AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pronunciation: ನಿಮಗೆ ಈ ಒಂದು ಪದದ ಉಚ್ಚಾರ ಬಂದರೆ ಒಂದು ದಿನಕ್ಕೆ 3 ಲಕ್ಷ ರೂ ಸಂಭಾವನೆ

Croissant ಎಂಬ ಫ್ರೆಂಚ್ ತಿಂಡಿಯ ಉಚ್ಚಾರಣೆಯನ್ನು ನೀವು ಸರಿಯಾಗಿ ಹೇಳಬಲ್ಲವರಾಗಿದ್ದರೆ ನಿಮಗೆ ಒಂದು ದಿನಕ್ಕೆ 3 ಲಕ್ಷ ರೂ ಸ್ಟೈಪೆಂಡ್ ಪಡೆಯುವ ಅವಕಾಶ ಇತ್ತು. ಬ್ರಿಟಾನಿಯಾ ಫೂಡ್ಸ್ ಎಂಬ ಕಂಪನಿಯಲ್ಲಿ ಯಾರೇ ವ್ಯಕ್ತಿಗಳು Croissant ಪದವನ್ನು ತಪ್ಪಾಗಿ ಉಚ್ಚರಿಸಿದರೆ ಅದನ್ನು ಸರಿಪಡಿಸುವುದು ನಿಮ್ಮ ಕೆಲಸ. ನಿಮಗೆ ಈ ಪದದ ಉಚ್ಚಾರಣೆ ಬಂದಿದ್ದರೆ ಒಂದು ದಿನದ ಇಂಟರ್ನ್​ಶಿಪ್​ಗೆ ಅರ್ಜಿ ಸಲ್ಲಿಸುವ ಅವಕಾಶ ಇತ್ತು.

Pronunciation: ನಿಮಗೆ ಈ ಒಂದು ಪದದ ಉಚ್ಚಾರ ಬಂದರೆ ಒಂದು ದಿನಕ್ಕೆ 3 ಲಕ್ಷ ರೂ ಸಂಭಾವನೆ
ಬ್ರಿಟಾನಿಯಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 11, 2024 | 2:05 PM

Share

ನೀವು Croissant ಹೆಸರು ಕೇಳಿರಬಹುದು. ಅದು ಕೇಕ್​ನಂತಹ ತಿಂಡಿಯ ಹೆಸರು. ಅದನ್ನು ನೀವು ತಿಂದಿರಲೂ ಬಹುದು. ಇದು ಫ್ರೆಂಚ್ ತಿಂಡಿ. ಕಾಂಟಿನೆಂಟಲ್ ಆಹಾರ ವೈವಿಧ್ಯಗಳನ್ನು ಭಾರತದಲ್ಲಿ ಎಲ್ಲೆಡೆ ಕಾಣಬಹುದು. ಇದರಲ್ಲಿ ಮೇಲಿನ ಫ್ರೆಂಚಿ ತಿಂಡಿ Croissant ಕೂಡ ಒಂದು. ನೀವು ಇದನ್ನು ಏನಂತ ಕರೆಯುತ್ತೀರಿ? ಸಮೀಕ್ಷೆ ಪ್ರಕಾರ ಹೆಚ್ಚಿನ ಮಂದಿಗೆ ಇದರ ಉಚ್ಛಾರಣೆ ಗೊತ್ತಿಲ್ಲವಂತೆ. ಹಾಗೇ ಮೇಲ್ನೋಟಕ್ಕೆ ನೋಡಿದರೆ ಉಚ್ಚಾರಣೆ ಕ್ರಾಯ್ಸಂಟ್ ಅಂತ ಅನಿಸುತ್ತದೆ. ಆದರೆ, ವಾಸ್ತವದಲ್ಲಿ ಇದರ ಉಚ್ಚಾರಣೆ ವಿಭಿನ್ನ. ನಿಮಗೆ ಈ Croissant ಪದವನ್ನು ಸರಿಯಾಗಿ ಉಚ್ಚರಿಸಲು ಬರುವುದಿದ್ದರೆ ಒಂದು ದಿನದಲ್ಲಿ 3 ಲಕ್ಷ ರೂ ಹಣ ಗಳಿಸುವ ಅವಕಾಶ ಇತ್ತು.

ಬ್ರಿಟಾನಿಯಾ ಎಂಬ ಕಂಪನಿ ಇತ್ತೀಚೆಗೆ ಇಂಟರ್ನ್​ಶಿಪ್ ಆಫರ್ ಕೊಟ್ಟಿದ್ದು ಗಮನ ಸೆಳೆದಿತ್ತು. Croissant ಉಚ್ಚಾರಣೆ ತಜ್ಞರಿಗೆ ಒಂದು ದಿನದ ಇಂಟರ್ನ್​ಶಿಪ್ ಆಫರ್ ಅದು. ನಿಮಗೆ Croissant ಪದದ ಉಚ್ಚಾರಣೆ ಬಂದರೆ ಮಾತ್ರ ಈ ಇಂಟರ್ನ್​ಶಿಪ್​ಗೆ ಅರ್ಹರಾಗುತ್ತೀರಿ. ಈ ಇಂಟರ್ನ್​ಶಿಪ್ ವೇಳೆ ನಿಮ್ಮ ಕೆಲಸ ಏನೆಂದರೆ ಬ್ರಿಟಾನಿಯಾ ಕಚೇರಿಗೆ ಹೋಗಿ ಅಲ್ಲಿ ಇಡೀ ದಿನ ಕಾಲ ಕಳೆಯಬೇಕು. ಅಲ್ಲಿ ಯಾರೇ ವ್ಯಕ್ತಿಗಳು Croissant ಪದವನ್ನು ತಪ್ಪಾಗಿ ಉಚ್ಚರಿಸಿದರೆ ಅದನ್ನು ಸರಿಪಡಿಸಬೇಕು. ಹೀಗೆ ಇಡೀ ದಿನ ಮಾಡಿದರೆ 3 ಲಕ್ಷ ರೂ ಸ್ಟೈಪೆಂಡ್ ಕೊಡಲಾಗುತ್ತದೆ.

ಇದನ್ನೂ ಓದಿ: ನೀರಂದ್ರೆ ಅಲರ್ಜಿ; ಕಳೆದ 50 ವರ್ಷಗಳಿಂದ ಬರೀ ಕೋಕಾ-ಕೋಲಾವನ್ನೇ ಕುಡಿದು ಜೀವನ ನಡೆಸುತ್ತಿರುವ ವ್ಯಕ್ತಿ

ಅಂದಹಾಗೆ, ಮಾರ್ಚ್ 4ರಿಂದಲೇ ಈ ಇಂಟರ್ನ್​ಶಿಪ್ ಆಫರ್ ಕೊಡಲಾಗಿತ್ತು. ಅರ್ಜಿ ಸಲ್ಲಿಸಲು ಮಾರ್ಚ್ 10ಕ್ಕೆ ಕೊನೆಯಾಗಿದೆ. ಈಗ ಇದಕ್ಕೆ ಅವಕಾಶ ಇಲ್ಲ. ಆದರೂ ಇಂಥದ್ದೂ ಒಂದು ಇಂಟರ್ನ್​ಶಿಪ್ ಪ್ರೋಗ್ರಾಮ್ ಇರುತ್ತದಾ ಎಂಬುದು ಕುತೂಹಲ ಮೂಡಿಸಿರುವ ಸಂಗತಿ. ಯಂಗ್ ಗನ್ ಎಂಬ ಮಾರ್ಕೆಟಿಂಗ್ ಸಂಸ್ಥೆ ಈ ವಿನೂತನ ಪ್ರಯೋಗ ಮಾಡಿದೆ. ಇದಕ್ಕೆ ಎಷ್ಟು ಜನರು ಅರ್ಜಿ ಸಲ್ಲಿಸಿದ್ದಾರೋ ಗೊತ್ತಿಲ್ಲ. ಬಹುಶಃ ಲೆಕ್ಕವಿಲ್ಲದಷ್ಟು ಅರ್ಜಿಗಳು ಬಂದಿರಬಹುದು. ಅದರಲ್ಲಿ Croissant ಪದವನ್ನು ಎಷ್ಟು ಮಂದಿ ಸರಿಯಾಗಿ ಉಚ್ಚರಿಸಿ, ಇಂಟರ್ನ್​ಶಿಪ್​ಗೆ ಆಯ್ಕೆ ಆಗಿದ್ದಾರೋ ಎಂಬ ಮಾಹಿತಿ ಮಾತ್ರ ಗೊತ್ತಿಲ್ಲ.

Croissant ಪದದ ಉಚ್ಚಾರಣೆ ಹೇಗೆ?

Croissant ಎಂಬುದು ಫ್ರೆಂಚ್ ಪದವಾದ್ದರಿಂದ ಅಕ್ಷರಗಳ ಪ್ರಕಾರವಾಗಿ ನೀವು ಉಚ್ಚಾರ ಮಾಡಲು ಆಗುವುದಿಲ್ಲ. ಗೂಗಲ್​ನಲ್ಲಿ ಅದರ ಉಚ್ಚಾರಣೆ ಪರೀಕ್ಷಿಸಿದಾಗ ಹೀಗೆ ಬಂತು, ‘ಕ್ವಾಸಾಂಗ್’. ಅಥವಾ ನಿಜ ಉಚ್ಚಾರಣೆ ಇನ್ನೂ ವ್ಯತ್ಯಾಸ ಇರಬಹುದು.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್