Bannerghatta Biological Park: ಬೆಂಗಳೂರು ಬನ್ನೇರುಘಟ್ಟ ಜೈವಿಕ ಉದ್ಯಾನ ಫೆಬ್ರವರಿ 9 ರಂದು ಬಂದ್
ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನ(Bannerghatta Biological Park)ವನ್ನು ಫೆಬ್ರವರಿ 9 ರಂದು ಒಂದು ದಿನಗಳ ಕಾಲ ಮುಚ್ಚಲಾಗುತ್ತಿದೆ. ಜಿ 20 ರಾಷ್ಟ್ರಗಳ ಪ್ರತಿನಿಧಿಗಳು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಒಂದು ದಿನ ಉದ್ಯಾನಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ.
ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನ(Bannerghatta Biological Park)ವನ್ನು ಫೆಬ್ರವರಿ 9 ರಂದು ಒಂದು ದಿನಗಳ ಕಾಲ ಮುಚ್ಚಲಾಗುತ್ತಿದೆ. ಜಿ 20 ರಾಷ್ಟ್ರಗಳ ಪ್ರತಿನಿಧಿಗಳು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಒಂದು ದಿನ ಉದ್ಯಾನಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಬೆಂಗಳೂರಿನಲ್ಲಿ ಫೆಬ್ರವರಿ 9 ರಿಂದ 11 ದಿನಗಳ ಕಾಲ ಸಭೆ ನಡೆಯಲಿದೆ. ಸಭೆಯ ಭಾಗವಾಗಿ ಜಿ 20 ಸದಸ್ಯರು ಬೆಂಗಳೂರಿನ ವಿವಿಧ ಭಾಗಗಳಿಗೆ ಭೇಟಿ ನೀಡಲಿದ್ದಾರೆ. ಪ್ರೋಟೋಕಾಲ್ ಪ್ರಕಾರ ಬಿಬಿಪಿ, ಬಟರ್ಫ್ಲೈ ಪಾರ್ಕ್ ಹಾಗೂ ಸಫಾರಿ ಪ್ರದೇಶವನ್ನು ಮುಚ್ಚುವಂತೆ ಸೂಚನೆ ನೀಡಲಾಗಿದೆ.
ಭಾರತ ಇಂಧನ ಸಪ್ತಾಹ, ಜಿ 20 ಸಭೆ ಹಾಗೂ ಏರ್ ಶೋ ಪರಿಣಾಮ ಹೊರ ರಾಜ್ಯ ಹಾಗೂ ವಿದೇಶದ ಪ್ರತಿನಿಧಿಗಳ ವಾಸ್ತವ್ಯಕ್ಕೆ ನಗರದ ಹೋಟೆಲ್ಗಳಲ್ಲಿನ ಅಂದಾಜು 50 ಸಾವಿರ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ.
ಮತ್ತಷ್ಟು ಓದಿ: Aero India 2023: ಬೆಂಗಳೂರು ಏರ್ ಶೋ ವೇಳೆ ವಿಮಾನ ಹಾರಾಟ ಸ್ಥಗಿತ, ವೇಳಾಪಟ್ಟಿಯಲ್ಲಿ ಬದಲಾವಣೆ
ಭಾರತದ ಇಂಧನ ಸಪ್ತಾಹ ಇಂದು ಕೊನೆಗೊಳ್ಳಲಿದೆ, ಫೆ. 13 ರಿಂದ 17ರವರೆಗೆ ಏರೋ ಇಂಡಿಯಾ ನಡೆಯಲಿದೆ. ನಗರದಲ್ಲಿನ ಪಂಚತಾರಾ ಕೊಠಡಿಗಳನ್ನು ಪೂರ್ಣ ಪ್ರಮಾಣದಲ್ಲಿ ಕಾಯ್ದಿರಿಸಲಾಗಿದೆ. ತ್ರಿ ಸ್ಟಾರ್ ಹೋಟೆಲ್ಗಳಲ್ಲಿ ಕೆಲವು ಕೊಠಡಿಗಳು ಮಾತ್ರ ಲಭ್ಯವಿದ್ದು, ಅವುಗಳ ದರವೂ ಹೆಚ್ಚಳವಾಗಿದೆ.
ಪ್ರತಿ ವರ್ಷ ಏರ್ ಶೋ ಸೇರಿದಂತೆ ಇತರೆ ಚಟುವಟಿಕೆಯಿಂದ ಕೊಠಡಿಗಳ ಕಾಯ್ದಿರಿಸುವಿಕೆ ಪ್ರಮಾಣ ಹೆಚ್ಚಿರುತ್ತಿತ್ತು. ಆದರೆ, ಈ ವರ್ಷ ಮೂರು ಪ್ರಮುಖ ಕಾರ್ಯಕ್ರಮಗಳು ಆಸುಪಾಸಿನಲ್ಲೇ ನಡೆಯುತ್ತಿರುವ ಪರಿಣಾಮ ಕೊಠಡಿಗಳ ಕಾಯ್ದಿರಿಸುವಿಕೆ ಹೆಚ್ಚಾಗಿದೆ ಎಂದು ಹೇಳಲಾಗಿದೆ.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ