Viral Video: ಕೆಸರು ಗದ್ದೆಯಲ್ಲಿ  ಕ್ರಿಕೆಟ್ ಆಡುತ್ತಾ  ಮಜಾ ಉಡಾಯಿಸಿದ ಹೈಕ್ಲು

ಕ್ರಿಕೆಟ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದ್ರಲ್ಲೂ ಈ ಯುವಕರು ನಮಗೆ ಕ್ರಿಕೆಟ್ ಆಡಲು  ವಿಶಾಲವಾದ ಮೈದಾನವೇ ಬೇಕೆಂದೇನಿಲ್ಲ ಎನ್ನುತ್ತಾ, ಮನೆಯ ಅಂಗಲದಲ್ಲಿ, ರಸ್ತೆಯಲ್ಲಿ ಕ್ರಿಕೆಟ್ ಆಡುತ್ತಾ ರಜಾ ದಿನವನ್ನು ಕಳೆಯುತ್ತಾರೆ. ಆದರೆ ಇಲ್ಲೊಂದು ಹುಡುಗರ  ತಂಡ ಸ್ವಲ್ಪ ಡಿಫ್ರೆಂಟ್ ಆಗಿ ಕೆಸರಿನಲ್ಲಿ ಕ್ರಿಕೆಟ್ ಆಡಿ ಮಜಾ ಉಡಾಯಿಸಿದ್ದಾರೆ. ಈ ವಿಡಿಯೋ ಇದೀಗ ಇದೀಗ ಸಖತ್ ವೈರಲ್ ಆಗುತ್ತಿದೆ.

Viral Video: ಕೆಸರು ಗದ್ದೆಯಲ್ಲಿ  ಕ್ರಿಕೆಟ್ ಆಡುತ್ತಾ  ಮಜಾ ಉಡಾಯಿಸಿದ ಹೈಕ್ಲು
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 11, 2024 | 4:41 PM

ಕ್ರಿಕೆಟ್ ಭಾರತೀಯರ ನೆಚ್ಚಿನ ಕ್ರೀಡೆ ಅಂದ್ರೆ ತಪ್ಪಾಗಲಾರದು. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಕ್ರಿಕೆಟ್ ಅಭಿಮಾನಿಗಳೇ. ಹೌದು ಈ ಆಟವನ್ನು ಭಾರತದ ಗಲ್ಲಿ ಗಲ್ಲಿಗಳಲ್ಲೂ ಆಡಲಾಗುತ್ತದೆ. ರಜಾ ದಿನ ಬಂತೆಂದರೆ ಸಾಕು ಈ  ಹುಡುಗರು ತಮ್ಮದೇ ಗುಂಪು ಕಟ್ಟಿಕೊಂಡಿ ಬ್ಯಾಟ್, ವಿಕೆಟ್, ಚೆಂಡನ್ನು ಹಿಡಿದುಕೊಂಡು ಬೆಳ್ಳಂಬೆಳಗ್ಗೆಯೇ ಕ್ರಿಕೆಟ್ ಆಡಲು ಹೋಗುತ್ತಾರೆ. ಗಲ್ಲಿ ಕ್ರಿಕೆಟ್ ಆಡಲು ಇವರುಗಳಿಗೆ ವಿಶಾಲವಾದ ಮೈದಾನವೇ ಬೇಕೆಂದಿಲ್ಲ. ಮನೆಯ ಅಂಗಳ, ಖಾಲಿ ಗದ್ದೆ, ರಸ್ತೆಯಲ್ಲೂ ಕ್ರಿಕೆಟ್ ಆಡಿ ಎಂಜಾಯ್ ಮಾಡುತ್ತಾರೆ. ನೀವು ಕೂಡಾ ಇದೇ ರೀತಿ ಖಾಲಿ ರಸ್ತೆಯಲ್ಲಿ ಮನೆಯಂಗಳದಲ್ಲಿ  ಕ್ರಿಕೆಟ್ ಆಡಿರಬಹುದಲ್ವಾ.  ಆದ್ರೆ ನೀವು ಎಂದಾದರೂ ಕೆಸರಿನಲ್ಲಿ ಕ್ರಿಕೆಟ್ ಆಡಿದ್ದೀರಾ? ಅರೇ ಕೆಸರು ಗದ್ದೆಯಲ್ಲಿ ಆಟ ಆಡಿ ಮೈಯೆಲ್ಲಾ ಮಣ್ಣು ಮಾಡ್ಕೊಂಡು ಹೋದ್ರೆ ಅಮ್ಮನ ಕೈಯಿಂದ ಗ್ಯಾರಂಟಿ ಒದೆ ಬೀಳುತ್ತೆ ಅಂತ ನೀವು ಯೋಚ್ನೆ ಮಾಡ್ಬೋದಲ್ವಾ.  ಆದರೆ ಇಲ್ಲೊಂದು ಹುಡುಗರ ತಂಡ ಕೆಸರು ಆದ್ರೆ ಏನಂತೆ, ಆಟವಾಡುತ್ತಾ ಎಂಜಾಯ್ ಮಾಡಿದ್ರೆ ಸಾಕಪ್ಪ ಎನ್ನುತ್ತಾ ಕೆಸರು ಗದ್ದೆಯಲ್ಲಿ ಕ್ರಿಕೆಟ್ ಆಡಿ, ಮಜಾ ಉಡಾಯಿಸಿದ್ದಾರೆ. ಈ ಉಲ್ಲಾಸಭರಿತ ವಿಡಿಯೋ ಸಾಮಾಜಿಕ  ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ವೈರಲ್ ವಿಡಿಯೋದಲ್ಲಿ ಹುಡುಗರ ತಂಡವೊಂದು ಮೈಯೆಲ್ಲಾ ಕೆಸರು ಅಂಟಿಸಿಕೊಂಡು, ಅದೇ ಕೆಸರಿನಲ್ಲಿ ಎಂಜಾಯ್ ಮಾಡುತ್ತಾ ಕ್ರಿಕೆಟ್ ಆಡುತ್ತಿರುವ ದೃಶ್ಯವನ್ನು ಕಾಣಬಹುದು. @RVCJ_FB ಎಂಬ ಹಸರಿನ X ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, “ಕ್ರಿಕೆಟ್ ಹುಚ್ಚು” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್ ಅಗುತ್ತಿರುವ ವಿಡಿಯೋದಲ್ಲಿ ಆಡಲು ಯಾವ ಜಾಗ ಆದ್ರೆ ಏನು ಎನ್ನುತ್ತಾ ಅಮ್ಮನ ಕೈಯಿಂದ ಪೆಟ್ಟು ತಿಂದ್ರು ಪರವಾಗಿಲ್ಲ ಎಂದು ಕೆಸರಿನಲ್ಲಿಯೇ ನಿಂತು ಹುಡುಗರು ಕ್ರಿಕೆಟ್ ಆಟ ಆಡಿದ್ದಾರೆ. ಕೆಸರಿನಲ್ಲಿ ಒಂದು ಬದಿಯಲ್ಲಿ ವಿಕೇಟ್ ಕೀಪರ್ ಮತ್ತು ಬ್ಯಾಟ್ಸ್ಮ್ಯಾನ್ ಇದ್ದರೆ, ಇನ್ನೊಂದು ಬದಿಯಲ್ಲಿ ಬೌಲರ್ ನಿಂತಿರುವುದನ್ನು ಕಾಣಬಹುದು. ಈ ಎಲ್ಲಾ ಹುಡುಗರು  ಕೆಸರಿನಲ್ಲಿ ಒದ್ದಾಡಿ ಮೈಯೆಲ್ಲಾ ಕೆಸರು ಮಾಡಿಕೊಂಡು, ಬಹಳ ಎಂಜಾಯ್ ಮಾಡುತ್ತ ಕ್ರಿಕೆಟ್ ಆಡುತ್ತಿರುವ ಸುಂದರ  ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಇದಪ್ಪಾ ಟೈಮ್ ಮ್ಯಾನೆಜ್ಮೆಂಟ್ ಅಂದ್ರೆ; ಟ್ರಾಫಿಕ್​​ನಲ್ಲಿ ಬಟಾಣಿ ಸಿಪ್ಪೆ ಬಿಡಿಸಿದ ಮಹಿಳೆ

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 4.1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼವಿಶ್ವದ ಅತ್ಯಂತ ಸಂತೋಷದ ಸ್ಥಳವಿದುʼ ಎಂದು ಕಾಮೆಂಟ್ ಮಾಡಿದ್ದಾರೆ.  ಇನ್ನೊಬ್ಬ ಬಳಕೆದಾರರು ʼಇದನ್ನು ನೋಡಿ ಕ್ರಿಕೆಟ್ ಮೇಲಿನ ಪ್ರೀತಿ ಇನ್ನೂ ಹೆಚ್ಚಾಗಿದೆʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ನಿಜವಾಗಿಯೂ ಇದು ಕ್ರಿಕೆಟ್ ಹುಚ್ಚು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ