BBMP ಕಸ ವಿಲೇವಾರಿ ಟೆಂಡರ್ನಲ್ಲಿ ಗೋಲ್ಮಾಲ್: 7 ಅಧಿಕಾರಿಗಳಿಗೆ ಲೋಕಾಯುಕ್ತ ನೋಟಿಸ್
ಬಹೃತ್ ಬೆಂಗಳೂರು ಮಹಾನಗರ ಪಾಲಿಕೆಯ ಕಸ ವಿಲೇವಾರಿ ಟೆಂಡರ್ನಲ್ಲಿ ಗೋಲ್ಮಾಲ್ ನಡೆದಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ BBMPಯ 7 ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ನೋಟಿಸ್ ನೀಡಿದ್ದು, 15 ದಿನಗಳಲ್ಲಿ ಉತ್ತರ ನೀಡುವಂತೆ ಸೂಚನೆ ನೀಡಿದ್ದಾರೆ.

ಬೆಂಗಳೂರು: ಬಹೃತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯ ಕಸ ವಿಲೇವಾರಿ ಟೆಂಡರ್ನಲ್ಲಿ ಗೋಲ್ಮಾಲ್ ನಡೆದಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ BBMPಯ 7 ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ನೋಟಿಸ್ ನೀಡಿದ್ದು, 15 ದಿನಗಳಲ್ಲಿ ಉತ್ತರ ನೀಡುವಂತೆ ಸೂಚನೆ ನೀಡಿದ್ದಾರೆ.
ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ರಾಕೇಶ್ ಸಿಂಗ್, ಘನ ತ್ಯಾಜ್ಯ ನಿರ್ವಹಣೆಯ ವಿಶೇಷ ಆಯುಕ್ತ ಹರೀಶ್ ನಾಯಕ್, ಘನತ್ಯಾಜ್ಯ ನಿರ್ವಹಣೆ ಅಧೀಕ್ಷಕ ಇಂಜಿನಿಯರ್ ಬಸವರಾಜ್ R.ಕಬಾಡ. ಇಂಜಿನಿಯರ್ಗಳಾದ ಪ್ರವೀಣ್ ಲಿಂಗಯ್ಯ, H.S.ಮೇಘಾ, ಮಧುರಾಮಕೃಷ್ಣ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (Tushar Girinath) ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಕಳೆದ ವರ್ಷ ಸೆಪ್ಟಂಬರ್ನಲ್ಲಿ ಟೆಕ್ನಿಕಲ್ ಗೈಡ್ಲೈನ್ಸ್ ಕಮಿಟಿ ಮುಂದೆ ಮಂಡಿಸದೆ ಕಸ ವಿಲೇವಾರಿಗೆ ತಾಂತ್ರಿಕ ಅರ್ಹತೆ ಇಲ್ಲದ ಪರಿಶುದ್ಧಿ ವೆಂಚರ್ಸ್ ಎಂಬ ಕಂಪನಿಗೆ ಟೆಂಡರ್ ನೀಡಿರುವ ಆರೋಪ ಕೇಳಿಬಂದಿದೆ. 45 ಕೋಟಿ ರೂ.ನಲ್ಲಿ ಆಗುವ ಕೆಲಸಕ್ಕೆ 267 ಕೋಟಿ ರೂ. ಟೆಂಡರ್ ಕೊಟಿದ್ದಾರೆ ಎನ್ನಲಾಗುತ್ತಿದೆ.
ತಿಂಗಳಿಗೆ 25 ಟನ್ ವಿಲೇವಾರಿಯಾಗುವ ಕಸಕ್ಕೆ 3 ಲಕ್ಷದಷ್ಟು ಖರ್ಚು ಮಾಡಲಾಗಿದೆ. ಇನ್ನು ವರ್ಷಕ್ಕೆ 450 ಟನ್ ನಷ್ಟು ಕಸದ ವಿಲೇವಾರಿಗೆ ವೆಚ್ಚ 54 ಲಕ್ಷ ತಗಲುತ್ತದೆ. ಆದರೆ ಇದಕ್ಕೆ 5 ಪಟ್ಟು ಹೆಚ್ಚು ರೂಪಾಯಿಗೆ ಟೆಂಡರ್ ನೀಡಿದ್ದಾರೆಂದು ಗಂಭೀರ ಆರೋಪ ಕೇಳಿಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




