ಚಿನ್ನಸ್ವಾಮಿ ಸ್ಟೇಡಿಯ ಬಳಿ ಟೀಂ ಬಸ್ಸಲ್ಲಿ ಕೊಹ್ಲಿಯನ್ನು ಕಂಡ ಅಭಿಮಾನಿಗಳು ಕೇಕೆ ಹಾಕಿದರು!
ವಿಶ್ವದ ಶ್ರೇಷ್ಠ ಬ್ಯಾಟರ್ ಗಳಲ್ಲಿ ಇಂಗ್ಲೆಂಡ್ ನ ಜೋ ರೂಟ್ ಮಾತ್ರ ಫಾರ್ಮ್ನಲ್ಲರುವಂತಿದೆ. ಇತ್ತಿಚಿಗಷ್ಟೇ ಬಾಂಗ್ಲಾದೇಶ ವಿರುದ್ಧ ನಡೆದ 2-ಪಂದ್ಯ ಟೆಸ್ಟ್ ಸರಣಿಯಲ್ಲಿ ಕೊಹ್ಲಿಯಿಂದ ಉಲ್ಲೇಖಾರ್ಹ ಪ್ರದರ್ಶನವೇನೂ ಬರಲಿಲ್ಲ. ಆದರೆ ರೂಟ್ ಪಾಕಿಸ್ತಾನ ವಿರುದ್ಧ ಮುಲ್ತಾನ್ ಟೆಸ್ಟ್ ಪಂದ್ಯದಲ್ಲಿ 262 ರನ್ ಬಾರಿಸಿದರು.
ಬೆಂಗಳೂರು: ಭಾರತ ಮತ್ತು ವಿಶ್ವದ ಅಗ್ರಮಾನ್ಯ ಬ್ಯಾಟರ್ ವಿರಾಟ್ ಕೊಹ್ಲಿಯ ಜನಪ್ರಿಯತೆ ಅವರ ಬ್ಯಾಟಿಂಗ್ ಫಾರ್ಮ್ ಮೇಲೆ ಡಿಪೆಂಡ್ ಆಗಿರಲ್ಲ. ಅವರು ರನ್ ಗಳಿಸದಿದ್ದರೂ ಅಷ್ಟೇ ಜನಪ್ರಿಯರು. ನ್ಯೂಜಿಲೆಂಡ್ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವವ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಕೊಹ್ಲಿ ಸೊನ್ನೆಗೆ ಔಟಾದರೂ ಪಂದ್ಯದ ಮೂರನೆ ದಿನವಾಗಿರುವ ಇಂದು ಟೀಂ ಬಸ್ಸಲ್ಲಿ ಅವರು ಸ್ಟೇಡಿಯಂಗೆ ಬಂದಾಗ ಮ್ಯಾಚ್ ವೀಕ್ಷಿಸಲು ಅಗಮಿಸಿರುವ ಜನ ಅವರನ್ನು ಕಂಡು ಕೊಹ್ಲಿ ಭಾಯ್ ಅಂತ ಕೇಕೆ ಹಾಕಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಭಾರತ-ನ್ಯೂಜಿಲೆಂಡ್ ಟೆಸ್ಟ್ ಪಂದ್ಯ: ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತಮುತ್ತ ಸಂಚಾರ ಮಾರ್ಪಾಡು
Latest Videos