AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಯಿಗಳು ಮಧ್ಯರಾತ್ರಿ ವಿಚಿತ್ರವಾಗಿ ಕೂಗುವುದೇಕೆ? ಇದರ ಹಿಂದಿನ ನಿಜವಾದ ಕಾರಣ ಏನು? 

ಕೆಲವೊಮ್ಮೆ ಮಧ್ಯರಾತ್ರಿ ನಾಯಿಗಳು ವಿಚಿತ್ರವಾದ ಶಬ್ದಗಳಲ್ಲಿ ಅಳುವುದನ್ನು ಅಥವಾ ಬೊಗಳುವುದುನ್ನು ನೀವು ಗಮನಿಸಿರಬಹುದಲ್ವಾ. ಅವುಗಳ ಕಣ್ಣಿಗೆ  ರಾತ್ರಿಯ ವೇಳೆ ದೆವ್ವ, ಆತ್ಮಗಳು ಕಾಣಿಸಿಕೊಳ್ಳುತ್ತವೆ. ಅದಕ್ಕಾಗಿಯೇ  ಹೀಗೆ ವಿಚಿತ್ರವಾಗಿ ಅಳುವುದು ಎಂದು ಹಲವರು ಹೇಳುವುದುಂಟು. ನಿಜವಾಗಿಯೂ ಆತ್ಮಗಳನ್ನು ನೋಡಿಯೇ ನಾಯಿಗಳು ಬೊಗಳುತ್ತವೆಯೇ ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಕಾರಣವಿದೆಯೇ? ಈ ಕುರಿತ ಇನ್ನಷ್ಟು ಮಾಹಿತಿ ಇಲ್ಲಿದೆ. 

ನಾಯಿಗಳು ಮಧ್ಯರಾತ್ರಿ ವಿಚಿತ್ರವಾಗಿ ಕೂಗುವುದೇಕೆ? ಇದರ ಹಿಂದಿನ ನಿಜವಾದ ಕಾರಣ ಏನು? 
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Mar 11, 2024 | 6:31 PM

Share

ಹೆಚ್ಚಿನ ಸಂದರ್ಭಗಳಲ್ಲಿ ನೀವು ಕೂಡಾ ಮಧ್ಯರಾತ್ರಿ ಶ್ವಾನಗಳು ವಿಚಿತ್ರವಾಗಿ ಬೊಗಳುತ್ತಿರುವ ಸದ್ದನ್ನು ಕೇಳಿರುತ್ತೀರಿ ಅಲ್ವಾ.  ಹೆಚ್ಚಿನವರು ನಾಯಿಗಳು ಮಧ್ಯರಾತ್ರಿಯಲ್ಲಿ ಹೀಗೆ ಅಳಲು ಪ್ರಾರಂಭಿಸಿದರೆ ಭಯಪಡುತ್ತಾರೆ. ಕೆಲವರು ನಾಯಿಗಳು ಹೀಗೆ ವಿಚಿತ್ರವಾಗಿ ಬೊಗಳಿದರೆ ಅದು ಅಹಿತಕರ ಘಟನೆಗಳು ಸಂಭವಿಸುವುದನ್ನು ಸೂಚಿಸುತ್ತವೆ ಎಂದು ನಂಬುತ್ತಾರೆ. ಇನ್ನೂ ಹೆಚ್ಚಿನವರು ರಾತ್ರಿ ಹೊತ್ತಿನಲ್ಲಿ ಶ್ವಾನಗಳ ಕಣ್ಣಿಗೆ ದೆವ್ವ, ಆತ್ಮಗಳು ಕಾಣಿಸಿಕೊಳ್ಳುತ್ತವೆ. ಆ ಆತ್ಮಗಳನ್ನು ನೋಡಿಯೇ ಕರ್ಕಶ ಧ್ವನಿಯಲ್ಲಿ ಅಳಲು ಆರಂಭಿಸುತ್ತವೆ. ಆ ಸಂದರ್ಭದಲ್ಲಿ ಮನೆಯಿಂದ ಹೊರ ಹೋಗಬಾರದು ಅಂತೆಲ್ಲಾ ಹೇಳುತ್ತಿರುತ್ತಾರೆ. ನಿಜವಾಗಿಯೂ ಆತ್ಮಗಳನ್ನು ನೋಡಿಯೇ ನಾಯಿಗಳು ಬೊಗಳುತ್ತವೆಯೇ ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಕಾರಣವಿದೆಯೇ? ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ನಾಯಿಗಳು ರಾತ್ರಿ ಹೊತ್ತಿನಲ್ಲಿ ವಿಚಿತ್ರವಾಗಿ ಕೂಗುವುದೇಕೆ?

ಬಹುತೇಕ ಹೆಚ್ಚಿನ ಜನರು ರಾತ್ರಿ ಹೊತ್ತಿನಲ್ಲಿ ದೆವ್ವಗಳು ಸುಳಿದಾಡುತ್ತಿರುತ್ತವೆ, ಇದನ್ನು ಕಂಡೇ ನಾಯಿಗಳು ಬೊಗಳುತ್ತವೆ ಎಂದು ಹೇಳುತ್ತಾರೆ. ಆದರೆ ವಿಜ್ಞಾನವು ಈ ಅಂಶವನ್ನು ಒಪ್ಪಿಕೊಳ್ಳುವುದಿಲ್ಲ. ಹೌದು ಶ್ವಾನಗಳು ಅಳುವುದರ ಹಿಂದಿನ ವೈಜ್ಞಾನಿಕ ಕಾರಣ ಬೇರೆಯೇ ಇದೆ.

• ಮೊದಲನೆಯ ಕಾರಣವೇನೆಂದರೆ, ಶ್ವಾನಗಳು ರಾತ್ರಿ ಹೊತ್ತಿನಲ್ಲಿ ಒಂಟಿತನವನ್ನು ಅನುಭವಿಸುತ್ತವೆ. ಮತ್ತು ಶ್ವಾನಗಳು ವಯಸ್ಸಾದಂತೆ ಹೆಚ್ಚು  ಭಯಪಡಲು ಆರಂಭಿಸುತ್ತವೆ. ಅಂತಹ ಸಂದರ್ಭದಲ್ಲಿ  ಅವುಗಳು ನಿರಂತರವಾಗಿ ಬೊಗಳುತ್ತವೆ ಮತ್ತು ಕೆಲವೊಮ್ಮೆ ವಿಚಿತ್ರ ಧ್ವನಿಯಲ್ಲಿ ಅಳುತ್ತವೆ.

• ಅನೇಕ ಬಾರಿ ಬೀದಿ ನಾಯಿಗಳು ಹಸಿವಿನಿಂದ ಕೂಡಾ ಅಳುತ್ತವೆ. ನನಗೆ ಹಸಿವಾಗುತ್ತಿದೆ ಎಂಬ ಭಾವನೆಯನ್ನು ವ್ಯಕ್ತಪಡಿಸಲು ಅವುಗಳು ಜೋರಾಗಿ ಅಳಲು ಪ್ರಾರಂಭಿಸುತ್ತವೆ. ಇದಲ್ಲದೆ ನಾಯಿಗಳು ತಮ್ಮ ಗುಂಪಿನಿಂದ ಬೇರ್ಪಟ್ಟಾಗ ತನ್ನವರಿಗೆ ಸಂಕೇತಗಳನ್ನು ರವಾನಿಸಲು ಈ ರೀತಿ ಅಳಲು ಪ್ರಾರಂಭಿಸುತ್ತವೆ.

ಇದನ್ನೂ ಓದಿ: ಕೆಸರು ಗದ್ದೆಯಲ್ಲಿ ಕ್ರಿಕೆಟ್ ಆಡುತ್ತಾ ಮಜಾ ಉಡಾಯಿಸಿದ ಹೈಕ್ಲು

• ಇನ್ನೊಂದು ಕಾರಣವೆಂದರೆ ಶ್ವಾನಗಳಿಗೆ ಏನಾದರೂ ನೋವುಂಟಾದರೆ ಅಥವಾ ಅವುಗಳಿಗೆ ಹುಷಾರಿಲ್ಲದಿದ್ದರೆ ಅವುಗಳು ಜೋರಾಗಿ ಅಳುತ್ತವೆ. ಅಲ್ಲದೆ ತನ್ನ ಸ್ನೇಹಿತರನ್ನು ಕಳೆದುಕೊಂಡರೆ  ಅವುಗಳು ಹೀಗೆ ವಿಚತ್ರವಾಗಿ ಅಳುವ ಮೂಲಕ ತಮ್ಮ ದುಃಖವನ್ನು ಹೊರಹಾಕುತ್ತವೆ.

• ಇದಲ್ಲದೆ ಬೇರೆ ಪ್ರಾಣಿಗಳನ್ನು ನೋಡಿದಾಗ ಅಪರಿಚಿತರನ್ನು ಕಂಡಾಗಲೂ ಕೂಡಾ ಈ ರೀತಿ ಬೊಗಳುತ್ತವೆ. ರಾತ್ರಿ ಹೊತ್ತಿನಲ್ಲಿ ವಾತಾವರಣವು ತುಂಬಾ  ಪ್ರಶಾಂತವಾಗಿರುತ್ತದೆ. ಹೀಗೆ ನಿಶ್ಯಬ್ದವಾಗಿರುವ ಸಂದರ್ಭದಲ್ಲಿ  ಶ್ವಾನಗಳು ಮೆಲು ಧ್ವನಿಯಲ್ಲಿ ಬೊಗಳಿದರೂ, ಅವುಗಳು ಜೋರು ಧ್ವನಿಯಲ್ಲಿ ಅತ್ತಂತೆ ಕೇಳಿಸುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?