ರಕ್ಷಣೆಗೆಂದು ಸೊಂಟದಲ್ಲಿಟ್ಟುಕೊಂಡಿದ್ದ ಚಾಕುವೇ ಜೀವಕ್ಕೆ ಮುಳುವಾಯ್ತು

|

Updated on: Oct 18, 2024 | 10:28 AM

ರಕ್ಷಣೆಗೆಂದು ಸೊಂಟದಲ್ಲಿಟ್ಟುಕೊಂಡಿದ್ದ ಚಾಕುವೇ ಜೀವಕ್ಕೆ ಮುಳುವಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೆಬ್ಬಾಳದಲ್ಲಿ ಮಧ್ಯರಾತ್ರಿ ಇಬ್ಬರು ಯುವಕರಿದ್ದ ಬೈಕ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಇಬ್ಬರು ಸೋದರ ಸಂಬಂಧಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ರಕ್ಷಣೆಗೆಂದು ಸೊಂಟದಲ್ಲಿಟ್ಟುಕೊಂಡಿದ್ದ ಚಾಕುವೇ ಜೀವಕ್ಕೆ ಮುಳುವಾಯ್ತು
ಚಾಕು
Follow us on

ರಕ್ಷಣೆಗೆಂದು ಸೊಂಟದಲ್ಲಿಟ್ಟುಕೊಂಡಿದ್ದ ಚಾಕುವೇ ಜೀವಕ್ಕೆ ಮುಳುವಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹೆಬ್ಬಾಳದಲ್ಲಿ ಮಧ್ಯರಾತ್ರಿ ಇಬ್ಬರು ಯುವಕರಿದ್ದ ಬೈಕ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಇಬ್ಬರು ಸೋದರ ಸಂಬಂಧಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬೊಮ್ಮಸಂದ್ರದ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ನಾಗರಾಜ್, ರಾಜೇಶ್​ ಕುಮಾರ್ ಮೃತರು.
ನಾಗರಾಜ್​ ತಲೆಗೆ ಪೆಟ್ಟುಬಿದ್ದು ಮೃತಪಟ್ಟರೆ, ರಾಜೇಶ್​ ಸೊಂಟದಲ್ಲಿರುವ ಚಾಕುವಿನಿಂದ ಆದ ಗಾಯದಿಂದ ಸಾವನ್ನಪ್ಪಿದ್ದಾರೆ. ರಕ್ಷಣೆಗೆಂದು ಪಡೆದ ಆಯುಧವೇ ಜೀವ ತೆಗೆದಿದೆ.

ಚಾಕುವನ್ನು ಏಕೆ ಇಟ್ಟುಕೊಂಡಿದ್ದರು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಾಗರಾಜ್ ಅತಿ ವೇಗದಲ್ಲಿದ್ದರು, ಬೀಳುವ ಮೊದಲು ಡಿವೈಡರ್​ಗೆ ಡಿಕ್ಕಿ ಹೊಡೆದಿದ್ದರು. ಅಲ್ಲಿದ್ದವರು ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದರು. ಬಳಿಕ ಆಂಬ್ಯುಲೆನ್ಸ್​ ಕರೆಸಿ ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಷ್ಟರಲ್ಲಿ ಇಬ್ಬರೂ ಸಾವನ್ನಪ್ಪಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮತ್ತಷ್ಟು ಓದಿ: ರಾಷ್ಟ್ರೀಯ ಹೆದ್ದಾರಿಯಲ್ಲಿ 3 ಲಾರಿಗಳು, 1 ಸ್ಲೀಪರ್ ಕೋಚ್ ಬಸ್, ಕಾರು ನಡುವೆ ಸರಣಿ ಅಪಘಾತ; ಹಲವರಿಗೆ ಗಾಯ

ಕಟ್ಟಡದ ಮೇಲಿಂದ ಆಯತಪ್ಪಿ‌ ಬಿದ್ದು ಕಾರ್ಮಿಕ ಸಾವು
ಕೋಲಾರ: ಕಟ್ಟಡದ ಮೇಲಿಂದ ಆಯತಪ್ಪಿ‌ ಬಿದ್ದು ಕಾರ್ಮಿಕ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆ ಬಂಗಾರಪೇಟೆಯ ಕರ್ನಾಟಕ ರಾಜ್ಯದ ಉಗ್ರಾಣ‌ ನಿಗಮದ ಕಟ್ಟಡದಲ್ಲಿ ನಡೆದಿದೆ. ಕೆಜಿಎಫ್​ನ ಮಾದಮಂಗಲ ನಿವಾಸಿ ನಾರಾಯಣಸ್ವಾಮಿ(35) ಮೃತ ವ್ಯಕ್ತಿ.

ಉಗ್ರಾಣದ ಕಟ್ಟಡ ದುರಸ್ತಿ ಕಾರ್ಯ ವೇಳೆ ದುರಂತ ಸಂಭವಿಸಿದೆ. ಶೀಟ್​​ಗಳನ್ನು ಬದಲಾಯಿಸುವ ಕೆಲಸವನ್ನು ನಾರಾಯಣಸ್ವಾಮಿ ಮಾಡುತ್ತಿದ್ದ. ಶೀಟ್ ಮುರಿದು ಕೆಳಗೆ ಬಿದ್ದು ನಾರಾಯಣಸ್ವಾಮಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಬಂಗಾರಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ರಾಯಚೂರಿನಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ: ಮೂವರು ದುರ್ಮರಣ
ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ವ್ಯಕ್ತಿಗಳು ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಘಟನೆ ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರು ಬಳಿ ನಡೆದಿದೆ. ಮೃತರು ರಾಯಚೂರು ಜಿಲ್ಲೆಯ ಮಾನ್ವಿ ಮೂಲದವರು ಎನ್ನಲಾಗುತ್ತಿದೆ. ಅಪಘಾತದ ಬಳಿಕ ಲಾರಿ ಚಾಲಕ ಪರಾರಿಯಾಗಿದಾನೆ. ಸ್ಥಳಕ್ಕೆ ಸಿರವಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

 

ಬೆಂಗಳೂರಿನ ಇತರೆ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ