ಡಿ.ಕೆ ಶಿವಕುಮಾರ್​ಗೆ ಮತ್ತೆ ಇ.ಡಿ ಶಾಕ್​, ವಿಚಾರಣೆಗೆ ಹಾಜರಾಗುವಂತೆ ಪುತ್ರಿ ಐಶ್ವರ್ಯಗೆ ನೋಟಿಸ್ ನೀಡಿದ CBI

ಚುನಾವಣೆ ಹತ್ತಿರವಿರುವ ಸಂದರ್ಭದಲ್ಲಿಯೇ ಡಿ.ಕೆ ಶಿವಕುಮಾರ್​ಗೆ ಇಡಿ ನೋಟೀಸ್​ ನೀಡಿದ್ದು, ಫೆ.27 ರಂದು ವಿಚಾರಣೆಗೆ ಹಾಜರಾಗುವಂತೆ ಹೇಳಿದೆ. ಇದರ ಜೊತೆ ಡಿಕೆಶಿ ಪುತ್ರಿಗೂ ಸಿಬಿಐ ನೋಟಿಸ್​ ನೀಡಿದೆ.

ಡಿ.ಕೆ ಶಿವಕುಮಾರ್​ಗೆ ಮತ್ತೆ ಇ.ಡಿ ಶಾಕ್​, ವಿಚಾರಣೆಗೆ ಹಾಜರಾಗುವಂತೆ ಪುತ್ರಿ ಐಶ್ವರ್ಯಗೆ ನೋಟಿಸ್ ನೀಡಿದ CBI
ಡಿ.ಕೆ ಶಿವಕುಮಾರ್​, ಪುತ್ರಿ ಐಶ್ವರ್ಯ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on:Feb 08, 2023 | 7:02 PM

ಬೆಂಗಳೂರು: ಪ್ರಜಾಧ್ವನಿ ಯಾತ್ರೆಯಲ್ಲಿರುವ ಡಿ.ಕೆ ಶಿವಕುಮಾರ್​(D.K.Shivakumar)ಗೆ ಜಾರಿ ನಿರ್ದೇಶನಾಲಯ(ಇ.ಡಿ)  ಶಾಕ್​ ನೀಡಿದೆ. ನ್ಯಾಷನಲ್ ಹೆರಾಲ್ಡ್‌ಗೆ ನೀಡಿರುವ ದೇಣಿಗೆ ಬಗ್ಗೆ ವಿಚಾರಣೆಗೆ ಫೆ.27 ರ ಸೋಮವಾರ ಹಾಜರಾಗುವಂತೆ ಸಮನ್ಸ್ ನೀಡಿದ್ದರೆ. ಇತ್ತ ಪುತ್ರಿ ಐಶ್ವರ್ಯಗೆ ಪಾವತಿಸಿದ್ದ ಶುಲ್ಕದ ಬಗ್ಗೆ ವಿವರ ನೀಡಲು CBI ನೋಟಿಸ್ ನೀಡಿದೆ. ಪ್ರಸ್ತುತ ಡಿ.ಕೆ ಶಿವಕುಮಾರ್​ ಅವರು ಕಾಂಗ್ರೆಸ್​ನ ಪ್ರಜಾಧ್ವನಿ ಯಾತ್ರೆಯಲ್ಲಿದ್ದಾರೆ. ಇಂತಹ ಸಮಯದಲ್ಲಿ ಇಡಿ ವಿಚಾರಣೆಗೆ ಕರೆದಿರುವುದು ಮತ್ತಷ್ಟು ಸಂಕಷ್ಟವನ್ನ ತಂದೊಡ್ಡಿದೆ. ಈ ಹಿಂದೆ ನವೆಂಬರ್ 7ರಂದು ಈ ಕುರಿತು ವಿಚಾರಣೆಗೆ ಹೋಗಿದ್ದರು. ಇದಾದ ಬಳಿಕ ಮತ್ತೆ ಇ.ಡಿ ವಿಚಾರಣೆಗೆ ಕರೆದಿದೆ.

ಚುನಾವಣಾ ಸಮಯದಲ್ಲಿಯೇ ಡಿ.ಕೆ ಶಿವಕುಮಾರ್​ಗೆ ಇ.ಡಿ ನೋಟಿಸ್

ಈ ಹಿಂದೆ ಕೂಡ ‘ಭಾರತ್ ಜೋಡೊ’ ಯಾತ್ರೆ ತಯಾರಿಯಲ್ಲಿದ್ದ ಡಿಕೆಶಿಗೆ ಇಡಿ ಶಾಕ್ ಕೊಟ್ಟಿತ್ತು. ಸೆ.19 ರಂದು ವಿಚಾರಣೆಗೆ ಹಾಜರು ಕೂಡ ಆಗಿದ್ದರು. ಈಗ ಮತ್ತೆ ಪ್ರಜಾಧ್ವನಿ ಯಾತ್ರೆಯಲ್ಲಿ ಬ್ಯುಸಿ ಇರುವ ಡಿಕೆಶಿಗೆ ಫೆ.27 ರಂದು ಅಕ್ರಮ ಹಣ ವರ್ಗಾವಣೆ ವಿಚಾರವಾಗಿ ಹಾಜರಾಗುವಂತೆ ಡಿಕೆ ಶಿವಕುಮಾರ್‌ಗೆ ಇಡಿ ಸಮನ್ಸ್ ಜಾರಿ ಮಾಡಿದೆ. ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಈ ಹಿಂದೆ ಪ್ರತಿಕ್ರಿಯೆ ನೀಡಿದಾಗ ಕಳೆದ 2 ವರ್ಷದ ಹಿಂದೆ ಸಂಪೂರ್ಣ ಆಸ್ತಿ ವಿವರ ನೀಡಲಾಗಿದೆ. ಡಿಕೆಶಿ ಕುಟುಂಬದ ಎಲ್ಲ ಸದಸ್ಯರ ಮಾಹಿತಿ ನೀಡಲಾಗಿದೆ. ಇದು ರಾಜಕೀಯ ಪ್ರಚೋದನೆಯಿಂದ ದಾಖಲಿಸಿದ ದೂರು. ಕೇಂದ್ರದಿಂದ ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆಯಾಗುತ್ತಿದೆ. ಕಾಂಗ್ರೆಸ್ ಕಟ್ಟಿಹಾಕಲು ಪ್ರಯತ್ನ ಆಗ್ತಿದೆ, ಅದು ಸಾಧ್ಯವಾಗಲ್ಲ ಎಂದಿದ್ದರು.

ಇನ್ನು ಇದೇ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್​ ಅವರ ಪುತ್ರಿ ಐಶ್ವರ್ಯಗೂ ಸಿಬಿಐ ಶಾಕ್ ಕೊಟ್ಟಿದೆ. 10 ದಿನದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ. ಡಿಕೆಶಿ ಅಕ್ರಮ ಆಸ್ತಿ ಸಂಪಾದನೆ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಎರಡು ತಿಂಗಳ ಹಿಂದೆ ಡಿಕೆಶಿ ಒಡೆತನದ ಕಾಲೇಜನ್ನ ಪರಿಶೀಲನೆ ನಡೆಸಿದ್ದರು. ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಗ್ಲೋಬಲ್ ಕಾಲೇಜಿನಲ್ಲಿ ನಿರ್ದೇಶಕಿ ಆಗಿರುವ ಡಿಕೆಶಿ ಪುತ್ರಿ ಐಶ್ವರ್ಯಗೆ ನೋಟಿಸ್ ನೀಡಿದ್ದಾರೆ.

ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಅವರಿಗೆ ಸಿಬಿಐ ಯಾವ ಪ್ರಶ್ನೆ ಕೇಳಬಹುದು?

2013 ರಿಂದ 2018 ರ ನಡುವೆ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ರಿಂದ 2 ಆಸ್ತಿ ಖರೀದಿ ಮಾಡಲಾಗಿದ್ದು, 76.11 ಕೋಟಿ ಹಣ ಅಡ್ವಾನ್ಸ್ ನೀಡಿ, ಬೆಳ್ಳಂದೂರಿನ ಸೋಲ್ ಸ್ಪೇಸ್ ಸ್ಪಿರಿಟ್ ಮಾಲ್ ಪ್ರಾಜೆಕ್ಟ್​ನಲ್ಲಿ 2,23,895 ಚದರಡಿ ಕಟ್ಟಡ ಹಾಗೂ 46,827 ಚದರಡಿ ಅವಿಭಜಿತ ಜಾಗ ಖರೀದಿಯ ಹಣದ ಮೂಲದ ಬಗ್ಗೆ ಸಿಬಿಐ ಅಧಿಕಾರಿಗಳು ಪ್ರಶ್ನಿಸಬಹುದು. ಇದರ ಜೊತೆಗೆ 2016 ರಲ್ಲಿ ಕೆಂಗೇರಿಯ ಬಿಎಂ ಕಾವಲ್​ನಲ್ಲಿ 27. 50 ಲಕ್ಷ ನೀಡಿ 10 ಗುಂಟೆ ಜಮೀನು ಖರೀದಿ ಮಾಡಿರುವ ಕುರಿತು ಕೇಳಬಹುದು. ಇನ್ನು ತಾಯಿ ಉಷಾ ಶಿವಕುಮಾರ್​ರಿಗೆ 2.70 ಕೋಟಿ ಸಾಲ, ಎಸ್ ಎಲ್ ನಾಗೇಂದ್ರ ಪ್ರಸಾದ್ ಎಂಬುವರಿಗೆ 1 ಕೋಟಿ ಸಾಲ ನೀಡಿದ್ದಾರೆ, ಆದಾಯ ತೆರಿಗೆಗೆ 10 ಲಕ್ಷ ಸೇರಿ 3.80 ಕೋಟಿ ಹಣ ಈ ಎಲ್ಲಾ ವ್ಯವಹಾರಗಳಿಗೆ ಮಾಡಿದ ಖರ್ಚು, ಹಣದ ಮೂಲದ‌ ಬಗ್ಗೆ ಸಿಬಿಐ ಪ್ರಶ್ನಿಸಬಹುದು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:37 pm, Wed, 8 February 23