Home Remedies : ಔಷಧೀಯ ಗುಣಗಳ ಅಗರ ಈ ಅಶ್ವಗಂಧ, ಇದರ ಪ್ರಯೋಜನ ತಿಳಿದರೆ ಅಚ್ಚರಿ ಪಡ್ತೀರಾ!

ನಮ್ಮ ಹಿತ್ತಲಿನಲ್ಲಿ ಬೆಳೆಯುವ ಪ್ರತಿಯೊಂದು ಸಸ್ಯವು ಔಷಧೀಯ ಗುಣವನ್ನು ಹೊಂದಿದ್ದು, ಈ ಸಸ್ಯಗಳ ಪ್ರಯೋಜನಗಳು ಎಷ್ಟಿದೆ ಎನ್ನುವುದು ನಮ್ಮ ಹಿರಿಯರಿಗಷ್ಟೇ ಗೊತ್ತು. ಸಣ್ಣ ಪುಟ್ಟ ಕಾಯಿಲೆಗಳು ಬಂದಾಗ ಮೊದಲು ಹೋಗುತ್ತಿದ್ದದ್ದೇ ಈ ಹಿತ್ತಲಿಗೆ. ಇಲ್ಲಿ ಸಿಗುವ ಸಸ್ಯಗಳಿಂದ ಔಷಧವನ್ನು ತಯಾರಿಸಿ ಆರೋಗ್ಯ ಸಮಸ್ಯೆಯಿಂದ ಮುಕ್ತಿ ಕಾಣುತ್ತಿದ್ದರು. ಇಂತಹ ಔಷಧೀಯ ಸಸ್ಯಗಳಲ್ಲಿ ಅಶ್ವಗಂಧ ಕೂಡ ಒಂದಾಗಿದ್ದು, ಸರ್ವರೋಗಗಳಿಗೂ ರಾಮಬಾಣವಾಗಿದೆ.

Home Remedies : ಔಷಧೀಯ ಗುಣಗಳ ಅಗರ ಈ ಅಶ್ವಗಂಧ, ಇದರ ಪ್ರಯೋಜನ ತಿಳಿದರೆ ಅಚ್ಚರಿ ಪಡ್ತೀರಾ!
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 09, 2024 | 4:49 PM

ಆಯುರ್ವೇದದಲ್ಲಿ ಔಷಧಗಳ ತಯಾರಿಕೆಯಲ್ಲಿ ಹೇರಳವಾಗಿ ಬಳಸುವ ಅಶ್ವಗಂಧ ಎಲ್ಲಾ ತೆರೆನಾದ ಕಾಯಿಲೆಗಳಿಗೆ ಮನೆ ಮದ್ದಾಗಿದೆ. ಇದರ ಬೇರು, ತೊಗಟೆ, ಬೀಜ ಹಾಗೂ ಹಣ್ಣುಗಳಲ್ಲಿ ಔಷಧೀಯ ಗುಣವು ಹೇರಳವಾಗಿದೆ. ಹಿರೇಮದ್ದು ಎನ್ನುವ ಹೆಸರಿನಿಂದ ನಮ್ಮ ಹಿರಿಯರು ಕರೆಯುತ್ತಿದ್ದಾರೆ. ಅಶ್ವಗಂಧ ಗಿಡ ಮೂಲಿಕೆಯಲ್ಲಿ ಆರೋಗ್ಯ ಪ್ರಯೋಜನಗಳು ಹಲವಾರಿದ್ದು, ಒಮ್ಮೆ ಇದರ ಗುಣವನ್ನರಿತರೆ ಈ ಮನೆ ಮದ್ದಿನಿಂದಲೇ ಆರೋಗ್ಯವನ್ನು ಕಾಪಾಡುತ್ತೀರಿ.

  • ಅಶ್ವಗಂಧವನ್ನು ಹಾಲಿನಲ್ಲಿ ಬೇಯಿಸಿ ಒಣಗಿಸಿ ಪುಡಿ ಮಾಡಿಟ್ಟುಕೊಂಡು, ಈ ಪುಡಿಯನ್ನು ಹಾಲು ಮತ್ತು ಜೇನುತುಪ್ಪದೊಂದಿಗೆ ಸೇವಿಸಿದರೆ ಬೆನ್ನುನೋವಿನ ಸಮಸ್ಯೆಯೂ ಗುಣಮುಖವಾಗುತ್ತದೆ.
  • ಅಶ್ವಗಂಧದ ಬೇರನ್ನು ಕುಟ್ಟಿ ಪುಡಿ ಮಾಡಿ ಹಾಲಿನಲ್ಲಿ ಅಥವಾ ಜೇನು ತುಪ್ಪದಲ್ಲಿ ಬೆರೆಸಿ ಸೇವಿಸಿದರೆ ರಕ್ತ ಹೀನತೆ ಸಮಸ್ಯೆಯೂ ದೂರವಾಗುತ್ತದೆ.
  • ಸಮಪ್ರಮಾಣದಲ್ಲಿ ಅಶ್ವಗಂಧ ಮತ್ತು ಶತಾವರಿ ತೆಗೆದುಕೊಂಡು ಕಷಾಯ ಮಾಡಿ, ಇದಕ್ಕೆ ಹಾಲು ಬೆರೆಸಿ ಕುಡಿಯುವುದರಿಂದ ಲೈಂಗಿಕ ಸಮಸ್ಯೆಗೆ ನಿವಾರಣೆಯಾಗುತ್ತದೆ.
  •  ಅಶ್ವಗಂಧದ ಪುಡಿಯನ್ನು ಹಾಲಿಗೆ ಬೆರೆಸಿ ದಿನಕೆರಡು ಬಾರಿ ಸೇವಿಸಿದರೆ ಲೈಂಗಿಕ ದೌರ್ಬಲ್ಯಕ್ಕೆ ಉತ್ತಮ ಮನೆ ಮದ್ದು.
  • ಒಂದು ಚಮಚ ಅಶ್ವಗಂಧ ಪುಡಿಯನ್ನು ಹಾಲಿನಲ್ಲಿ ಬೆರೆಸಿ ಬೆಳಗ್ಗೆ ಸಂಜೆ ಸೇವಿಸುವುದರಿಂದ ಮಹಿಳೆಯರಲ್ಲಿ ಮುಟ್ಟು ನಿಲ್ಲುವ ಸಮಯದಲ್ಲಿ ಎದುರಾಗುವ ತೊಂದರೆಗಳು ಶಮನವಾಗುತ್ತದೆ.
  • ಅಶ್ವಗಂಧದ ಕಷಾಯವನ್ನು ನಿಯಮಿತವಾಗಿ ಸೇವನೆ ಮಾಡುತ್ತಿದ್ದರೆ ಜೀರ್ಣ ಕ್ರಿಯೆಗೆ ಸಂಬಂಧ ಪಟ್ಟ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.
  • ಅಶ್ವಗಂಧದ ಬೇರನ್ನು ನೆಲ್ಲಿಕಾಯಿ ರಸದಲ್ಲಿ ಕಲಸಿ, ತುಪ್ಪ ಮತ್ತು ಜೇನುತುಪ್ಪವನ್ನು ಸಮ ಪ್ರಮಾಣದಲ್ಲಿ ಸೇವನೆ ಮಾಡಿದರೆ ಕಣ್ಣಿನ ದೋಷಗಳು ದೂರವಾಗುತ್ತದೆ.
  • ಖಿನ್ನತೆಯಿಂದ ಬಳಲುತ್ತಿರುವವರು ಅಶ್ವಗಂಧದ ಚೂರ್ಣ, ಲೋದ್ರದ ಚಕ್ಕೆ ಮತ್ತು ನೆಲಗುಂಬಳದ ಗಡ್ಡೆಯ ಮಿಶ್ರಣವನ್ನು ತಯಾರಿಸಿಕೊಳ್ಳಿ. ದಿನವು ಒಂದು ಲೋಟ ಹಾಲಿಗೆ ಇದನ್ನು ಸ್ವಲ್ಪ ಪ್ರಮಾಣದಲ್ಲಿ ಬೆರೆಸಿ ಕುಡಿದರೆ ಕಾಡುವ ಈ ಎಲ್ಲಾ ಸಮಸ್ಯೆಯೂ ಕಡಿಮೆಯಾಗುತ್ತದೆ.
  • ನಿದ್ದೆ ಸಮಸ್ಯೆಯಿದ್ದರೆ ಈ ಅಶ್ವಗಂಧದ ಪುಡಿಯನ್ನು ಹಾಲಿನೊಂದಿಗೆ ಸೇರಿಸಿ ಕುಡಿದರೆ ಈ ಕಾಯಿಲೆಯೂ ಗುಣಮುಖವಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ