು ಬಿಜೆಪಿ ಕಮಲ ಚಿಹ್ನೆಯ ಬಣ್ಣವನ್ನ ಬದಲಾಯಿಸಿದೆ. ಇಂದು (ಫೆ.08) ಯಲಹಂಕ ವಿಧಾನಭಾ ಕ್ಷೇತ್ರದ ದಾಸನಪುರ ಹೋಬಳಿ ಕಚೇರಿ ಉಧ್ಘಾಟನೆ ಕಾರ್ಯಕ್ರಮದ ಪ್ಲೆಕ್ಸ್‌ಗಳಲ್ಲಿ ಕಮಲದ ಬಣ್ಣ ಕೇಸರಿ ಬದಲು, ಕಡು ಗುಲಾಬಿ (Dark Pink) ಬಣ್ಣವನ್ನ ಬಳಸಿದೆ. ಯಲಹಂಕ ವಿಧಾನಸಭಾ ಕ್ಷೇತ್ರದಿಂದ ಶಾಸಕ ಎಸ್‌ಆರ್ ವಿಶ್ವನಾಥ್ ಪ್ರತಿನಿಧಿಸುತ್ತಾರೆ.
Published on: Feb 08, 2023 12:56 PM
Latest Videos