Namma Metro ಪಿಲ್ಲರ್​ಗಳ ಗುಣಮಟ್ಟ ಪರೀಕ್ಷಿಸುವಂತೆ BMRCL ನೌಕರರ ಸಂಘದಿಂದ ಸಿಎಂ ಬೊಮ್ಮಾಯಿಗೆ ಪತ್ರ

ನಿರ್ಮಾಣವಾಗಿರುವ ಮೊದಲ ಹಾಗೂ ಎರಡನೆಯ ಹಂತದ ಮೆಟ್ರೋ ಪಿಲ್ಲರ್​ಗಳ ಗುಣಮಟ್ಟ ಪರಿಶೀಲನೆ ಮಾಡಬೇಕು. ಈ ಪರಿಶೀಲನೆಗೆ ಐಐಟಿ ಅಥವಾ IISc ತಂಡವನ್ನು ನೇಮಿಸಬೇಕು ಎಂದು ನೌಕರರ ಸಂಘದ ಸೂರ್ಯ ನಾರಾಯಣ ಮೂರ್ತಿ ಸಿಎಂ ಬೊಮ್ಮಾಯಿ ಅವರಿಗೆ ವಿಸ್ತೃತ ಪತ್ರ ಬರೆದಿದ್ದಾರೆ.

Namma Metro ಪಿಲ್ಲರ್​ಗಳ ಗುಣಮಟ್ಟ ಪರೀಕ್ಷಿಸುವಂತೆ BMRCL ನೌಕರರ ಸಂಘದಿಂದ ಸಿಎಂ ಬೊಮ್ಮಾಯಿಗೆ ಪತ್ರ
ಬೆಂಗಳೂರು ನಮ್ಮ ಮೆಟ್ರೋ
Follow us
| Updated By: ವಿವೇಕ ಬಿರಾದಾರ

Updated on:Feb 08, 2023 | 3:03 PM

ಬೆಂಗಳೂರು: ಕಳೆದ ತಿಂಗಳು ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್​ ಕುಸಿದು ತಾಯಿ ಮತ್ತು ಮಗು ಸಾವನ್ನಪಿಸಿದ್ದರು. ನಮ್ಮ ಮೆಟ್ರೋ (Namma Metro) ಕಾಮಗಾರಿಗಳ ಗುಣಮಟ್ಟ ಪರೀಕ್ಷೆ ಮಾಡಿಸುವಂತೆ BMRCL ನೌಕರರ ಸಂಘ (BMRCL Employees Union)  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಪತ್ರ ಬರೆದಿದೆ. ಈಗಾಗಲೆ ನಿರ್ಮಾಣವಾಗಿರುವ ಮೊದಲ ಹಾಗೂ ಎರಡನೆಯ ಹಂತದ ಮೆಟ್ರೋ ಪಿಲ್ಲರ್​ಗಳ ಗುಣಮಟ್ಟ ಪರಿಶೀಲನೆ ಮಾಡಬೇಕು. ಈ ಪರಿಶೀಲನೆಗೆ ಐಐಟಿ ಅಥವಾ IISc ತಂಡವನ್ನು ನೇಮಿಸಬೇಕು ಎಂದು ನೌಕರರ ಸಂಘದ ಸೂರ್ಯ ನಾರಾಯಣ ಮೂರ್ತಿ ಸಿಎಂ ಬೊಮ್ಮಾಯಿ ಅವರಿಗೆ ವಿಸ್ತೃತ ಪತ್ರ ಬರೆದಿದ್ದಾರೆ.

ಹಾಗೆ ಬಿಎಂಆರ್​ಸಿಎಲ್​ನ ಆಡಳಿತ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಸೇರಿದಂತೆ, 20 ಜನರು ಭ್ರಷ್ಟ ಅಧಿಕಾರಿಗಳಿಂದ ಮೆಟ್ರೋ ಕಾಮಗಾರಿಗೆ ತೊಂದರೆಯಾಗುತ್ತಿದ್ದು, ಇದರಿಂದ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ. ಎಂಜಿ ರಸ್ತೆಯಿಂದ ಬೈಯಪನಹಳ್ಳಿ ಮತ್ತು ಮೈಸೂರು ರಸ್ತೆಯಿಂದ ಕೆಂಗೇರಿ ನಡುವಿನ ಮೆಟ್ರೋ ಪಿಲ್ಲರ್‌ಗಳ ಸಾಮರ್ಥ್ಯ ಮತ್ತು ಗುಣಮಟ್ಟವನ್ನು ಪರಿಶೀಲಿಸಬೇಕಾಗಿದೆ. ಮೆಟ್ರೋ ಪಿಲ್ಲರ್‌ಗಳ ಸುರಕ್ಷತೆಯ ಬಗ್ಗೆ ಹಲವಾರು ಸಂದರ್ಭಗಳಲ್ಲಿ BMRCL ಆಡಳಿತಕ್ಕೆ ಪತ್ರ ಬರೆದಿದ್ದೇನೆ. ಕಳಪೆ ಗುಣಮಟ್ಟದ ಕಾಮಗಾರಿ ಬಗ್ಗೆ BMRCL ಆಡಳಿತ ವಿಭಾಗಕ್ಕೆ ಪತ್ರ ಬರೆದರೂ, ಇಂಜಿನಿಯರ್‌ಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೆಟ್ರೋದಲ್ಲಿ ತಪ್ಪಿದ ದೊಡ್ಡ ಅನಾಹುತ, ರಹಸ್ಯವಾಗಿ ಹಳಿ ಬಿರುಕನ್ನು ದುರಸ್ಥಿಗೊಳಿಸಿದ BMRCL

ರಾಜಧಾನಿ ಜನರ ವೇಗದ ಸಂಪರ್ಕ ಸಾಧನ ನಮ್ಮ ಮೆಟ್ರೋದಲ್ಲಿ ಭಾರಿ ಅನಾಹುತವೊಂದು ತಪ್ಪಿದೆ. ಸ್ವಲ್ಪ ಯಾಮಾರಿದ್ದರೂ ದೊಡ್ಡ ಅನಾಹುತ ಆಗುತ್ತಿತ್ತು. ನಾಯಂಡಹಳ್ಳಿಯಿಂದ ಕೆಂಗೇರಿಗೆ ಹೋಗುವ ನೇರಳೆ ಬಣ್ಣದ ಮೆಟ್ರೋ ಮಾರ್ಗದ, ಪಟ್ಟಣಗೆರೆ ನಿಲ್ದಾಣದ ಕೂಗಳತೆ ದೂರದ ಹಳಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹಳಿ ಬಿರುಕು ಕಾಣಿಸಿಕೊಂಡಿದ್ದನ್ನು ರೈಲು ಚಾಲಕ ಮತ್ತು ಕೆಳಮಟ್ಟದ ಸಿಬ್ಬಂದಿ ಗಮನಿಸಿದ್ದಾರೆ. ರೈಲು ಪ್ರಯಾಣದ ವೇಳೆ ಕೇಳಿ ಬರುವ ಶಬ್ದದಲ್ಲಿ ವ್ಯತ್ಯಾಸ ಕೇಳಿಬಂದಿದ್ದರಿಂದ ಮೆಟ್ರೋ ಸ್ಪೀಡ್​ನಲ್ಲಿ ಬದಲಾವಣೆ ಮಾಡಿದಾಗ ವಿಷಯ ಬೆಳಕಿಗೆ ಬಂದಿದೆ. ಕೂಡಲೆ ವಿಷಯವನ್ನು ಬಿಎಂಆರ್​ಸಿಎಲ್​ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಇದರಿಂದ ಇಡೀ ದಿನ ಮತ್ತೊಂದು ಟ್ರ್ಯಾಕ್​ನಲ್ಲಿ ಮೆಟ್ರೋ ಓಡಾಟ ನಡೆಸಿದೆ. ಬಳಿಕ ಮೆಟ್ರೋ ಟೀಮ್ ಕೂಡಲೇ ಎಚ್ಚೆತ್ತು ದುರಸ್ಥಿ ಮಾಡಿದ್ದಾರೆ. ಟ್ರ್ಯಾಕ್ ಸರಿಪಡಿಸಿದ ನಂತರ ಎರಡು ಹಳಿಯಲ್ಲಿ‌ ಎಂದಿನಂತೆ ಮೆಟ್ರೋ ಓಡಾಟ ಶುರು ಮಾಡಿಕೊಂಡಿದೆ.

ಪಿಲ್ಲರ್ ಕುಸಿತ ಪ್ರಕರಣದಲ್ಲಿ ಶಿಕ್ಷೆ ಕೊಡಬೇಕಾದವರಿಗೆ ಶಿಕ್ಷೆ ಆಗಿಲ್ಲ

BMRCL ನಲ್ಲಿ ಕ್ವಾಲಿಟಿ ವರ್ಕ್,ಕ್ವಾಲಿಟಿ ಚೆಕಿಂಗ್ ಇಲ್ಲ. IIS ತಜ್ಞರನ್ನು ಬಳಸಿ ಚೆಕ್ ಮಾಡಿದರೇ ಒಂದು ಧೈರ್ಯ ಬರುತ್ತೆ. ಟ್ರಿನಿಟಿ ಟು ಬೈಯಪ್ಪನಹಳ್ಳಿಯಲ್ಲಿ 12 ಪಿಲ್ಲರ್ ಸಮಸ್ಯೆ ಆಗಿತ್ತು. ಕ್ವಾಲಿಟಿ ಆಫ್ ವರ್ಕ್​​ನ್ನು ನಂಬಲು ಸಾಧ್ಯ ಇಲ್ಲ. ಪಟ್ಟಣಗೆರೆ ಟ್ರಾಕ್ ಜಸ್ಟ್ 6 ತಿಂಗಳಿಗೆ ಕಟ್ ಆಗಿದೆ. ಜನರು BMRCL ಮೇಲೆ ನಂಬಿಕೆ ಕಳೆದು ಕೊಳ್ಳುತ್ತಿದ್ದಾರೆ. ಗುತ್ತಿಗೆದಾರರು ಮಾಡುವ ತಪ್ಪಿಗೆ ಜನ ನರಳುತ್ತಿದ್ದಾರೆ. ಮೊನ್ನೆಯ ಪಿಲ್ಲರ್ ಕುಸಿತ ಪ್ರಕರಣದಲ್ಲಿ ಶಿಕ್ಷೆ ಕೊಡಬೇಕಾದವರಿಗೆ ಶಿಕ್ಷೆ ಆಗಿಲ್ಲ. ಸಣ್ಣ ಪುಟ್ಟ ಅಧಿಕಾರಿಗಳ ಹೆಸರು ಸೇರಿಸಿ ಕ್ರಮ ಜರುಗಿಸಿದ್ದಾರೆ ಎಂದು ಸಿಎಂಗೆ ಪತ್ರ ಬರೆದಿದ್ದ ಸೂರ್ಯನಾರಾಯಣ್ ಮೂರ್ತಿ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:50 am, Wed, 8 February 23

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ