Sign In

By signing in or creating an account, you agree with Associated Broadcasting Company's Terms & Conditions and Privacy Policy.

Hyena: ಗದಗಿನ ಗಜೇಂದ್ರಗಡದಲ್ಲಿ ಹೈನಾ ಶವ ಪತ್ತೆ; ರೇಬಿಸ್​ ರೋಗ ಅಂಟಿರುವ ಶಂಕೆ

ರೇಬಿಸ್ ಅಥವಾ ಇತರ ಶಿಲೀಂಧ್ರಗಳ ಸೋಂಕಿನಿಂದ ಬಳಲುತ್ತಿರುವ ಪ್ರಾಣಿಗಳನ್ನು ತಿಂದಾಗ ಹೈನಾಗೆ ರೇಬೀಸ್ ವೈರಸ್ ಹರಡುವ ಸಾಧ್ಯತೆ ಇದೆ ಎಂದು ಜೀವವೈವಿಧ್ಯ ತಜ್ಞ ಮಂಜುನಾಥ ನಾಯಕ್ ಹೇಳಿದರು.

Hyena: ಗದಗಿನ ಗಜೇಂದ್ರಗಡದಲ್ಲಿ ಹೈನಾ ಶವ ಪತ್ತೆ; ರೇಬಿಸ್​ ರೋಗ ಅಂಟಿರುವ ಶಂಕೆ
ಕತ್ತೆಕಿರುಬ (ಹೈನಾ)
Follow us
ವಿವೇಕ ಬಿರಾದಾರ
|

Updated on:Oct 19, 2023 | 12:52 PM

ಗದಗ ಅ.19: ಮಂಗಳವಾರ ಗಜೇಂದ್ರಗಡದ (Gajendragad) ಅರಣ್ಯದ ಬಳಿ ಅಳಿವಿನಂಚಿನಲ್ಲಿರುವ ಕತ್ತೆ ಕಿರುಬ (ಹೈನಾ) ಶವ ಪತ್ತೆಯಾಗಿದೆ. ಕತ್ತೆ ಕಿರುಬ (Hyena) ರೋಗಕ್ಕೆ ತುಕ್ಕಾಗಿ ಮೃತಪಟ್ಟಿದೆ ಎಂಬುವುದು ಮೇಲ್ನೋಟಕ್ಕೆ ಗೊತ್ತಾಗಿದ್ದು, ಇದು ಪ್ರಾಣಿ ಪ್ರೀಯರಲ್ಲಿ ಸಂಶಯ ಮೂಡಿಸಿದೆ. ಏಕೆಂದರೆ ಈ ಪ್ರಾಣಿಯಲ್ಲಿ ರೋಗನಿರೋಧಕ ಶಕ್ತಿ ಅಧಿಕವಾಗಿರುತ್ತದೆ.

ಗ್ರಾಮಸ್ಥರು ಅರಣ್ಯ ಪ್ರದೇಶದಿಂದ ದೂರವಿರಬೇಕು. ಮತ್ತು ಪ್ರಾಣಿಗಳನ್ನು ಕೊಲ್ಲಲು ಗುಡ್ಡಗಳಿಗೆ ಅಥವಾ ಅರಣ್ಯ ವಲಯಗಳಿಗೆ ಪ್ರವೇಶಿಸುವವರ ಮೇಲೆ ನಿಗಾ ಇಡುವಂತೆ ಸಿಬ್ಬಂದಿಗಳಿಗೆ ಅರಣ್ಯಾಧಿಕಾರಿಗಳು ಸೂಚಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಪ್ರದೇಶಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾದ ಹಿನ್ನೆಲೆಯಲ್ಲಿ ಬೇಟೆಯಾಡುವವರ ಸಂಖ್ಯೆ ಕಡಿಮೆಯಾಗಿದೆ.

ಕತ್ತೆ ಕಿರುಬ ಸಾವನ್ನಪ್ಪಿರುವ ಬಗ್ಗೆ ಜೀವವೈವಿಧ್ಯ ತಜ್ಞ ಮಂಜುನಾಥ ನಾಯಕ್ ಮಾತನಾಡಿ, ರೇಬಿಸ್ ಅಥವಾ ಇತರ ಶಿಲೀಂಧ್ರಗಳ ಸೋಂಕಿನಿಂದ ಬಳಲುತ್ತಿರುವ ಪ್ರಾಣಿಗಳನ್ನು ತಿಂದಾಗ ಕತ್ತೆಕಿರುಬಗಳಿಗೆ ರೇಬೀಸ್ ವೈರಸ್ ಹರಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ರೇಬಿಸ್​ ರೋಗ ಬೀದಿ ನಾಯಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ನಾಯಿ, ನರಿ, ತೋಳ ಮತ್ತು ಬೆಕ್ಕು ಹಾಗೆಯೇ ಕೆಲವು ಸಸ್ತನಿಗಳು ಸೇರಿದಂತೆ ದೇಶೀಯ ಮತ್ತು ಕಾಡು ಜಾತಿಯ ಸಸ್ತನಿಗಳಿಗೆ ರೇಬಿಸ್​​ ರೋಗ ಅಂಟುತ್ತದೆ.

ಇದನ್ನೂ ಓದಿ: ಮಾನವ-ಕಾಡು ಪ್ರಾಣಿ ಸಂಘರ್ಷಕ್ಕೆ ಬ್ರೇಕ್ ಹಾಕಲು ಮುಂದಾದ ಅರಣ್ಯಾಧಿಕಾರಿಗಳು: ರೈಲ್ವೆ ಬ್ಯಾರಿಕೇಡ್​​​ ಪ್ರಾಜೆಕ್ಟ್ ಸಕ್ಸಸ್! 

ಗದಗಗಿನ ಪಶುವೈದ್ಯಕೀಯ ಮಹಾವಿದ್ಯಾಲಯದ ಸಿಬ್ಬಂದಿ ನಿಖಿಲ್ ಕುಲಕರ್ಣಿ ಮಾತನಾಡಿ, ಶವಪರೀಕ್ಷೆಯ ನಂತರ ಕತ್ತೆಕಿರುಬ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಶವಪರೀಕ್ಷೆ ವರದಿಯ ವಿವರಗಳನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಹಂಚಿಕೊಳ್ಳುತ್ತಾರೆ.

ಏತನ್ಮಧ್ಯೆ, ಗದಗ ಡಿಸಿಎಫ್ ದೀಪಿಕಾ ಬಾಜಪೈ ಅವರು, ಕತ್ತೆಕಿರುಬ ಸಾವು ಸಾಮಾನ್ಯ ಸಾವಿನಂತೆ ಕಂಡುಬರುತ್ತಿದ್ದು ಭಯಪಡುವ ಅಗತ್ಯವಿಲ್ಲ. ರೇಬೀಸ್ ವೈರಸ್ ಇರುವಿಕೆಯು ಅಸಂಭವವಾಗಿದೆ ಎಂದು ಅವರು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:14 am, Thu, 19 October 23

‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ
ಬೆಂಗಳೂರಿನಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸಿದ ಪುಟ್ಟ ಬಾಲಕ!
ಬೆಂಗಳೂರಿನಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸಿದ ಪುಟ್ಟ ಬಾಲಕ!
ಕೊಲೆಯಾದ ನಿವೃತ್ತ ಐಪಿಎಸ್​​ ಓಂಪ್ರಕಾಶ್​ ಫಾರ್ಮ್ ಹೌಸ್ ಹೇಗಿದೆ ನೋಡಿ...!
ಕೊಲೆಯಾದ ನಿವೃತ್ತ ಐಪಿಎಸ್​​ ಓಂಪ್ರಕಾಶ್​ ಫಾರ್ಮ್ ಹೌಸ್ ಹೇಗಿದೆ ನೋಡಿ...!