ಬೆಂಗಳೂರಿನಲ್ಲಿ 23 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ; ವಿದೇಶಿ ಪೆಡ್ಲರ್ ಬಂಧನ

ಬೆಂಗಳೂರಿನಲ್ಲಿ ಸಿಸಿಬಿ ಭರ್ಜರಿ ಕಾರ್ಯಾಚರಣೆ ನಡೆಸಿ, 23 ಕೋಟಿ ರೂ. ಮೌಲ್ಯದ 11 ಕೆಜಿಗೂ ಹೆಚ್ಚು ಡ್ರಗ್ಸ್ ಜಪ್ತಿ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಮಾದಕವಸ್ತು ಮಾರಾಟ ಮಾಡುತ್ತಿದ್ದ ನೈಜೀರಿಯಾ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಈತ ದೆಹಲಿಯಿಂದ ಡ್ರಗ್ಸ್ ತರಿಸಿ, ಕರ್ನಾಟಕ, ಚೆನ್ನೈ, ಹೈದರಾಬಾದ್ ನಗರಗಳಿಗೆ ಪೂರೈಸುತ್ತಿದ್ದ ಎಂದು ತಿಳಿದುಬಂದಿದೆ.

ಬೆಂಗಳೂರಿನಲ್ಲಿ 23 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ; ವಿದೇಶಿ ಪೆಡ್ಲರ್ ಬಂಧನ
ಬೆಂಗಳೂರಿನಲ್ಲಿ 23 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ
Edited By:

Updated on: Nov 25, 2025 | 12:42 PM

ಬೆಂಗಳೂರು, ನವೆಂಬರ್ 25: ಬೆಂಗಳೂರು ನಗರದಲ್ಲಿ (Bengaluru) ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ ನಡೆಸಿದ ಭರ್ಜರಿ ದಾಳಿಯಲ್ಲಿ 23 ಕೋಟಿ ರೂ. ಮೌಲ್ಯದ ಡ್ರಗ್ಸ್  (Drugs seized) ಜಪ್ತಿ ಮಾಡಿದೆ. ಈ ಪ್ರಕರಣದಡಿಯಲ್ಲಿ ವಿದೇಶಿ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದ್ದು, 11 ಕೆಜಿಗೂ ಅಧಿಕ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.

ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರುತ್ತಿದ್ದ ವಿದೇಶಿ ಪ್ರಜೆ

ದಾಳಿಯ ವೇಳೆ 11.50 ಕೆಜಿ MDMA ಕ್ರಿಸ್ಟಲ್ ಮತ್ತು 1040 ಎಕ್ಸ್‌ಟಸ್ ಮಾತ್ರೆಗಳು ಪತ್ತೆಯಾಗಿದ್ದು, ನೈಜೀರಿಯಾ ಮೂಲದ ಎಜಿಕೆ ನೈಗೂ ಒಕಾಫಾರ್ (42) ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. 2017ರಲ್ಲಿ ಬ್ಯುಸಿನೆಸ್ ವಿಸಾದಡಿಯಲ್ಲಿ ಭಾರತಕ್ಕೆ ಬಂದಿದ್ದ ಈತ, ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ವಾಸವಿದ್ದ ಎಂಬುದು ತಿಳಿದು ಬಂದದೆ. ಆರೋಪಿಯು ದೆಹಲಿಯಿಂದ ಡ್ರಗ್ಸ್ ತರಿಸಿಕೊಂಡು ಮನೆಯಲ್ಲಿ ಸಂಗ್ರಹಿಸಿದ್ದಾನೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.

ಈತ ಕರ್ನಾಟಕದ ಜೊತೆಗೆ ಚೆನ್ನೈ ಮತ್ತು ಹೈದರಾಬಾದ್ ಸೇರಿ ಹಲವು ನಗರಗಳಲ್ಲಿ ಡ್ರಗ್ ಸಪ್ಲೈ ಮಾಡುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಇತರ ಪೆಡ್ಲರ್‌ಗಳ ಮೂಲಕ ಯುವಕರು ಹಾಗೂ ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದು, ಖಚಿತ ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆ ಮೂಲಕ ಅಂತರರಾಜ್ಯ ಡ್ರಗ್ ಮಾರಾಟದ ಮಹತ್ವದ ಸರಪಳಿ ಭಂಗವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ Bengaluru: ಬರೋಬ್ಬರಿ 7.80 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ; ಏನೇನೆಲ್ಲ ಜಪ್ತಿ?

ನಗರ ಪೊಲೀಸ್ ಆಯುಕ್ತ ಹೇಳಿದ್ದೇನು?

ಡ್ರಗ್ಸ್ ಪ್ರಕರಣಗಳ ಕುರಿತು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾತನಾಡಿದ್ದು, ಇನ್ನೇನು ಹೊಸ ವರ್ಷ ಆಚರಣೆ ಬರುತ್ತಿದೆ. ಹಾಗಾಗಿ ಡ್ರಗ್ಸ್ ಶೇಖರಣೆ ಮಾಡಿಟ್ಟುಂಡಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. ಡ್ರಗ್ಸ್ ಎಲ್ಲಿಂದ ತರುತ್ತಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ. ಈ ಕೇಸ್ನಲ್ಲಿ ದೆಹಲಿ ಸೇರಿದಂತೆ ಬೇರೆ ಬೇರ ಭಾಗದಿಂದ ಡ್ರಗ್ಸ್ ತರಲಾಗಿತ್ತು ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.