AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪು ಸ್ಮಾರಕವನ್ನು ಅದ್ಭುತವಾಗಿ ನಿರ್ಮಾಣ ಮಾಡುತ್ತೇವೆ, ಅದು ನನ್ನ ಭಾಗ್ಯ: ಸಿಎಂ ಬೊಮ್ಮಾಯಿ

ಸಾವಿನ ನಂತರವೂ ಬದುಕಿರುವ ವ್ಯಕ್ತಿ ಅಂದ್ರೆ ಅದು ನಟ ಪುನೀತ್​ ರಾಜಕುಮಾರ್​. ಅಪ್ಪು ಸ್ಮಾರಕವನ್ನು ಅದ್ಭುತವಾಗಿ ನಿರ್ಮಾಣ ಮಾಡುತ್ತೇವೆ, ಅದು ನನ್ನ ಭಾಗ್ಯ. ಕರ್ನಾಟಕ ರತ್ನ ಪ್ರಶಸ್ತಿ ಪುನೀತ್​ಗೆ ಕೊಟ್ಟಿರುವುದು ನನ್ನ ಭಾಗ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಅಪ್ಪು ಸ್ಮಾರಕವನ್ನು ಅದ್ಭುತವಾಗಿ ನಿರ್ಮಾಣ ಮಾಡುತ್ತೇವೆ, ಅದು ನನ್ನ ಭಾಗ್ಯ: ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Follow us
TV9 Web
| Updated By: ವಿವೇಕ ಬಿರಾದಾರ

Updated on: Feb 07, 2023 | 10:58 PM

ಬೆಂಗಳೂರು: ಸಾವಿನ ನಂತರವೂ ಬದುಕಿರುವ ವ್ಯಕ್ತಿ ಅಂದ್ರೆ ಅದು ನಟ ಪುನೀತ್​ ರಾಜಕುಮಾರ್ (Puneeth Rajkumar)​. ಅಪ್ಪು ಸ್ಮಾರಕವನ್ನು ಅದ್ಭುತವಾಗಿ ನಿರ್ಮಾಣ ಮಾಡುತ್ತೇವೆ, ಅದು ನನ್ನ ಭಾಗ್ಯ. ಕರ್ನಾಟಕ ರತ್ನ ಪ್ರಶಸ್ತಿ ಪುನೀತ್​ಗೆ ಕೊಟ್ಟಿರುವುದು ನನ್ನ ಭಾಗ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಹೇಳಿದರು. ಮೈಸೂರು ರಸ್ತೆಯಿಂದ ಬನ್ನೇರುಘಟ್ಟವರೆಗಿನ ಬೆಂಗಳೂರಿನ ರಿಂಗ್ ರಸ್ತೆಗೆ ಪುನೀತ್ ಹೆಸರು ನಾಮಕರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬರುವ ಮಾರ್ಚ್​ನಲ್ಲಿ ಅಂಬರೀಶ್ ಸ್ಮಾರಕ ಉದ್ಘಾಟನೆ ಆಗಲಿದೆ. ರೇಸ್​ ಕೋರ್ಸ್​ನಲ್ಲಿರುವ ರಸ್ತೆಗೆ ಅಂಬರೀಶ್ ಹೆಸರಿಡುತ್ತೇವೆ ಎಂದರು.

ಕಳೆದ ವರ್ಷ ಬೆಂಗಳೂರು ಅಭಿವೃದ್ಧಿಗೆ 6 ಸಾವಿರ ಕೋಟಿ ಅನುದಾನ ನೀಡಲಾಗಿದೆ. ಪದ್ಮನಾಭನಗರಕ್ಕೆ 3 ಸಾವಿರ ಕೋಟಿ ರೂ. ಅನುದಾನ ಕೊಡಲಾಗಿದೆ. ಬೆಂಗಳೂರು ನಗರದಲ್ಲಿ ಪ್ರತಿಯೊಂದು ವಾರ್ಡ್, ಪ್ರತಿಯೊಂದು ರಸ್ತೆ, ಆಸ್ಪತ್ರೆ, ಉದ್ಯಾನವನ ಚೆನ್ನಾಗಿದೆ ಅಂದ್ರೆ ಅದು ಪದ್ಮನಾಭನಗರದಲ್ಲಿ. ಕಂದಾಯ ಸಚಿವ ಆರ್.ಅಶೋಕ್ ಎಲ್ಲವನ್ನೂ ಅಭಿವೃದ್ಧಿ ಮಾಡಿದ್ದಾರೆ ಎಂದು ಹಾಡಿ ಹೊಗಳಿದರು.

ಇದೀಗ 12 ಕಿ.ಮೀ. ಉದ್ದದ ರಸ್ತೆಗೆ ಪುನೀತ್ ಹೆಸರನ್ನು ಇಟ್ಟಿದ್ದಾರೆ. ಬೆಂಗಳೂರು ಮಹಾನಗರ ಅದೆಷ್ಟೋ ಜನರಿಗೆ ಆಶ್ರಯವನ್ನು ಕೊಟ್ಟಿದೆ. ಬೆಂಗಳೂರು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ದೊಡ್ಡ ಪ್ರಮಾಣದಲ್ಲಿ ಅತೀ ವೇಗವಾಗಿ ಬೆಂಗಳೂರು ಬೆಳೆಯುತ್ತಿದೆ. ಚುನಾವಣೆಯಲ್ಲಿ ಗೆದ್ದು ಮತ್ತೆ ನಮ್ಮ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತೆ. ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡೋಣ ಎಂದು ಹೇಳಿದರು.

ಇದೇ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಲೋಗೋ ಬಿಡುಗಡೆ ಮಾಡಿದರು. ಸಚಿವ ಆರ್ ಅಶೋಕ್, ಸಂಸದ ತೇಜಸ್ವಿ ಸೂರ್ಯ, ನಟ ರಾಘವೇಂದ್ರ ರಾಜ್ ಕುಮಾರ್, ನಟ ಅಭಿಷೇಕ್ ಅಂಬರೀಶ್, ಫೀಲಂ ಚೇಂಬರ್ ಅಧ್ಯಕ್ಷ ಬಾ.ಮ ಹರೀಶ್ ಹಾಗೂ ಪದಾದಿಕಾರಿಗಳು, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಉಮೇಶ್ ಬಣಕಾರ್ ಸೇರಿದಂತೆ ಸಾಕಷ್ಟು ಗಣ್ಯರು ಭಾಗಿಯಾಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ