ಬೆಂಗಳೂರು, (ನವೆಂಬರ್ 21): ಸತ್ತು ಹೋಗಿದ್ದೇನೆ ಎಂದು ಎಲ್ಲರನ್ನೂ ನಂಬಿಸಿ ಎರಡು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ರೌಡಿ(rowdy sheeter), ಕೊಲೆ ಆರೋಪಿಯನ್ನು ಬಂಧಿಸುವಲ್ಲಿ ಸಿಸಿಬಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನ (Bengaluru) ವೈಟ್ ಫೀಲ್ಡ್ ಪೊಲೀಸ್ ಠಾಣೆ ರೌಡಿಶೀಟರ್ ಆಗಿರುವ ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿ ಬಂಧಿತ ರೌಡಿ. ಈ ಮಲ್ಲಿ ಎರಡು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಆದ್ರೆ, ಪೊಲೀಸರಿಂದ ತಪ್ಪಿಸಿಕೊಳ್ಳಲು ಸತ್ತು ಹೋಗಿದ್ದೇನೆ ಎಂದು ನಂಬಿಸಿದ್ದ. ಅಲ್ಲದೇ ಕುಟುಂಬಸ್ಥರು ಸಹ ಮಲ್ಲಿ ಸತ್ತಿದ್ದಾನೆ ಎಂದು ದಾಖಲೆಗಳನ್ನು ಸಹ ತಯಾರಿಸಿದ್ದರು.
ಈ ಮಲ್ಲಿ ಕಾಡುಬೀಸನಹಳ್ಳಿ ಸೋಮನ ಡ್ರೈವರ್ ಕೊಲೆ ಪ್ರಕರಣದ ಆರೋಪಿಯಾಗಿದ್ದ. ಬಳಿಕ ರಾಜಾನುಕುಂಟೆಯಲ್ಲಿ ಇನ್ನೊಂದು ಕೊಲೆ ಕೇಸಿನಲ್ಲಿಯೂ ಆರೋಪಿಯಾಗಿದ್ದ. ಬಳಿಕ ಎರಡು ವರ್ಷಗಳಿಂದ ಈತ ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ. ಮನೆ ಬಳಿ ಪೊಲೀಸರು ವಿಚಾರಿಸಿದಾಗ ಅವನು ಸತ್ತು ಹೋಗಿದ್ದಾನೆ ಎಂದು ಕುಟುಂಬದವರು ಹೇಳಿದ್ದರು.
ಇದನ್ನೂ ಓದಿ: ಮಾತಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ; BBMP ಸಿಬ್ಬಂದಿಯನ್ನು ಕೊಂದ ಸ್ನೇಹಿತ ಅರೆಸ್ಟ್
ಇನ್ನು ಸಿಸಿಬಿ ಪೊಲಿಸರು ಮಲ್ಲಿಯ ಗೆಳೆಯರು, ಪರಿಚಿತರನ್ನು ವಿಚಾರಿಸಿದರೂ ಸತ್ತಿದ್ದಾನೆ ಎಂದು ಮಾಹಿತಿ ದೊರೆತಿತ್ತು. ಸತ್ತಿದ್ದಾನೆ ಅನ್ನುವುದಕ್ಕೆ ಬೇಕಾದ ದಾಖಲೆಗಳನ್ನು ಸಹ ಕುಟುಂಬ ರೆಡಿ ಮಾಡಿತ್ತು. ಅದರೂ ಸಹ ಅನುಮಾನ ಬಂದು ಸಿಸಿಬಿ ಪೊಲೀಸರು ತಲಾಶ್ ಮಾಡಿದ್ದರು. ಮಲ್ಲಿ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಿದ್ದರು. ಕೊನೆಗೆ ಊರೂರು ಸುತ್ತುತ್ತಾ ತಲೆಮರೆಸಿಕೊಂಡಿದ್ದ ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿ ಸಿಕ್ಕಿಬಿದ್ದಿದ್ದಾನೆ.
ಇನ್ನಷ್ಟು ಕ್ರೈಂ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ