AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಐ ಲವ್ ಯು ಬೇಬಿ; ಪ್ರೇಯಸಿಗೆ ಪ್ರಪೋಸ್ ಮಾಡಿ ಮುತ್ತು ಕೇಳಿದ ತುಂಟ ಗಿಳಿರಾಯ

ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿ ಹಾಗೂ ಪಕ್ಷಿ ಸಾಮ್ರಾಜ್ಯಕ್ಕೆ ಸಂಬಂಧಿಸಿದ ಹಲವಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ದೃಶ್ಯಾವಳಿಗಳು ನಮ್ಮ ಮೊಗದಲ್ಲಿ ನಗೆಯನ್ನು ಬೀರುವಂತೆ ಮಾಡುತ್ತವೆ. ಸದ್ಯ ಅಂತಹದೊಂದು ವಿಡಿಯೋ ಇದೀಗ ಹರಿದಾಡುತ್ತಿದ್ದು, ಗಿಣಿರಾಯ ತನ್ನ ಪ್ರೇಯಸಿಗೆ ಐ ಲವ್ ಯು ಬೇಬಿ ಎಂದು ಪ್ರಪೋಸ್ ಮಾಡಿದ್ದಲ್ಲದೆ, ಸಿಹಿ ಮುತ್ತನ್ನು ಸಹ ಕೇಳಿದೆ. ಗಿಳಿರಾಯನ ಪ್ರೀತಿಯ ಮಾತುಕತೆಯನ್ನು ಕೇಳಿ ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.

Viral Video: ಐ ಲವ್ ಯು ಬೇಬಿ; ಪ್ರೇಯಸಿಗೆ  ಪ್ರಪೋಸ್ ಮಾಡಿ ಮುತ್ತು ಕೇಳಿದ ತುಂಟ ಗಿಳಿರಾಯ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on: Mar 10, 2024 | 6:23 PM

ಗಿಣಿಗಳು ಜಾಣ ಹಾಗೂ ತುಂಬಾನೇ ಬುದ್ಧಿವಂತ ಪಕ್ಷಿಗಳು. ನೋಡುವುದಕ್ಕೂ ಬಲು ಸುಂದರವಾಗಿರುವ ಈ ಪಕ್ಷಿಗಳು ಮನುಷ್ಯರನ್ನು ಅನುಕರಿಸುವುದರಲ್ಲೂ ಎತ್ತಿದ ಕೈ. ಹೌದು ಮನುಷ್ಯರಂತೆ ಮಾತನಾಡುವ ಶಕ್ತಿ ಅವುಗಳಿವೆ. ಮನುಷ್ಯರು ಮಾತನಾಡುವ ಒಂದೊಂದು ಶಬ್ದವನ್ನು ಗಿಳಿಗಳು ಮುದ್ದು ಮುದ್ದಾಗಿ ಉಚ್ಛರಿಸುತ್ತವೆ. ಈ ಮುದ್ದು ಮಾತುಗಳನ್ನು ಕೇಳುವುದೇ ಕಿವಿಗಳಿಗೆ ಇಂಪು. ಇಷ್ಟೇ ಅಲ್ಲದೆ ಇವುಗಳು ಮನುಷ್ಯರಂತೆ ಭಾವನೆಗಳನ್ನು, ತಮ್ಮ ಪ್ರೀತಿಯನ್ನು ಸಹ ವ್ಯಕ್ತಪಡಿಸುತ್ತವೆ. ಇದಕ್ಕೆ ನಿದರ್ಶನದಂತಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು ಇಲ್ಲೊಂದು ಇಂಡಿಯನ್ ರಿಂಗ್ ನೆಕ್ ಜಾತಿಯ ಗಿಳಿಯೊಂದು ತನ್ನ ಮುದ್ದಾದ ಮಾತು ಹಾಗೂ ತುಂಟತನದಿಂದಲೇ ಎಲ್ಲರ ಗಮನ ಸೆಳೆಯುತ್ತಿದೆ. ಈ ಗಿಳಿಯ ಮಾತು, ಅದು ತನ್ನ ಪ್ರೇಯಸಿಯೊಂದಿಗೆ ಸಿಹಿ ಮುತ್ತನ್ನು ಕೇಳುವ ಪರಿ ಎಲ್ಲರಿಗೂ ಖುಷಿಕೊಟ್ಟಿದೆ. ಈ ದೃಶ್ಯವಂತೂ ಇದೀಗ ಸಖತ್ ವೈರಲ್ ಆಗಿದೆ. @cutest.bird ಎಂಬ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಈ ಮುದ್ದಾದ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

View this post on Instagram

A post shared by Cutest.bird (@cutest.bird)

ವೈರಲ್ ವಿಡಿಯೋದಲ್ಲಿ ತುಂಟ ಗಿಳಿಯೊಂದು ತನ್ನ ಗೆಳತಿಗೆ ಪ್ರಪೋಸ್ ಮಾಡಿ ಸಿಹಿ ಮುತ್ತನ್ನು ಕೇಳುವ ಮುದ್ದಾದ ದೃಶ್ಯವನ್ನು ಕಾಣಬಹುದು. ಇಂಡಿಯನ್ ರಿಂಗ್ ನೆಕ್ ಜಾತಿಯ ಜಾಣ ಗಿಳಿರಾಯ ತನ್ನ ಪ್ರೇಯಸಿಯ ಬಳಿ ಬಂದು, ಐ ಲವ್ ಯು ಬೇಬಿ ಎಂದು ಪ್ರಪೋಸ್ ಮಾಡಿ, ಬಳಿಕ ಒಂದು ಮುತ್ತು ಕೊಡು (ಗಿವ್ ಮೀ ಒನ್ ಕಿಸ್) ಮುತ್ತು ಕೊಡು ಎನ್ನುತ್ತಾ ತನ್ನ ಪ್ರೇಯಸಿಯ ಹತ್ತಿರ ಬಂದು ಸಿಹಿ ಮುತ್ತನ್ನು ನೀಡುವಂತಹ ಸುಂದರ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಉತ್ತರ ಕರ್ನಾಟಕದ ಖಡಕ್ ಜೋಳದ ರೊಟ್ಟಿ ನಾನಾ ರೀತಿಯ ಪಲ್ಯ, ಅಜ್ಜಿಯ ಕೈ ರುಚಿ ಅದ್ಭುತ

ಮಾರ್ಚ್ 01 ರಂದು ಹಂಚಿಕೊಳ್ಳಲಾದ ಈ ವಿಡಿಯೋ 95 ಸಾವಿರಕ್ಕೂ ಅಧಿಕ ಲೈಕ್ಸ್ ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಪ್ರೇಮಿಗಳಿಬ್ಬರ ಸುಂದರ ಮಾತುಕತೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಗಿಣಿರಾಯ ಮುತ್ತು ಕೇಳುವ ದೃಶ್ಯವಂತೂ ತುಂಬಾನೇ ಸುಂದರವಾಗಿದೆʼ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಈ ದೃಶ್ಯವಂತೂ ತುಂಬಾನೇ ಮುದ್ದಾಗಿದೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ